ಪರಿಶಿಷ್ಟ ಪಂಗಡ ಸಮುದಾಯದವರಿಗೆ  ವಾಹನ ತರಬೇತಿಗೆ ಅರ್ಜಿ ಆಹ್ವಾನ

 

 

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ).ಏಪ್ರಿಲ್ 07: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಹಯೋಗದೊಂದಿಗೆ 2021-22 ಸಾಲಿಗೆ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳಾ ಹಾಗೂ ಪುರುಷ ಅರ್ಹ ಅಭ್ಯರ್ಥಿಗಳಿಗೆ ಉಚಿತವಾಗಿ ಲಘು (ಕಾರು,ಜೀಪ್) ಹಾಗೂ ಭಾರಿ ವಾಹನ(ಬಸ್ಸು) ಚಾಲನಾ ತರಬೇತಿ ಜೊತೆಗೆ, ವಾಹನ ಪರವಾನಗಿ ನೀಡುವ ಕಾರ್ಯಕ್ರಮ ಆಯೋಜಿಸಲಾಗಿದೆ.
ಕನಿಷ್ಠ 18 ವರ್ಷ ಪೂರ್ಣಗೊಂಡ ಅಭ್ಯರ್ಥಿಗಳು, ಜನ್ಮದಿನಾಂಕ ಧೃಡೀಕರಣಕ್ಕಾಗಿ ಜನನ ಪ್ರಮಾಣಪತ್ರ, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಶಾಲಾ ವರ್ಗಾವಣಾ ಪ್ರಮಾಣ ಪತ್ರ (ಟಿ.ಸಿ) ನೋಟರಿ ಪ್ರಮಾಣ ಪತ್ರಗಳಲ್ಲಿ ಒಂದನ್ನು, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಾಸ್ ಪೋರ್ಟ್ ಅಳತೆಯ 5 ಭಾವಚಿತ್ರಗಳೊಂದಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.  ಭಾರಿ ವಾಹನ ಚಾಲನಾ ತರಬೇತಿ ಪಡೆಯಲು ಇಚ್ಛಿಸುವವರು ಲಘು ವಾಹನ ಅನುಜ್ಞಾಪತ್ರ ಪಡೆದು ಒಂದು ವರ್ಷ ಪೂರೈಸಿರಬೇಕು. ತರಬೇತಿಗೆ ಆಯ್ಕೆಯಾದವರಿಗೆ ಬೆಂಗಳೂರಿನಲ್ಲಿ 30 ದಿನ ವಸತಿ ಮತ್ತು ಊಟೋಪಚಾರದೊಂದಿಗೆ ತರಬೇತಿ ನೀಡಲಾಗುವುದು. ಏಪ್ರಿಲ್ 20 ಅರ್ಜಿ ಸಲ್ಲಿಸಲು ಕಡೆಯ ದಿನ. ಅಭ್ಯರ್ಥಿಗಳು ಆಫ್‍ಲೈನ್ ಮತ್ತು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ತಿತಿತಿ./ಞಚಿಡಿಟಿಚಿಣಚಿಞಚಿ.gov.iಟಿ/ಞmvsಣಜಛಿಟ, ಚಿತ್ರದುರ್ಗದ ಸರಸ್ವತಿಪುರಂ ಮುಖ್ಯ ರಸ್ತೆಯ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಸಂಪರ್ಕಿಸಬಹುದು ಎಂದು ಎಸ್.ಟಿ. ಅಭಿವೃದ್ಧಿ ನಿಗಮದ ವ್ಯವಸ್ಥಾಪಕರು ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours