ಪಾಳೇಗಾರರ ಭದ್ರರಾಗಿದ್ದಾರೆ ಎನ್ನುವುದಕ್ಕೆ ಅವರ ನಿರ್ಮಿಸಿದ ಭದ್ರವಾದ ಕೋಟೆಯೇ ಸಾಕ್ಷಿ: ಡಾ.ಬಂಜಗೆರೆ ಜಯಪ್ರಕಾಶ್

 

 

 

 

ಚಿತ್ರದುರ್ಗ ಜ. ೨೪
ಬ್ರಿಟಿಷರ ಕಾಲದಲ್ಲಿ ಭೂ ಕಂದಾಯ ಪ್ರಾರಂಭವಾಗಿ ಜನತೆ ಸಂಕಷ್ಟಕ್ಕೆ ಈಡಾದರು, ಇದರಿಂದ ಬ್ರಟಿಷರ ವಿರುದ್ದ ಪ್ರಾರಂಭವಾಗಿದ್ದೇ ದುರ್ಗದ ಬೇಡರ್ದಂಗೆಯಾಗಿದೆ ಎಂದು ವಿರ್ಮಶಕರು, ಸಾಹಿತಿ, ಚಿಂತಕರಾದ ಡಾ.ಬಂಜಗೆರೆ ಜಯಪ್ರಕಾಶ್ ತಿಳಿಸಿದರು.
ಚಿತ್ರದುರ್ಗ ನಗರದ ಐಶ್ವರ್ಯ ಫೋರ್ಟ್ ಸಭಾಂಗಣದಲ್ಲಿ ಸೃಷ್ಟಿಸಾಗರ ಪ್ರಕಾಶನದವತಿಯಿಂದ ಸಾಹಿತಿ ಬಿ.ಎಲ್.ವೇಣುರವರ ದುರ್ಗದ ಬೇಡರ್ದಂಗೆ ಚಾರಿತ್ರಿಕ ಕಾದಂಬರಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಈ ಕಾದಂಬರಿಯೂ ವಿಶೇಷವಾದ ವಸ್ತುವನ್ನು ಹೊಂದಿದೆ. ಪಾಳೇಗಾರರ ಭದ್ರರಾಗಿದ್ದಾರೆ ಎನ್ನುವುದಕ್ಕೆ ಅವರು ನಿರ್ಮಾಣದ ಭದ್ರವಾದ ಕೋಟೆಯೇ ಸಾಕ್ಷಿಯಾಗಿದೆ. ಪಾಳೆಗಾರರು ಜಾನುವಾರು,ಕೃಷಿ ಮೂಲಭೂತವಾಗಿತ್ತು. ಬ್ರಟಿಷರ ಕಾಲಕ್ಕೂ ಮುಂಚೆ ಕಂದಾಯ ವಸ್ತುವಿನ ರೂಪದಲ್ಲಿತ್ತು ಬ್ರಟಿಷರು ಆಡಳಿತ ಪ್ರಾರಂಭವಾದ ಮೇಲೆ ಭೂ ಕಂದಾಯ ಪ್ರಾರಂಭವಾಗಿತ್ತು, ರೈತ ತನ್ನ ಬಳಿ ಇರುವ ಭೂಮಿಗೆ ಪೂರ್ಣ ಪ್ರಮಾಣದಲ್ಲಿ ಕಂದಾಯವನ್ನು ಕಟ್ಟಬೇಕಿತ್ತು, ಇದರಿಂದ ಬ್ರಿಟಿಷರ ವಿರುದ್ದ ದಂಗೆಯನ್ನು ಪ್ರಾರಂಭಿಸಿದರು. ಇದೇ ಬೇಡರ್ದಂಗೆಯಾಗಿ ಪರಿಣಿಮಿಸಿತು ಎಂದರು.
ಬೇಡರ್ದದಂಗೆ ರೈತರ ಪರವಾಗಿ ಹೋರಾಟವನ್ನು ನಡೆಸುವುದರ ಮೂಲಕ ಬ್ರಿಟಿಷರ ವಿರುದ್ದ ೭ ಜನ ಕಿಡಿ ಕಾರಿದರು. ಇದ್ದಲ್ಲದೆ ಬ್ರಿಟಿಷರ ಆಡಳಿತ ನೀತಿಯ ವಿರುದ್ದವೂ ಸಹಾ ಹೋರಾಟವನ್ನು ಮಾಡಿದ್ದಾರೆ. ರೈತ ಮತ್ತು ಯೋಧ ಬಂಡಾಯಗಳ ಮೂಲಕ ಕಾದಂಬರಿ ರೂಪುಗೂಂಡಿದೆ. ಓದುಗರನ್ನು ಪೂರ್ಣ ಪ್ರಮಾಣದಲ್ಲಿ ಓದಿಸಿಕೊಂಡು ಹೋಗುತ್ತದೆ. ಬ್ರಿಟಿಷರ ವಿರುದ್ದ ಹೋರಾಟ ೧೮೫೭ಕ್ಕಿಂತಲೂ ಮುಂಚೆಯಿAದಲೂ ಪ್ರಾರಂಭವಾಗಿದೆ ಎಂದು ಈ ಕಾದಂಬರಿಯಿAದ ತಿಳಿಯುತ್ತದೆ ಎಂದು ಬಂಜಗೆರೆ ತಿಳಿಸಿದರು.
ವೇಣುರವರು ೭೫ ಆದರೂ ಸಹಾ ಬರೆಯುವ ಹವ್ಯಾಸವನ್ನು ಬಿಟ್ಟಿಲ್ಲ, ತಮ್ಮ ಕಾದಂಬರಿಯಲ್ಲಿ ಹೂಸ ತನವನ್ನು ಇಟ್ಟಿರುತ್ತಾರೆ. ರೂಚಕವಾದ ಕಾದಂಬರಿಯನ್ನು ಓದುಗರಿಗೆ ನೀಡುತ್ತಾರೆ. ಉತ್ತಮವಾದ ಪಾತ್ರಗಳನ್ನು ತಮ್ಮ ಕಾದಂಬರಿಯಲ್ಲಿ ವೇಣುರವರು ನಿರೂಪಿಸಿದ್ದಾರೆ. ಇತಿಹಾಸ ಕಾದಂಬರಿಗಳನ್ನು ರಚನೆ ಮಾಡುವುದರ ಮೂಲಕ ಚಿತ್ರದುರ್ಗದ ಹೆಸರನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಬಂಡಾಯ ಲೇಖಕರಾದರೂ ಸಹಾ ಅದರ ಬಗ್ಗೆ ಹೆಚ್ಚು ಬರೆಯದೇ ಎಲ್ಲವನ್ನು ಚನ್ನಾಗಿ ತೆಗೆದುಕೊಂಡು ಹೋಗಿದ್ದಾರೆ ಎಂದರು.

 

 

ಕೃತಿಯನ್ನು ಕುರಿತು ಮಾತನಾಡಿದ ವಿಮರ್ಶಕ, ಸಾಹಿತಿ ಆನಂದಮೂರ್ತಿ ಸಾಮರಸ್ಯವನ್ನು ಬೆಸೆಯುವ ರೀತಿಯಲ್ಲಿ ಕಾದಂಬರಿಯನ್ನು ರಚಿಸಲಾಗಿದೆ. ವಿಭಜಿಸಲ್ಪಡುವ ಸಮಾಜವನ್ನು ಧಾರ್ಮಿಕವಾಗಿ ಸಮಾಜಿಕವಾಗಿ ಸರಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಕಾದಂಬರಿ ಅಂಚಿ ಆಚೆ ಇರುವವರ ಸಾಹಿತ್ಯ ಇದಾಗಿದೆ. ಇತಿಹಾಸ ಕಾದಂಬರಿಕಾರರ ಕೊಂಡಿ ಕಳಚುತ್ತಿದೆ, ವೇಣು ಇತಿಹಾಸಕಾರರ ಕೂನೆಯ ಕೊಂಡಿಯಾಗಿದ್ದಾರೆ. ಅವರ ಕಾದಂಬರಿಯಲ್ಲಿ ಗತಕಾಲದ ಇತಿಹಾಸ, ಸಮಕಾಲೀನ ಇತಿಹಾಸವನ್ನು ತಮ್ಮ ಕೃತಿಯಲ್ಲಿ ಒಳಗೊಂಡಿದೆ ಎಂದರು.
ಕಾದAಬರಿಯಲ್ಲಿ ಬರೀ ಬ್ರಿಟಿಷರಿಂದ ಮಾತ್ರ ಬಿಡಿಗಡೆ ಹೊಂದದೆ ಪೋರೋಹಿತ ಶಾಹಿಯಿಂದಲೂ ಸಹಾ ಬಿಡುಗಡೆಯನ್ನು ಹೊಂದುವ ರೀತಿಯಲ್ಲಿ ಹೋರಾಟ ಸಾಗಿದೆ. ತಳ ಸಮುದಾಯದ ಸಾಮೂಹಿಕ ವಿಮೋಚನೆಯ ಕೃತಿ ಇದಾಗಿದೆ ಎಂದ ಅವರು, ವೇಣುರವರು ಇತಿಹಾಸವನ್ನು ಸಾಮಾನ್ಯ ಜನರ ಕಣ್ಣುಗಳಿಂದ ನೋಡಿ ಬರೆದಿದ್ದಾರೆ. ಕೃತಿಯಲ್ಲಿ ಹೇಣ್ಣಿಗೆ ಉತ್ತಮವಾದ ಗೌರವವನ್ನು ನೀಡಿದ್ದಾರೆ ಎಂದು ಆನಂದ ಮೂರ್ತಿ ತಿಳಿಸಿದರು.
ಕೃತಿಕಾರರಾರದ ಬಿ.ಎಲ್.ವೇಣುರವರು ಮಾತನಾಡಿ, ಬ್ರಿಷಟರ ವಿರುದ್ದ ೧೮೪೯ರಲ್ಲಿಯೇ ಭಂಡಾಯ ವಿರುದ್ದ ಹುಡುಗರು ದಂಗೆ ಎಂದಿದ್ದಾರೆ. ಆದರೆ ಇದರ ಬಗ್ಗೆ ಅಷ್ಟಾಗಿ ಮಾಹಿತಿ ಲಭ್ಯವಾಗಿ ಇಲ್ಲದಿದ್ದರಿಂದ ಅವರ ಹೋರಾಟ ಅಷ್ಟಾಗಿ ಬೆಳಕಿಗೆ ಬಂದಿಲ್ಲ, ಈ ಕೃತಿಗೆ ಹೆಸರಿಡಲು ಹಲವಾರು ಜನರು ಸಲಹೆ ನೀಡಿದ್ದರು. ದುಗಧ ದಂಗೆ ಎಂದು ಇಡಲು ಸೂಚಿಸಿದ್ದರು ಅದರೆ ದುರ್ಗದ ಜನತೆ ಯಾವುದಕ್ಕೂ ಸಹಾ ದಂಗೆಯನ್ನು ಏಳಿರಲಿಲ್ಲ, ನೀರು ವಾರಗಟ್ಟಲೆ ಬಾರದಿದ್ದರೂ ಸಹಾ ಸುಮ್ಮನಿದ್ದರು, ರಸ್ತೆಗಳು ಹಾಳಾಗಿದ್ದರು ಸಹಾ ಅದರ ಬಗ್ಗೆ ತೆಲೆ ಕೆಡಿಸಿಕೊಂಡಿರಲಿಲ್ಲ ಬೀದಿ ದೀಪ ಕೆಟ್ಟಿ ತಿಂಗಳಾದರೂ ಸಹಾ ಯಾರು ಸಹಾ ದೂರು ಕೂಟ್ಟಿರಲಿಲ್ಲ ಇಷ್ಟೇಲ್ಲಾ ಆದರೂ ಸಹಾ ಸುಮ್ಮನಿದ್ದಾರೆ ಇದು ಹೇಗೆ ದುರ್ಗದ ದಂಗೆ ಎಂದು ಹೆಸರಿಡಲಿ ಎಂದು ಪ್ರಶ್ನಿಸಿದರು.
ಚಿತ್ರದುರ್ಗಕ್ಕೆ ಬರಬೇಕಿದ್ದ ಮೆಡಿಕಲ್ ಕಾಲೇಜು ಬಂದಿಲ್ಲ, ಇಂಜಿನಿಯರಿAಗ್ ಕಾಲೇಜು ಬಾರಲಿಲ್ಲ, ರೈಲ್ವೆ ಮಾರ್ಗ ಇದುವರೆವಿಗೂ ಪೂರ್ಣವಾಗಿಲ್ಲ ಇದಕ್ಕೆ ಎಲ್ಲಾ ಪಟ್ಟಾಭದ್ರ ಹಿತಾಸಕ್ತಿಗಳು ಕೈವಾಡವಾಗಿದೆ. ಜನ ಪ್ರತಿನಿಧಿಗಳ ಹಿತಾಸಕ್ತಿ ಇಲ್ಲದಾಗಿದೆ. ಕೋಟೆ ಬೀಳುತ್ತಿದೆ ಅದರೆ ಬಗ್ಗೆ ಯಾರಿಗೂ ಸಃಆ ಆಸಕ್ತಿ ಇಲ್ಲ, ಅಧಿಕಾರಿಗಳು ಸಹಾ ಸುಮ್ಮನಿದ್ದಾರೆ. ಭರವಣ್ಣ ನಾಯಕ ಸಮಾಧಿ ಹಾಳಾಗುತ್ತಿದ್ದರೇ ಅದರ ನಿರ್ಮಾಣದ ಬಗ್ಗೆ ಯಾರೂ ಸಹಾ ಮುಂದಾಗಿಲ್ಲ, ಚಿತ್ರದುರ್ಗ ಬರ ಪೀಡಿತ ಪ್ರದೇಶವಾಗಿದ್ದು, ಅಧಿಕಾರಿಗಳಿಗೆ ರಾಜಕಾರಣಿಗಳಿಗೆ ಕಮೀಷನ್ ದಂಧೆಯಾಗಿದೆ. ಜನತೆಯೂ ಸಹಾ ನೆಲ.ಜಲ ಇತಿಹಾಸದ ಬಗ್ಗೆ ಅಭೀಮಾನ ಇಲ್ಲದಾಗಿದೆ. ಎಲ್ಲರಲ್ಲೂ ಸಹಾ ಪ್ರರ್ಶನಿಸುವಂತ ಧ್ವನಿ ಇರಬೇಕಿದೆ ಎಂದು ವೇಣು ರವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಸಿ.ರಘುನAದನ್, ಗೀತಾಂಜಲಿ ಪುಸ್ತಕ ಪ್ರಕಾಶನದ ಪ್ರಕಾಶಕರಾದ ಜಿಬಿಟಿ ಮೋಹನ್ ಕುಮಾರ್ ಭಾಗವಹಿಸಿದ್ದರು.
ಶ್ರೀಮತಿ ಕೋಕಿಲ ರುದ್ರಮೂರ್ತಿ ಪ್ರಾರ್ಥಿಸಿದರೆ, ಸೃಷ್ಟಿಸಾಗರ ಪ್ರಕಾಶನದ ವೇಘ ಗಂಗಧಾರ ನಾಯ್ಕ್ ಸ್ವಾಗತಿಸಿದರು, ಗೋಪಾಲಸ್ವಾಮಿ ವಂದಿಸಿದರು, ಹುರಳಿ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು.

[t4b-ticker]

You May Also Like

More From Author

+ There are no comments

Add yours