ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಗೋಡೆ ಕುಸಿದು ಸ್ಥಳದಲೇ 3 ಸಾವು,

 

 

 

 

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಾದ್ಯಂತ    ಸತತವಾಗಿ  ಒಂದು ವಾರದಿಂದ  ಸುರಿಯುತ್ತಿರುವ ತುಂತುರು ಮಳೆಗೆ ಮನೆಗಳ ಗೋಡೆ ಕುಸಿದು ಮೂರು ಜನ  ನಾನಾ ಕಡೆಮೃತಪಟ್ಟಿರುವ   ಘಟನೆಗಳು ನಾಯಕನಹಟ್ಟಿ ಹಾಗೂ ಅಬ್ಬಿನಹೊಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿವೆ.

ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಲಲ ಗುಡಿಸಿಲಿನ ಮೇಲೆ ಅಂಗನವಾಡಿ ಗೋಡೆ ಕುಸಿದು ಬಿದ್ದು ಪತಿ ಹಾಗೂ ಪತ್ನಿ ಮಲಗಿದ್ದ ಸ್ಥಳದಲ್ಲೇ ಕೊನೆಯುಸಿರೆಳೆದರು.

ಪತಿ ಕಂಪಳೇಶಪ್ಪ (45) ಹಾಗೂ ಪತ್ನಿ ತಿಪ್ಪಮ್ಮ(38) ವರ್ಷ ಮೃತಪಟ್ಟಿದ್ದು, ಪುತ್ರ ಅರುಣ್ ಕುಮಾರ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಂಗನವಾಡಿ ಪಕ್ಕದಲ್ಲೇ ಗುಡಿಸಲಿನಲ್ಲಿ ವಾಸಿಸುತ್ತಿದ್ದ ದಂಪತಿ ಮೇಲೆ ಮಳೆಗೆ ಒದ್ದೆಯಾಗಿದ್ದ ಅಂಗನವಾಡಿ ಗೋಡೆ ಕುಸಿದು ಬಿದ್ದು ಮೃತಪಟಿರುವುದಕ್ಕೆ ನಾಯಕನಹಟ್ಟಿ ಜನತೆ ಮರುಗಿದ್ದಾರೆ. ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

 

ಬ್ಯಾಡರಹಳ್ಳಿಯಲ್ಲಿ ಗೋಡೆ ಕುಸಿದು ಮಹಿಳೆ ಸಾವು:

ಇನ್ನೂ ಹಿರಿಯೂರು ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಮನೆಯ ಗೋಡೆ ಕುಸಿದು ತ್ರಿವೇಣಿ(24 ವ) ಎಂಬ ಮಹಿಳೆ ಮೃತಪಟಿದ್ದಾರೆ.

ಬ್ಯಾಡರಹಳ್ಳಿ ಕೃಷ್ಣಮೂರ್ತಿ ಎಂಬುವವರ ಪತ್ನಿ ತ್ರಿವೇಣಿ ಮಲಗಿದ್ದ ವೇಳೆ ಏಕಾಏಕಿ ಗೋಡೆ ಕುಸಿದು ಮರಣ ಹೊಂದಿದ್ದಾರೆ. ಸ್ಥಳಕ್ಕೆ ಅಬ್ಬಿನಹೊಳೆ ಪಿಎಸ್ಐ ಪರಶುರಾಮ ಲಮಾಣಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

 

[t4b-ticker]

You May Also Like

More From Author

+ There are no comments

Add yours