ನಗರದಲ್ಲಿ ಕೋವಿಡ್ ಹರಡದಂತೆ ಹೊರ ಜಿಲ್ಲೆಯವರ ಮೇಲೆ ನಿಗ ಹಿಡಿ:ಶಾಸಕ ಟಿ.ರಘುಮೂರ್ತಿ

 

 

 

 

ವರದಿ: ಚಳ್ಳಕೆರೆ ವಿರೇಶ್.
ಚಳ್ಳಕೆರೆ:ನಗರದ ಪ್ರತಿಯೊಂದು ವಾರ್ಡ್ ಗಳಲ್ಲೂ ಹೊರ ಜಿಲ್ಲೆ, ರಾಜ್ಯದಿಂದ ಬಂದವರ ಬಗ್ಗೆ ಮಾಹಿತಿ ಪಡೆದು ಅವರ ಪೂರ್ಣ ಮಾಹಿತಿ ಸಂಗ್ರಹಿಸುವ ಮೂಲಕ ನಗರದಲ್ಲಿ ಕೋವಿಡ್ ಹರದಂತೆ ತಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ 1,2,3 ಮತ್ತು 4 ವಾರ್ಡ್ ವ್ಯಾಪ್ತಿಯಲ್ಲಿ ನಡೆದ ಕೋವಿಡ್ ಸಭೆಯಲ್ಲಿ ಆರೋಗ್ಯ ಇಲಾಖೆಯ ಮಾಹಿತಿ ಪಡೆದು ಮಾತನಾಡಿದರು. ನಗರದಲ್ಲಿ ಕೋವಿಡ್ ಕಾರ್ಯ ಉತ್ತಮವಾಗಿ ನಡೆಸಬೇಕು. ಪ್ರತಿಯೊಬ್ಬ ಜನಪ್ರತಿನಿಗೆ ಮಾಹಿತಿ ನೀಡಿ, ಅವರನ್ನು ಜತೆಯಲ್ಲಿ ಇರಿಸಿಕೊಂಡು ಕಾರ್ಯ ನಿರ್ವಹಿಸಬೇಕು. ಆರೋಗ್ಯ ಇಲಾಖೆಯೂ ಸಹ ಸಾರ್ವಜನಿಕರು, ಜನಪ್ರತಿನಿದಿ ಹೇಳುವ ಸೂಚನೆಗಳನ್ನು ಪಾಲಿಸಬೇಕು. ಮನೆಯಲ್ಲಿ ಹೋಂ ಕ್ವಾರಂಟೈನ್ ಮಾಡದೆ ಕೋವಿಡ್ ಸೆಂಟರ್ ಗೆ ದಾಖಲಿಸುವಂತೆ ತಿಳಿ ಹೇಳಬೇಕು. ಪ್ರತಿಯೊಬ್ಬರು ಸಹಕಾರದೊಂದಿಗೆ ಕಾರ್ಯನಿರ್ವಹಿಸುಬೇಕು ಎಂದರು.
ನಗರಸಭಾ ಆಯುಕ್ತ ಪಿ. ಪಾಲಯ್ಯ ನಗರಸಭಾ ಅಧ್ಯಕ್ಷೆ ಸಿ.ಬಿ.ಜಯಲಕ್ಷ್ಮಿ ಉಪಾಧ್ಯಕ್ಷೆ ಜೈತುಂಬಿ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶಗೌಡ ನಗರಸಭಾ ಸದಸ್ಯರಾದ ಪ್ರಕಾಶ್, ವಿರೂಪಾಕ್ಷ, ಮಲ್ಲಿಕಾರ್ಜುನ, ವೀರಭದ್ರಪ್ಪ ಮುಖಂಡರಾದ ವೀರೇಶ್, ಗಿರಿಯಪ್ಪ, ಕೃಷ್ಣಮೂರ್ತಿ ಪ್ರಸನ್ನಕುಮಾರ,ದಳವಾಯಿ ಮೂರ್ತಿ ಮುಂತಾದವರು ಇದ್ದರು.

 

 

[t4b-ticker]

You May Also Like

More From Author

+ There are no comments

Add yours