ಗ್ರಾಮೀಣ ಭಾಗದ ಸಮಗ್ರ ಅಭಿವೃದ್ದಿಗೆ ಬದ್ದ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ: ಗ್ರಾಮೀಣ ಭಾಗದ ರಸ್ತೆ, ಆಸ್ಪತ್ರೆ, ಶಿಕ್ಷಣ, ಅಂತರ್ಜಲ ಸೇರಿ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ತಾಲೂಕಿನ ಕಾಸವರಹಟ್ಟಿ, ಗೊನೂರು,ಹಂಪಯ್ಯನಮಾಳಿಗೆ, ಹಳೇ ದ್ಯಾಮನಹಳ್ಳಿ, ಹಳೆ‌ಕಲ್ಲಹಳ್ಳಿ ಗ್ರಾಮಗಳ ಆಸ್ಪತ್ರೆಯ ನೂತನ ಸಿ.ಸಿ.ರಸ್ತೆ ಮತ್ತು ತಡೆಗೋಡೆ ಉದ್ಘಾಟನೆ ಮತ್ತು ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಹಂಪಯ್ಯನಮಾಳಿಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಇಂದು ಸುಮಾರು 4 ಕೋಟಿ ವೆಚ್ಚದ ಕಾಮಗಾರಿಗೆ ಅನುದಾನ ನೀಡಿದ್ದೇನೆ. ಗೊನೂರು ಗ್ರಾಮಕ್ಕೆ 40 ಲಕ್ಷ , ನಗರಸಭೆ ಘನ ತ್ಯಾಜ್ಯ ವಿಲೇವಾರಿ ಘಟಕದ ಒಳ ಭಾಗದ ರಸ್ತೆಗಳಿಗೆ 98 ಲಕ್ಷ, ಹಂಪಯ್ಯನಮಾಳಿಗೆ 40 ಲಕ್ಷ, ಕಾಸವರಹಟ್ಟಿ ಎಸ್ಸಿ ಕಾಲೋನಿ 30 ಲಕ್ಷ, ಹೊಸ ದ್ಯಾಮನಹಳ್ಳಿ 20 ಲಕ್ಷ, ಹಂಪಯ್ಯನಮಾಳಿಗೆ ಗೊಲ್ಲರಹಟ್ಟಿ 30 ಸಿ.ಸಿ.ರಸ್ತೆಗಳ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಹಂಪಯ್ಯನಮಾಳಿಗೆ ಮಳೆಗಾಲದಲ್ಲಿ ಸಾಕಷ್ಟು ಜನರು ಊರಿಗೆ ಹೋಗಲು ತೊಂದರೆ ಅನುಭವಿಸುತ್ತಿದ್ದರು ಅದಕ್ಕೆ 50 ಲಕ್ಷ ನೀಡಿ ಬ್ರಿಡ್ಜ್ ನಿರ್ಮಾಣ ಮಾಡಿದ್ದೇನೆ ಎಂದರು.

 

 

ಕಾಸವರಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ .
ಕಾಸವರಕಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ಆಸ್ಪತ್ರೆ ವಿಕ್ಷಿಸಿ ಮಾತನಾಡಿ
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 50 ಲಕ್ಷ ಅ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ ಸುತ್ತಲೂ ಸಿ.ಸಿ.ರಸ್ತೆ ಮಾಡಲಾಗಿದೆ.
ಸುತ್ತಮುತ್ತಲಿನ ಹತ್ತಾರು ಹಳ್ಳಿಗೆ ಆಸ್ಪತ್ರೆ ಅನುಕೂಲವಾಗಿದೆ. ಸ್ವಚ್ಚತೆ ಮತ್ತು ಉತ್ತಮ ಚಿಕಿತ್ಸೆ ಸಹ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ವೈದ್ಯರು ಸಹ ಇಲ್ಲಿನ ಕೆಲವೊಂದು ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ. ಇಲ್ಲಿ ಗರ್ಭಿಣಿಯರ ಅನುಕೂಲಕ್ಕಾಗಿ
ಸ್ಟಾಪ್ ನರ್ಸ್ ಸಮಸ್ಯೆ ಇದೆ ಎಂದು ತಿಳಿಸಿದ್ದು ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಹಂಪಯ್ಯನಮಾಳಿಗೆ ಅಂಗನವಾಡಿ ಕೇಂದ್ರಕ್ಕೆ ಗ್ರಾಮಸ್ಥರ ಜೊತೆ ಭೇಟಿ ನೀಡಿದಾಗ ಗ್ರಾಮಸ್ಥರು ಅವಶ್ಯಕವಾಗಿ ಅಂಗನವಾಡಿ ಕೇಂದ್ರಕ್ಕೆ ಬೇಡಿಕೆಗೆ 16 ಲಕ್ಷ ಹೊಸ ಕೊಠಡಿಗೆ ಹಣ ನೀಡುತ್ತೇನೆ ಎಂದರು.

ಎಲ್ಲಾ ಗ್ರಾಮೀಣ ಭಾಗದವರಿಗೆ ಸಹ ಅನುದಾನ ನೀಡಿದ್ದೇನೆ.ಪಕ್ಷ ಬೇದ ಮರೆತು ಅಭಿವೃದ್ಧಿ ವಿಚಾರಕ್ಕೆ ಸಹಕಾರ ನೀಡುತ್ತೇವೆ ಜನರು ಸಮಸ್ಯೆಗಳಿಗೆ ನಾನು ಎಂದು ಸಹ ಆಗಲ್ಲ ಎಂದು ಹೇಳಿಲ್ಲ ಮುಂದೆ ಸಹ ಹೇಳಲ್ಲ. ಜನರ ಜೊತೆ ಇದ್ದರೆ ಹೆಚ್ಚು ಸಂತೋಷ ಅಭಿವೃದ್ಧಿಗೆ ಸದಾ ಸಿದ್ದ ಎಂದು ಹೇಳಿದರು.

ಗ್ರಾಮ ಪಂಚಾಯತಿ ಅಧ್ಯಕ್ಷ ಬೋಸಯ್ಯ ಸದಸ್ಯರಾದ ಮಂಜುನಾಥ್,ಮಂಜುಳ, ಮುಖಂಡರಾದ ಪ್ರಕಾಶ್, ಧನಂಜಯ್, ರಂಗನಾಥ್ ರೆಡ್ಡಿ,ರಾಜಗೋಪಲರೆಡ್ಡಿ, ಜಯರಾಮ್, ಸತ್ಯನಾರಾಯಣ ರೆಡ್ಡಿ, ಸುದರ್ಶನ್ ಮತ್ತು ಪಿಡಿಓ ರೂಪ ಮತ್ತು ಗ್ರಾಮಸ್ಥರು ಇದ್ದರು.

[t4b-ticker]

You May Also Like

More From Author

+ There are no comments

Add yours