ಜೀತಪದ್ಧತಿಯ ಪ್ರಕರಣಗಳು ಇನ್ನು ಅಲ್ಲಲ್ಲಿ ಜಾಲ್ತಿಯಲ್ಲಿರುವುದು ವಿಷಾದನೀಯ: ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ:  ಭಾರತ ದೇಶ ಇಂದು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದರೂ ಕೂಡ ದೇಶದ ಅಲ್ಲಲ್ಲಿ ಜೀತಪದ್ಧತಿಯ ಪ್ರಕರಣಗಳು ಕಂಡುಬರುತ್ತಿರುವುದು ತುಂಬ ವಿಷಾದನೀಯ ಸಂಗತಿ ಎಂದು ತಹಸೀಲ್ದಾರ್ ಎನ್.ರಘುಮೂರ್ತಿ ಹೇಳಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಜೀತ ಪದ್ಧತಿ ನಿರ್ಮೂಲನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 

 

ಇದು ಪಾಶ್ಚಾತ್ಯ ರೀತಿಯ ಜೀತ ಪದ್ಧತಿಯ ಭೂಮಾಲೀಕ ಹಾಗೂ ಬೇಸಾಯಗಾರನ ಸಂಬಂಧವನ್ನು ಕ್ರಮಪಡಿಸುವ ಊಳಿಗಮಾನ್ಯಯುಗದ ಒಂದು ಪದ್ಧತಿ ಇದು ಚೀನ, ಈಜಿಪ್ಟ್‌, ಮಧ್ಯಯುಗದ ಯೂರೋಪ್, ಜಪಾನ್, ರಷ್ಯ ಮುಂತಾದ ದೇಶಗಳಲ್ಲಿ ಪ್ರಚಲಿತವಾಗಿತ್ತು. ಇದು ಒಂದೊಂದು ಪ್ರದೇಶದಲ್ಲಿ ಒಂದೊಂದು ಮಾದರಿಯಾಗಿತ್ತು. ಇದರ ಮುಖ್ಯ ಲಕ್ಷಣಗಳು ಎಲ್ಲೆಡೆಯಲ್ಲಿಯೂ ಏಕರೀತಿಯಾಗಿದ್ದವು. ಪಡೆದ ಸಾಲಕ್ಕೆ ಪ್ರತಿಯಾಗಿಯೋ ಅನ್ಯ ಜೀವನೋಪಾಯವಿಲ್ಲದೆ.  ಶ್ರೀಮಂತನ ಮನೆಯ ಆಳಾಗಿ ದುಡಿಯುವ ಪದ್ಧತಿ ಭಾರತದಲ್ಲಿ  ಈಗಲೂ ಇದೆ. ಇದು ಪಾಶ್ಚಾತ್ಯ ರೀತಿಯ ಜೀತ ಪದ್ಧತಿಯಲ್ಲ. ಇದೂ ಜೀತಾಗಾರಿಕೆ ಜಾರಿಯಲ್ಲಿದೆ.  ಮಧ್ಯಯುಗದ ಯೂರೋಪಿನಲ್ಲಿ ಭೂಮಿಯೆಲ್ಲವೂ  ಉಳಿದ ಭಾಗವನ್ನು ಹಲವಾರು ಜೀತಗಾರರು ಪ್ರಭುವಿನಿಂದ ಪಡೆದು ಸಾಗುವಳಿ ಮಾಡುತ್ತಿದ್ದರು. ಇವರು ತಮ್ಮ ಹಿಡುವಳಿಯ ಜೊತೆಗೆ ಪ್ರಭುವಿನ ಭೂಮಿಯನ್ನು ಸಾಗುವಳಿ ಮಾಡಬೇಕಾಗಿತ್ತು. ಆದರೆ ಕಾಲ ಬದಲಾದಂತೆಲ್ಲ ಜೀತ  ಪದ್ಧತಿಯು ಸಹ ಕೊನೆಗಾಣುತ್ತದೆ. ನಗರದಲ್ಲಾಗಲಿ ಗ್ರಾಮೀಣ ಪ್ರದೇಶದಲ್ಲಾಗಲಿ ಜೀತಪದ್ದತಿ ಕಾಣಿಸಿದ್ದೆಯಾದಲ್ಲಿ ಕ್ರಮ ಕೈಗೊಳ್ಳಾಗುವುದು ಎಂದರು.

ಪೋಲಿಸ್ ಇನ್ಸ್ ಪೆಕ್ಟರ್ ಜೆ .ಎಸ್. ತಿಪ್ಪೇಸ್ವಾಮಿ ಮಾತನಾಡಿ ಜೀತ ಪದ್ದತಿ ನಿರ್ಮಾಲನೆಗೆ ಬುದ್ದಿವಂತ ಸಾರ್ವಜನಿಕ ಹಾಗೂ ನಾಗರೀಕರು ಸಹ ಇಲಾಖೆ ಜತೆಗೆ  ಜೀತ ಪದ್ದತಿ ನಿರ್ಮೂಲನೆ ಸಹಕಾರ ಮಾಡಬೇಕು ಇತ್ತಿಚಿನ ದಿನಗಳಲ್ಲಿ ಅಂಗಡಿ ಹೋಟೆಲ್ ಹಾಗೂ ಇಟ್ಟಿಗೆ ಭಟ್ಟಿಗಳಲ್ಲಿ ಈ ಜೀತ ಪದ್ದತಿ ಇರಬಹುದು  ಇದು ಬೆಳಕಿಗೆ ಬಂದರೆ ಅಂತಹವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದರು .ಈ ಸಮಯದಲ್ಲಿ ನಗರಸಭೆ ಅಧ್ಯಕ್ಷರಾದ ಸುಮಕ್ಕ ಅಂಜನಪ್ಪ, ನಗರಸಭೆ ಪೌರಯುಕ್ತೆ ಟಿ.ಲೀಲಾವತಿ, ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

[t4b-ticker]

You May Also Like

More From Author

+ There are no comments

Add yours