ಪ್ರಸವ ಪೂರ್ವ ಮತ್ತು ಪ್ರಸವಾನಂತರ ಪೌಷ್ಟಿಕಾಹಾರ ಸೇವನೆ ಅತ್ಯಗತ್ಯ : ಡಾ.ಬಿ.ವಿ.ಗಿರೀಶ್

 

 

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಮೇ.06:
ರಕ್ತಹೀನತೆ ಅನೇಮಿಯಾ ಸರಿದೂಗಿಸಲು ಪ್ರಸವ ಪೂರ್ವ ಮತ್ತು ಪ್ರಸವಾನಂತರ ಪೌಷ್ಟಿಕಾಹಾರ ಸೇವನೆ ಅಗತ್ಯವಿದೆ ಎಂದು ಚಿತ್ರದುರ್ಗ ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಪಂಡರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಜಾನುಕೊಂಡ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತಾಲ್ಲೂಕು ಆರೋಗ್ಯ ಮತ್ತು ಪಂಡರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ದೈನಂದಿನ ಲಸಿಕಾ ಮತ್ತು ಕೊರೊನಾ ಲಸಿಕಾ ಅಭಿಯಾನ ಕಾರ್ಯಕ್ರದಲ್ಲಿ ಮಾತನಾಡಿದರು.
ಕೊರೊನಾ ನಾಲ್ಕನೇ ಅಲೆ ನಿಯಂತ್ರಿಸಲು ಲಸಿಕೆ ಪಡೆದುಕೊಳ್ಳವುದೇ ಸೂಕ್ತ ಮಾರ್ಗ ಎಲ್ಲರೂ ತಪ್ಪದೇ ಲಸಿಕೆ ಹಾಕಿಸಿಕೊಳ್ಳಿ ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ರಕ್ತಹೀನತೆಯಿಂದ ಹಲವಾರು ರೋಗಗಳನ್ನು ಬರುತ್ತದೆ. ಸ್ಥಳೀಯವಾಗಿ ದೊರೆಯುವ ಸೊಪ್ಪು, ಮೊಳಕೆಕಾಳು, ಹಣ್ಣು, ತರಕಾರಿ, ಹಾಲು, ಮೊಟ್ಟೆ ಸೇವನೆ ಮಾಡಬೇಕು. ಕಾಲ ಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯ ಇಲಾಖೆ ನೀಡುವ ರಕ್ತ ಪುಷ್ಠಿ ಮಾತ್ರೆಗಳನ್ನು ನಿಯಮಿತವಾಗಿ ಸೇವನೆ ಮಾಡಿ ರಕ್ತ ಹೀನತೆಯಾಗುವುದನ್ನು ತಪ್ಪಿಸುವುದಂದ ತಾಯಿ ಮರಣ ಶಿಶು ಮರಣ ತಡೆಗಟ್ಟಬಹುದು ಎಂದರು.
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಸರಿಯಾದ ಸಮಯಕ್ಕೆ ಗುರುತಿಸಿ ಲಾಲನೆ ಪಾಲನೆ ಮಾಡುವುದು ಎಲ್ಲಾ ಪೋಷಕರ ಜವಾಬ್ದಾರಿಯುತವಾದ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಾಮಾಜಿಕ ವರ್ತನೆ ಬದಲಾವಣೆ ಸಂಯೋಜಕ ಸುನೀಲ್  ಮಾತನಾಡಿ,  ಅಪೌಷ್ಟಿಕತೆಯ ಮಕ್ಕಳ ಆರೈಕೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಪೌಷ್ಟಿಕ ಪುನಃಶ್ಚೇತನ ಕೇಂದ್ರ ತೆÀರೆಯಲಾಗಿದೆ. ಮಕ್ಕಳ ತಜ್ಞರು, ಆಹಾರ ತಜ್ಞರು 14 ದಿನ ನಿಮ್ಮ ಮಕ್ಕಳ ಆರೈಕೆ ಹಾಗೂ ಉಚಿತವಾಗಿ ಚಿಕಿತ್ಸೆ ಮಾರ್ಗದರ್ಶನ ನೀಡಲಾಗುತ್ತಿದೆ. ಬೆಳವಣಿಗೆ ಕುಂಠಿತ ಮಕ್ಕಳನ್ನು ನೋಂದಾಯಿಸಿ ಸೌಲಭ್ಯ ಪಡೆಯಬಹುದು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಹೆಣ್ಣು ಮಕ್ಕಳು ಕೇವಲ ಹೆರಿಗೆ ಮಾಡಿಸಿಕೊಳ್ಳುವ ಸಾಧನಗಳಲ್ಲ ಅವರೂ ಪುರುಷರಷ್ಠೇ ಸಮಾನರು, ಚಿಕ್ಕ ಕುಟುಂಬದ ಆದರ್ಶವನ್ನು ಪಾಲಿಸಿ ಕುಟುಂಬ ಯೋಜನೆಗಳ ಅನುμÁ್ಠನಕ್ಕೆ ಪುರುಷರ ಸಹ ಭಾಗಿತ್ವ ಈ ದಿನಗಳಲ್ಲಿ ಅವಶ್ಯವಿದೆ. ಕುಟುಂಬ ಯೋಜನೆಗಳ ಅನುμÁ್ಠನದಿಂದ ಕುಟುಂಬ ಕ್ಷೇಮವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್, ಕಿರಿಯ ಆರೋಗ್ಯ ಸುರಕ್ಷತಾಧಿಕಾರಿ ಕೃಷ್ಣಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಆಶಾ, ರವಿಕುಮಾರ್, ಅಂಗನವಾಡಿ ಕಾರ್ಯಕರ್ತೆ ಆಶಾ, ಗರ್ಭಿಣಿಯರು, ಬಾಣಂತಿಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

 

 

[t4b-ticker]

You May Also Like

More From Author

+ There are no comments

Add yours