ಹಿರಿಯೂರು:ಕೋವಿಡ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಹಿರಿಯೂರು ನಗರವನ್ನು ದಿನನಿತ್ಯ ಸ್ವಚ್ಛಗೊಳಿಸಿ ಸುಂದರವಾಗಿಡುವ ನಗರಸಭೆ ಪೌರಕಾರ್ಮಿಕರು ಹಾಗೂ ಸಿಬ್ಬಂದಿಗಳಿಗೆ ಹಿಂದುಳಿದ ವರ್ಗಗಳ ಮುಖಂಡರಾದ ಡಿ ಟಿ ಶ್ರೀನಿವಾಸ್ ರವರು ಇಂದು ಊಟದ ವ್ಯವಸ್ಥೆ ಮಾಡಿ, ತಾವೇ ಅವರಿಗೆ ಊಟ ಬಡಿಸಿ ತಾವೂ ಅವರೊಟ್ಟಿಗೆ ಊಟ ಮಾಡುವ ಮೂಲಕ ಪೌರಕಾರ್ಮಿಕರಿಗೆ ಕೋವಿಡ್ ಸಂದರ್ಭದಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು. ತಾವು ಕೆಲಸ ಮಾಡುವ ಸಂದರ್ಭದಲ್ಲಿ ಜಾಗರೂಕತೆಯಿಂದ ನಿಯಮಗಳನ್ನು ಪಾಲಿಸಲು ಮನವಿ ಮಾಡಿದರು. ಈ ಸಂದರ್ಭದಲ್ಲಿ ನಮ್ಮ ಶ್ರಮ ಗುರುತಿಸಿ ನಮ್ಮ ಮೇಲೆ ಪ್ರೀತಿ ತೋರಿದ ಡಿ ಟಿ ಶ್ರೀನಿವಾಸ್ ರವರಿಗೆ ಪೌರಕಾರ್ಮಿಕರು ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಪಲ್ಲವ ಅಪೂರ್ವ ಚಿರಂಜೀವಿ ಸಣ್ಣಪ್ಪ ಬಾಲಕೃಷ್ಣ ಸರವಣ ರಾಜಣ್ಣ ಘಾಟ್ ರವಿ ನಗರಸಭೆ ಆಯುಕ್ತೆ ಲೀಲಾವತಿ ಮುಖಂಡರಾದ ಕಬಡ್ಡಿ ಶ್ರೀನಿವಾಸ ಹರೀಶ್ ಪೌರಕಾರ್ಮಿಕ ಸಂಘದ ಅಧ್ಯಕ್ಷರಾದ ದುರುಗೇಶ್ ಮುಂತಾದವರು ಉಪಸ್ಥಿತರಿದ್ದರು.
[t4b-ticker]
+ There are no comments
Add yours