ಜುಲೈ31ರವರೆಗೆ ಉದ್ಯೋಗ ಖಾತ್ರಿ ಜಾಬ್ ಕಾರ್ಡ್ ಪರಿಶೀಲನಾ ಅಭಿಯಾನ

 

 

 

 

ಚಿತ್ರದುರ್ಗ,ಜುಲೈ17:
ಚಿತ್ರದುರ್ಗ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ  ಜಾಬ್ ಕಾರ್ಡ್ ಪರಿಶೀಲನಾ ಅಭಿಯಾನವನ್ನು ಜುಲೈ31ರವರೆಗೆ ಹಮ್ಮಿಕೊಳ್ಳಲಾಗಿದೆ.
ಅಭಿಯಾನದಲ್ಲಿ ಹೊಸ ಜಾಬ್ ಕಾರ್ಡ್ ಪಡೆಯಲು ಹಾಗೂ ಮರಣ ಹೊಂದಿರುವ, ಮದುವೆಯಾಗಿ ಬೇರೆ ಊರುಗಳಿಗೆ ಹೋದ ಫಲಾನುಭವಿಗಳನ್ನು ತೆಗೆದು ಹಾಕುವುದು, ಕುಟುಂಬದ ಹೊಸ ಸದಸ್ಯರ ಹೆಸರು (18ವರ್ಷ ತುಂಬಿದ ವಯಸ್ಕರಿಗೆ) ಸೇರ್ಪಡೆಗೊಳಿಸುವುದು, ಆಧಾರ ಜೋಡಣೆ, ವೈಯಕ್ತಿಕ ಖಾತೆ ಸಂಖ್ಯೆ ಜೋಡಣೆಯ ಪರಿಶೀಲನೆಯನ್ನು ಮಾಡಲಾಗುವುದು. ಅರ್ಹ ಫಲಾನುಭವಿಗಳು ಹಾಗೂ ಸಾರ್ವಜನಿಕರು ಇದರ ಸದುಯೋಗಪಡಿಸಿಕೊಳ್ಳಲು ತಿಳಿಸಿದೆ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ “ಮಹಿಳೆಯರು ಭಾಗವಹಿಸುವಿಕೆ” ಹೆಚ್ಚಿಸಲು 2ನೇ ಹಂತದ “ಮಹಿಳಾ ಕಾಯಕೋತ್ಸವ”ವನ್ನು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಿಳೆಯರು ನರೇಗಾ ಯೋಜನೆಯ ಕೆಲಸದಲ್ಲಿ ಭಾಗವಹಿಸುವಿಕೆ ಕಡಿಮೆ ಇದೆಯೋ ಆ ಗ್ರಾಮ ಪಂಚಾಯತಿಗಳಲ್ಲಿ ಮಹಿಳಾ ಕಾಯಕೋತ್ಸವ ಅಭಿಯಾನವನ್ನು ಮಾಡಲಾಗುತ್ತಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನರೇಗಾ ಕೆಲಸಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ನಂದಿನಿ ದೇವಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ

 

 

[t4b-ticker]

You May Also Like

More From Author

+ There are no comments

Add yours