ಡಿಡಿಎಲ್‍ಆರ್ ಎಂ.ಎಸ್.ಕೃಷ್ಣಪ್ರಸಾದ್‍ಗೆ ಬೀಳ್ಕೊಡುಗೆ

 

 

 

 

ಚಿತ್ರದುರ್ಗ,ಜನವರಿ04:
ಚಿತ್ರದುರ್ಗ ಜಿಲ್ಲೆಯ ಭೂದಾಖಲೆಗಳ ಇಲಾಖೆ ಉಪನಿರ್ದೇಶಕರು ಹಾಗೂ ಪದನಿಮಿತ್ತ ತಾಂತ್ರಿಕ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಡಿಡಿಎಲ್‍ಆರ್ ಎಂ.ಎಸ್.ಕೃಷ್ಣಪ್ರಸಾದ್ ಅವರು ಇಲಾಖೆ ಬದಲಾವಣೆ ನಿಮಿತ್ತ ವರ್ಗಾವಣೆಯಾದ ಹಿನ್ನಲೆಯಲ್ಲಿ ಮಂಗಳವಾರ ಹೋಟೆಲ್ ದುರ್ಗದ ಸಿರಿಯಲ್ಲಿ ಇಲಾಖೆ ವತಿಯಿಂದ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.
ಎಂ.ಎಸ್. ಕೃಷ್ಣಪ್ರಸಾದ್ ಅವರು ಕಳೆದ ಎರಡುವರೆ ವರ್ಷಗಳಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಡಿಡಿಎಲ್‍ಆರ್ ಆಗಿ ಸೇವೆಸಲ್ಲಿಸುತ್ತಿದ್ದರು. 1998ರ ಕೆಎಎಸ್ ಬ್ಯಾಚ್‍ನ ಅಧಿಕಾರಿಯಾಗಿದ್ದು, ಇತ್ತೀಚಿಗೆ ಆ ಬ್ಯಾಚ್‍ನ ಪಟ್ಟಿಯ ಪರಿಷ್ಕರಣೆಯ ನಂತರ ಸಹಕಾರ ಇಲಾಖೆಗೆ ಇವರಿಗೆ ಹುದ್ದೆ ಹಂಚಿಕೆಯಾಗಿದ್ದು, ಅದರನ್ವಯ ಭೂದಾಖಲೆಗಳ ಇಲಾಖೆಯಿಂದ ಸಹಕಾರ ಇಲಾಖೆಗೆ ವರ್ಗಾವಣೆಗೊಂಡಿರುತ್ತಾರೆ.
ಸನ್ಮಾನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಭಾಗವಹಿಸಿ ಸನ್ಮಾನಿಸಿ ಮಾತನಾಡಿ, ಡಿಡಿಎಲ್‍ಆರ್ ಕೃಷ್ಣಪ್ರಸಾದ್ ಸರ್ವೇ ಇಲಾಖೆ ಹಾಗೂ ಜಿಲ್ಲೆಗೆ ಒಂದು ಆಸ್ತಿಯಾಗಿದ್ದರು. ಅವರ ಸರಳತೆ, ಸಜ್ಜನಿಕೆ ಎಲ್ಲ ಅಧಿಕಾರಿಗಳಿಗೂ ಮಾದರಿಯಾಗಿದೆ. ಇವರು ಹಾಕಿಕೊಟ್ಟಂತಹ ದಾರಿಯಲ್ಲಿಯೇ ಸರ್ವೇ ಇಲಾಖೆ ಮತ್ತು ಸಿಬ್ಬಂದಿಗಳು ಕೆಲಸ ನಿರ್ವಹಿಸಿ ಹೆಸರು ಗಳಿಸಬೇಕು. ಇಲ್ಲಿಯವರೆಗೆ ರಾಜ್ಯ ಶ್ರೇಯಾಂಕದಲ್ಲಿ ಜಿಲ್ಲೆ ಸದಾ ಐದರೊಳಗಿನ ಸ್ಥಾನದಲ್ಲಿರುತ್ತಿತ್ತು. ಅದನ್ನೇ ಮುಂದುವರೆಸಬೇಕು ಎಂದು ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಸತೀಶ್‍ರೆಡ್ಡಿ, ಜಿಲ್ಲಾ ವಾರ್ತಾಧಿಕಾರಿ ಬಿ.ಧನಂಜಯ ಸೇರಿದಂತೆ ಸರ್ವೇ ಇಲಾಖೆಯ ಸಿಬ್ಬಂದಿಗಳು ಇದ್ದರು.

 

 

[t4b-ticker]

You May Also Like

More From Author

+ There are no comments

Add yours