ಚಿತ್ರದುರ್ಗ : ವಿಧಾನ ಪರಿಷತ್ ಚುನಾವಣಾ ಕಾವು ಏರುತ್ತಲೇ 4 ಜನ ಬಿಜೆಪಿ ವಿಧಾನ ಪರಿಷತ್ ಆಕಾಂಕ್ಷಿಗಳಲ್ಲಿ ಕೆ.ಎಸ್. ನವೀನ್ ಟಿಕೆಟ್ ಪಡೆದುಕೊಂಡ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸದ್ಯ ರಾಜ್ಯ ಕಾರ್ಯದರ್ಶಿ ಆಗಿರುವ ನವೀನ್ ಅವರು ಕಳೆದ ಎರಡು ಬಾರಿ ಚಿತ್ರದುರ್ಗ-ದಾವಣಗೆರೆ ವಿಧಾನ ಪರಿಷತ್ ಚುನಾವಣೆಯಲ್ಲಿ ಪರಭಾವಗೊಂಡಿದ್ದರು. ಆದರು ಸಹ ಯಡಿಯೂರಪ್ಪ ಅವರ ಜೊತೆಯಲ್ಲಿ ಸಂಘ ಪರಿವಾರದ ಹಿನ್ನೆಲೆ ಹೊಂದಿರುವುದರಿಂದ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಎರಡನೇ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕೂದಲ ಎಳೆಯ ಅಂತರದಲ್ಲಿ ಸೋಲು ಅನುಭವಿಸಿದ್ದು ಈ ಬಾರಿ ಗೆಲುವಿನ ರುಚಿ ನೋಡಲೇಬೇಕು ಎಂಬ ಚಲದಿಂದ ಸ್ವರ್ಧೆಗೆ ಸಜ್ಜಾಗಿದ್ದಾರೆ.
[t4b-ticker]
+ There are no comments
Add yours