ಚಳ್ಳಕೆರೆ:ಚಿತ್ರದುರ್ಗ- ದಾವಣಗೆರೆ ವಿಧಾನ ಪರಿಷತ್ತಿನ ಚುನಾವಣೆ – 2021 ರ ಹಿನ್ನಲೆಯಲ್ಲಿ ಎಲ್ಲಾ ಕಡೆಗಳಲ್ಲಿ ಮತಗಟ್ಟೆ ಮಾಡುವುದು ಸಾಮಾನ್ಯ ಆದರೆ ಚಳ್ಳಕೆರೆ ತಾಲ್ಲೂಕಿನ ಎರಡು ಮತಗಟ್ಟೆಗಳನ್ನು ವರ್ಣರಂಜಿತ ಮತಗಟ್ಟೆ ಎಂಬ ಪರಿಕಲ್ಪನೆಯಲ್ಲಿ ಮಾಡಲಾಗಿದೆ. ಮತಗಟ್ಟೆಗೆ ಮದುವೆಯ ಮನೆಯಂತೆ ಸಿಂಗಾರಗೊಳ್ಳಿಸಿದ್ದು ಹಸಿರು ತೋರಣ, ಬಲೂನ್ ಗಳು, ಬಾಳೆ ಕಂದುಗಳು,ಕಲರ್ ಸೀರೆಗಳನ್ನು ಬಾಗಿಲಿಗೆ ಸಿಂಗರಿಸಿದ್ದು ಗ್ರಾಮ ಪಂಚಾಯತಿ ಸದಸ್ಯರಿಗೆ ಮದುವೆ ಮನೆಗೆ ಹೋದಂತಹ ಅನುಭವ ಆಗುವಂತೆ ಸಿದ್ದಪಡಿಸಲಾಗಿದೆ. ಈ ಎರಡು ಮತಗಟ್ಟೆಗಳನ್ನು ತಾಲೂಕಿನ ಎನ್ ದೇವರಹಳ್ಳಿ ಮತ್ತು ಎನ್ ಮಹದೇವಪುರ ಗ್ರಾಮ ಪಂಚಾಯತಿ ಮತಗಟ್ಟೆಗಳನ್ನು ಆಕರ್ಷಕವಾಗಿ ಮಾರ್ಪಡಿಸಲಾಗಿದೆ, ತಾಲೂಕು ಆಡಳಿತದಿಂದ ಇದೂಂದು ವಿನೂತನ ಪ್ರಯೋಗವಾಗಿದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ನ್ಯೂಸ್19ಕನ್ನಡಕ್ಕೆ ತಿಳಿಸಿದ್ದಾರೆ.
[t4b-ticker]
+ There are no comments
Add yours