ಮಾತೃ ವಂದನಾ ಯೋಜನೆಯಲ್ಲಿ ಅರ್ಜಿ ಹಾಕಿದರೆ ಪ್ರತಿ ತಿಂಗಳು ಸರ್ಕಾರದ ಸಹಾಯಧನ ಎಷ್ಟು ಸಾವಿರ ಗೊತ್ತೆ.

 

 

 

 

ರಾಜ್ಯ ಸುದ್ದಿ: ‘ಗರ್ಭಿಣಿ ಸ್ತ್ರೀಯರಿಗೆ  3 ಸಾವಿರ, ಹೆರಿಗೆಯಾದ  ಬಳಿಕ , 2 ಸಾವಿರವನ್ನು ನನ್ನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿತ್ತು. ಅಗತ್ಯ ಆಹಾರ ಖರೀದಿಸಿ ಹಣ ಸಾಕಷ್ಟು ಅನುಕೂಲವಾಗಿದೆ.

– ‘ಮಾತೃವಂದನಾ’ ಯೋಜನೆಯ ಫಲಾನುಭವಿಗಳಲ್ಲಿ ಗರ್ಭಿಣಿಯರವ  ಮನದ ಮಾತು.

ಸರ್ಕಾರ ನೀಡಿದ ಹಣದಲ್ಲಿ  ಹಣ್ಣು, ಸೊಪ್ಪು ತರಕಾರಿ ಸೇರಿ ಪೌಷ್ಟಿಕ ಆಹಾರ ಖರೀದಿಸಿದೆ. ಹೆರಿಗೆಯ ಬಳಿಕ ಬಂದ ಹಣದಲ್ಲಿ ಶಿಶುವಿಗೆ ಪೂರಕ ಆಹಾರ, ಡೈಪರ್‌ ಖರೀದಿಸಿದೆ. ಗಂಡ  ಹಾಗೂ ತವರು ಮನೆಯವರ ಮೇಲೆ ಅವಲಂಬನೆಯಾಗದೆ ಬೇಕಾದ ಪರಿಸ್ಥಿತಿ  ಬರಲಿಲ್ಲ’ ಎಂದರು.

 

 

ತಾಯಂದಿರಲ್ಲಿರುವ ಅಪೌಷ್ಟಿಕತೆ ಹೋಗ ಲಾಡಿಸಲು ಆರಂಭಿಸಿರುವ ‘ಮಾತೃವಂದನಾ’ ಯೋಜನೆಯು ರಾಜ್ಯದಲ್ಲಿ ಇಂಥ ಸಕಾರಾತ್ಮಕ ಪರಿಣಾಮಗಳನ್ನು ಬೀರಿದೆ. ಗ್ರಾಮೀಣ ಪ್ರದೇಶಗಳಲ್ಲಿ ಗರ್ಭಿಣಿಯರ ನೋಂದಣಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿದ್ದು, ಆರಂಭದಿಂದಲೇ ಅವರ ಆರೋಗ್ಯದ ಮೇಲೆ ನಿಗಾ ವಹಿಸಲು ಸಾಧ್ಯವಾಗಿದೆ.

ಮಾತೃವಂದನಾ, ಪೋಷಣ್‌ ಅಭಿಯಾನ ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿರುವುದರಿಂದ ತಾಯಿ ಮತ್ತು ಶಿಶು ಮರಣ ಪ್ರಮಾಣವೂ ಇಳಿಮುಖಗೊಳಿಸಿದೆ..

‘ಮಾತೃವಂದನಾ ಯೋಜನೆಯು ಬಡ, ಮಧ್ಯಮ ವರ್ಗದ ಕುಟುಂಬದವರಿಗೆ ಹೆಚ್ಚಿನ ನೆರವು ನೀಡಿದೆ. ಈಗ ₹5 ಸಾವಿರ ನೀಡುತ್ತಿದ್ದು, ಮೊತ್ತವನ್ನು ಇನ್ನಷ್ಟು ಹೆಚ್ಚಿಸಬೇಕು’ ಎಂಬುದು ಜನರ ಅಭಿಪ್ರಾಯವಾಗಿದೆ.

[t4b-ticker]

You May Also Like

More From Author

+ There are no comments

Add yours