ಬಿಎಂಜಿಹೆಚ್‌ಎಸ್ ಶಾಲೆಯ ನೂತನ ಕಟ್ಟಡ ಕಾಮಗಾರಿ ಪರಿಶೀಲಿಸಿದ ಶಾಸಕ.ಟಿ.ರಘುಮೂರ್ತಿ.

 

 

 

 

ಚಳ್ಳಕೆರೆ, ಆ.೧೧: ಬಿಎಂಜಿಹೆಚ್‌ಎಸ್ ಶಾಲಾ ಆವರಣದಲ್ಲಿ ನೂತನವಾಗಿ ನಿರ್ಮಾವಾಗುತ್ತಿರುವ ಶಾಲಾ ಕಟ್ಟಡ ಕಾಮಗಾರಿ ಸ್ಥಳಕ್ಕೆ ಶಾಸಕ ಟಿ. ರಘುಮೂರ್ತಿ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಶಾಸಕ ಟಿ. ರಘುಮೂರ್ತಿ ನೂತನ ಕಟ್ಟಡದ ನಕ್ಷೆಯನ್ನು ವಿಕ್ಷಣೆ ಮಾಡಿ ಕಟ್ಟಡ ವಿನ್ಯಾಸವು ಗುಣಮಟ್ಟದಿಂದ ಇರಬೇಕು ಎಂದು ಇಂಜಿನೀಯರ್ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ನಂತರ ಕಟ್ಟಡದ ಮೇಲು ಮಹಡಿ ಹತ್ತಿ ವೀಕ್ಷಣೆ ಮಾಡಿದ ಶಾಸಕರು ಕಾಂಕ್ರೀಟ್ ಹಾಕುವಾಗ ಜಾಸ್ತಿ ನೀರು ಹಾಕಬೇಡಿ, ನೀರು ಕಡಿಮೆಮಾಡಬೇಕು. ಕಾಂಕ್ರೀಟ್ ಕಟ್ಟಿಯಾಗಿದ್ದರೆ ಕಟ್ಟಡವು ಗುಣಮಟ್ಟದಿಂದ ಇರುತ್ತದೆ ಎಂದು ಗುತ್ತಿಗೆದಾರರಿಗೆ ತಿಳಿಸಿದರು.
ಈ ವೇಳೆ ನಗರಸಭೆ ಅಧ್ಯಕ್ಷೆ ಸಿ.ಬಿ.ಜಯಲಕ್ಷಿö್ಮÃ, ಪ್ರಾಜೆಕ್ಟ್ ಇಂಜಿನಿಯರ್ ಸಿದ್ದೇಶ್, ನಗರಸಭೆ ಸದಸ್ಯ ವೈ. ಪ್ರಕಾಶ್, ಮುಖಂಡರಾದ ಕೃಷ್ಣಮೂರ್ತಿ, ಬೋರನಾಯಕ ಸೇರಿದಂತೆ ಕಟ್ಟಡ ಗುತ್ತಿಗೆದಾರರು ಇದ್ದರು.

 

 

[t4b-ticker]

You May Also Like

More From Author

+ There are no comments

Add yours