ಬಸವಣ್ಣನವರ ತತ್ವ ಆದರ್ಶಗಳು ಇಂದಿಗೂ ಪ್ರಸ್ತುತ:ಎಂಲ್ಸಿ ಕೆ.ಎಸ್.ನವೀನ್

 

 

 

 

ಚಳ್ಳಕೆರೆ_01 ಬಸವಣ್ಣನವರ ತತ್ವ ಆದರ್ಶಗಳು ಇಂದಿಗೂ ಪ್ರಸ್ತುತ. ಆಧುನಿಕ ಸಮಾಜದಲ್ಲಿ ಬಸವಣ್ಣನವರ ವಚನಗಳು ಸಮಾಜದ‌ ಅನಿಷ್ಟ ಪದ್ದತಿಗಳನ್ನು ದೂರ ಮಾಡುವಲ್ಲಿ‌ ಯಶಸ್ವಿಯಾದವು ಎಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.
ಅವರು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಸವಜಯಂತಿ ಪೂರ್ವಯೋಜಿತ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. 12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆ ಸಾರುವ ದೃಷ್ಟಿಯಿಂದ ಅನುಭವಮಂಟಪವನ್ನು ಪ್ರಾರಂಭಿಸಿ ಅಲ್ಲಿ ಎಲ್ಲಾ ಜಾತಿಯ ಸ್ವಾಮೀಜಿಗಳನ್ನು ಒಗ್ಗೂಡಿಸಿ ಸರ್ವರಿಗೂ ಸಮಾನತೆ ಸಾರುವ ಉದ್ದೇಶದಿಂದ ವಚನಗಳ ರಚನೆಗೆ ಮುಂದಾದವರು. ಅವರ ಆದರ್ಶಗಳನ್ನು ದೇಶಕ್ಕೆ ಬಿತ್ತರಿಸುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಬಸವ ಜಯಂತಿಯನ್ನು ಸರ್ಕಾರ ಕಾರ್ಯಕ್ರಮವನ್ನಾಗಿ ರೂಪಿಸಿದರು ಎಂದರು.
ವಿಜಯಪುರದ ವನಶ್ರೀ ಸಂಸ್ಥಾನಮಠದ ಡಾ. ಬಸವಕುಮಾರ ಪ್ರಭು ಸ್ವಾಮೀಜಿಗಳು ಆಶೀರ್ವಚನ ನೀಡಿ, ಸಮಾಜದಲ್ಲಿ ಅಡಗಿದ್ದ ಮೌಢ್ಯ, ಕಂದಾಚಾರ,ಅಸಮಾನತೆಗಳ ವಿರುದ್ಧ ಹೋರಾಡಿದ ಮಹನೀಯರು. ಅವರ ಆದರ್ಶಗಳು ಇಂದಿಗೂ ಪ್ರಸ್ತುತ. ಬಸವಣ್ಣನವರು ಕೇವಲ ಒಂದು ಸಮಾಜಕ್ಕೆ ಮಾತ್ರ ಸೀಮಿತವಾಗದೆ ಎಲ್ಲಾ ಸಮಾಜಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಹೆಚ್ಚಿನ ಪಾತ್ರ ವಹಿಸಿದ್ದರು. 12 ನೇ ಶತಮಾನದ ವಚನಗಳ ಶತಮಾನ ವಾಗಿ ರೂಪುಗೊಂಡಿದೆ ಎಂದರು. ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಕೆ. ಬಸವರಾಜ್, ಅಧ್ಯಕ್ಷ ಕೆ.ಸಿ. ನಾಗರಾಜ್, ಸತೀಶ್ ಬಾಬು, ಜಯಪ್ರಕಾಶ್, ವಿಶುಕುಮಾರ್, ಅರವಿಂದ್, ಶಿವಪುತ್ರಪ್ಪ,ಗಂಗಣ್ಣ, ವಿಜಯೇಂದ್ರ,ಈಶ್ವರಪ್ಪ ಮುಂತಾದವರು ಇದ್ದರು.

 

 

[t4b-ticker]

You May Also Like

More From Author

+ There are no comments

Add yours