ಮಹಿಳೆಯರು ಎಲ್ಲಾ ಹಂತದಲ್ಲಿ ಮುಖ್ಯವಾಹಿನಿಗೆ ಬರಬೇಕು: ಶಾಸಕ ಟಿ.ರಘುಮೂರ್ತಿ

 

 

 

 

ಚಳ್ಳಕೆರೆ:  ಮಹಿಳೆಯರು ಎಲ್ಲಾ ಹಂತದಲ್ಲಿ ಮುಖ್ಯವಾಹಿನಿಗೆ ಬರಬೇಕು, ಸ್ವಾತಂತ್ರ್ಯ ಪೂರ್ವದಲ್ಲಿ ಕೂಡ ಸಮಾಜದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನಕ್ಕಾಗಿ ನಿರಂತರ ಹೋರಾಟ ನಡೆಯುತ್ತಲೆ ಇವೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.

ಚಳ್ಳಕೆರೆ ನಗರದ ವೀರಶೈವ ಸಮುದಾಯದ ಭವನದಲ್ಲಿ ತಾಲೂಕು ಆಡಳಿತ, ಮಹಿಳಾ ಮತ್ತುಮಕ್ಕಳ ಅಭಿವೃದ್ಧಿಇಲಾಖೆ , ನಗರಸಭೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ‌ ಮಾತನಾಡಿದರು, ಇತಿಹಾಸವನ್ನು‌ ನೋಡುತ್ತಾ ಹೋದರೆ ತುಳಿತಕ್ಕೆ ಒಳಗಾದ ದೀನ‌ ದಲಿತರ ಕುಟುಂಬಗಳಲ್ಲಿ ಹೆಚ್ಚು ಬಾಲ್ಯವಿವಾಹಗಳು ನಡೆಯುತಿವೆ , ಕಾರಣ ಅನಕ್ಷರತೆ, ಮಹಿಳೆಯರ ಮೇಲೆ ದೌರ್ಜನ್ಯ , ಶಿಕ್ಷಣ ವಂಚಿತ ಕುಟುಂಬ, ಈಗೇ ಕಾನೂನು ಕಟ್ಟಲೆಗಳು ಇದ್ದರು ಕೂಡ ಮಹಿಳೆಯರ ಮೇಲೆ ಶೋಷಣೆ ನಡೆಯುತ್ತಿರುವುದು ವಿಷಾದನೀಯ,

ಮಗಳನ್ನು ಯಾವ ರೀತಿಯಲ್ಲಿ ಕಾಣುತ್ತೇವೆ ಅದೇ ರೀತಿಯಲ್ಲಿ ಸೋಸೆಯನ್ನು ಕೂಡ ಕಾಣಬೇಕು, ದಿನ ನಿತ್ಯ ನಡೆಯುವ ದೌರ್ಜನ್ಯ ಗಳು ಕಡಿಮೆ ಯಾಗಬೇಕು ಎಂದರು.

ತಹಶೀಲ್ದಾರ್ ಎನ್ ರಘುಮೂರ್ತಿ ಮಾತನಾಡಿ, ಮಹಿಳೆ ಯಾವುದೇ ಕೆಲಸದಲ್ಲಿ ಕ್ರೀಯಾ ಶೀಲವಾಗಿರುತ್ತಾಳೆ, ಮಹಿಳೆ ಸಮಾಜದಲ್ಲಿ ಅಗ್ರಸ್ಥಾನ ಪಡೆಯಬೇಕು, ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತ ಸಮಾಜದ ಮುಖ್ಯ ವಾಹಿನಿಗೆ ಬರಬೇಕು, ಈಡೀ ಸಮಾಜವನ್ನು ಮಹಿಳೆ ಜಾಗೃತಿ ಗೊಳಿಸಬೇಕು,
ಮಹಿಳೆಯರಿಗೆ ಸ್ವಾಭಿಮಾನದ ಸ್ಥಾನವನ್ನು ಅಂಬೇಡ್ಕರ್ ಬರೆದ ಸಂವಿಧಾನದಿಂದ ಮಾತ್ರ ಕಾಣಲು ಸಾಧ್ಯ, ಮಹಿಳೆಯರು ಉನ್ನತ ಶಿಕ್ಷಣ ಪಡೆಯಬೇಕು, ಮಹಿಳೆ ಅಬಲೆ ಅಲ್ಲ ಅವಳು ಸಬಲೆ, ಮಾತೃತ್ವ ಪ್ರಧಾನವಾದ ದೇಶವಾಗಬೇಕು ಮಹಿಳೆಯರು ಸಹಕಾರ, ಸಹೃದಯಿ, ಅರ್ಥವನ್ನು ಹೊಂದಿದ ಮಹಾತಾಯಿ ಎಂದರು.

 

 

ವಕೀಲರಾದ ಮಧುಮತಿ‌ ಮಾತನಾಡಿ, ಪುರುಷ ಪ್ರಧಾನವಾದ ಈ ದೇಶದಲ್ಲಿ ಬಾಲ್ಯವಿವಾಹ ಎಗ್ಗಿಲ್ಲದೆ ನಡೆಯುತ್ತಿದೆ ಆದರೆ ಕಾನೂನು ಎಷ್ಟೆ ಕಠಿಣವಾದರೂ ಕೂಡ ಸಮಾಜದಲ್ಲಿ ಶೋಷಣೆ ಎಂಬುದು ನಿಲ್ಲಬೇಕು ಆದ್ದರಿಂದ ಮಹಿಳೆಯರು ‌ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ವಿಶ್ವ ಮಹಿಳಾ ದಿನಾಚರಣೆಗೆ ಧೈರ್ಯ ತುಂಬುವ ಮೂಲಕ ಈ ವರ್ಷದ ದೈಯ ವಾಖ್ಯ ನಾಳೆಯ ಸುಸ್ಥಿರ ಕ್ಕಾಗಿ ಇಂದಿನ‌ ಲಿಂಗ ಸಮಾನತೆ ಎಂಬುದು‌ ಪಾಲಿಸಬೇಕು ಎಂದರು.

ಉಪನ್ಯಾಸ ನೀಡಿದ ಓಬಯ್ಯ ಮಾತನಾಡಿ,
ಮಹಿಳೆ ಭಾರತೀಯ ಪ್ರಾಚೀನ ಕಾಲದಿಂದ ಇಂದಿನ ವರೆಗೆ ಭಾರತದ ಅನಿಷ್ಟ ಪದ್ಧತಿಗಳ ಬಾಲ್ಯವಿವಾಹ, ಸತಿಸಹಗಮನ ಪದ್ದತಿ ಈಗೇ ಹಲವು ಪಿಡುಗುಗಳು ದೊಡ್ಡ ಪಿಡುಗಾಗಿ ಪರಿಣಮಿಸಿ ಇಂದು ಮಹಿಳೆ ಅರ್ಥಿಕವಾಗಿ ಪರಾವಲಂಬಿಯಾಗಿದ್ದಾಳೆ.
ರಾಜಕೀಯವಾಗಿ ಮಹಿಳೆ ಬರಬೇಕು
ಪುರಷ ಪ್ರಧಾನ ರಾಷ್ಟ್ರದಲ್ಲಿ ಮೊಟ್ಟಮೊದಲ ಸಿಡಿದೆದ್ದ ಮಹಿಳೆ ಅಕ್ಕಮಹದೇವಿಯರು.ಪ್ರಪಂಚದಲ್ಲಿ ಮೊದಲು ದಣಿಸಿದವರು ಅಕ್ಕ‌ಮಹದೇವಿ ಎನ್ನಬಹುದು

ನಗರಸಭೆ ಅಧ್ಯಕ್ಷೆ ಸುಮಕ್ಕ ಆಂಜನೇಯ ಮಾತನಾಡಿ,
ಅಂಬೇಡ್ಕರ್ ರವರಿಂದ ಮಹಿಳೆಯರಿಗೆ ಶೂದ್ರರಿಗೆ ಹಕ್ಕು ಭಾಧ್ಯತೆ ಕೊಟ್ಟ ಜೋತಿ ಬಾಪುಲೆ , ಸಾವಿತ್ರಿ ಬಾಯಿ ಇವರು ಸ್ಪೂರ್ತಿ, ಕೇಂದ್ರ ಹಾಗೂ ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ನೀಡಿದೆ ಎಂದರು.

ಉಪಾಧ್ಯಕ್ಷೆ ಮಂಜುಳಾ ಪ್ರಸನ್ನ ಕುಮಾರ್ ಮಾತನಾಡಿ, ಆರ್ಥಿಕತೆ , ಬಡತನ ಶಿಕ್ಷಣ ಎಲ್ಲಿ ಇರೊದಿಲ್ಲವೋ ಅಲ್ಲಿ ಬಾಲ್ಯವಿವಾಹಗಳು ನಡೆಯುತ್ತಿವೆ. ಅದನ್ನು ತಡೆಗಟ್ಟಲು ಪೂರಕ ವ್ಯವಸ್ಥೆ ಕಲ್ಪಿಸಬೇಕು. ಮಹಿಳೆಯರಿಗೆ ಶಿಕ್ಷಣ ಕೊಡಿಸಬೇಕು, ಉನ್ನತ ವ್ಯಾಸಂಗಕ್ಕೆ ಪ್ರೇರೆಪಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಕೃಷ್ಣಪ್ಪ ತಾಲ್ಲೂಕು ಆರೋಗ್ಯ ಅಧಿಕಾರಿ ಪ್ರೇಮಸುಧಾ ಸಹಾಯಕಾರಿ ತಿಪ್ಪೇಸ್ವಾಮಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಧ್ಯಕ್ಷ ಆರ್ ಮಾರುತೇಶ್, ಎಡ್ಲೂ ಅಧಿಕಾರಿ ಕಾವ್ಯ, ಶಿಕ್ಷಕಿ ಸಣ್ಣ ಸೂರಮ್ಮ, ನೇತ್ರಾ, ವಿಜಯಲಕ್ಷ್ಮಿ, ಜ್ಯೋತಿ, ಇತರರು ಇದ್ದರು.

[t4b-ticker]

You May Also Like

More From Author

+ There are no comments

Add yours