ಗೊಲ್ಲ ಸಮುದಾಯದ ಹಟ್ಟಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ, ಮೌಢ್ಯ ಆಚರಣೆ ಕೈಬಿಡಲು ಸಲಹೆ:ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ಡಿ.ಪ್ರದೀಪ್ ಕುಮಾರ್

 

 

 

 

ಗೊಲ್ಲ ಸಮುದಾಯದ ಹಟ್ಟಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ಡಿ.ಪ್ರದೀಪ್ ಕುಮಾರ್
ಮೌಢ್ಯ ಆಚರಣೆ ಕೈಬಿಡಲು ಸಲಹೆ
***
ಚಿತ್ರದುರ್ಗ, ಫೆಬ್ರವರಿ07:
ಇಂದಿಗೂ ಕೆಲವು ಗೊಲ್ಲರಹಟ್ಟಿಗಳಲ್ಲಿ ಮೂಢನಂಬಿಕೆಯ ಆಚರಣೆಗಳು ನಡೆಯುತ್ತಿವೆ. ಇಂತಹ ಮೌಢ್ಯ ಆಚರಣೆಗಳನ್ನು ಕೈಬಿಡಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಡಿ.ಪ್ರದೀಪ್ ಕುಮಾರ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಎಂ.ಕೆ.ಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡಯ್ಯನಹಟ್ಟಿ ಗೊಲ್ಲರಹಟ್ಟಿ ಹಾಗೂ ಜಾನುಕೊಂಡ ಗ್ರಾಮ ಪಂಚಾಯಿತಿಯ ಟಗರನಹಟ್ಟಿ ಗೊಲ್ಲರಹಟ್ಟಿ ಗ್ರಾಮಗಳಲ್ಲಿ ಈಚೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2021-22ನೇ ಸಾಲಿನ ಅಲೆಮಾರಿ, ಅರೆಅಲೆಮಾರಿ ಜನಾಂಗದ ಹಾಗೂ ಗೊಲ್ಲ ಸಮುದಾಯದ ಹಟ್ಟಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆರಿಗೆ, ಋತುಮತಿಯಾದಾಗ ಮಹಿಳೆಯರನ್ನು ಗ್ರಾಮದಿಂದ ಹೊರಗೆ ಇಡುವುದು, ತಿಂಗಳ ರಜೆ ಆದಾಗಲೂ ಮನೆಯಿಂದ ಹೊರಗೆ ಇಡುವುದು ಮತ್ತಿತರ ಆಚರಣೆಗಳು ನಡೆಯುತ್ತಿದ್ದು ಇಂತಹ ಆಚರಣೆಗಳನ್ನು ಕೈಬಿಡಬೇಕೆಂದು ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪುಷ್ಪ ಎಸ್.ಗಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣದಿಂದ ಮಾತ್ರ ಮೌಢ್ಯ ಮತ್ತು ಕಂದಚಾರಗಳನ್ನು ತೊಲಗಿಸಲು ಸಾಧ್ಯ ಎಂದರು.
ಎಲ್ಲರೂ ಶಿಕ್ಷಣ ಪಡೆದು ನವ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಶಿಕ್ಷಣವಂತರಾಗಲೂ ಸಲಹೆ ನೀಡಿದರು.
ಸುವರ್ಣ ಕರ್ನಾಟಕ ಜನ ಜಾಗೃತಿ ಕಲಾ ಸಂಘ ಇವರಿಂದ ಜಾಗೃತಿ ಮೂಡಿಸುವ ಗೀತೆಗಳು ಹಾಗೂ ಅರಿವು ಮೂಡಿಸುವ ಬೀದಿ ನಾಟಕಗಳನ್ನು ಗ್ರಾಮದಲ್ಲಿ ಮಾಡಲಾಯಿತು.

 

 


ಕಾರ್ಯಕ್ರಮದಲ್ಲಿ ಕೋಡಯ್ಯನಹಟ್ಟಿ ಪಂಚಾಯಿತಿಯ ಗ್ರಾ.ಮ ಪಂಚಾಯಿತಿ ಸದಸ್ಯರುಗಳಾದ ತಿಮ್ಮರಾಜು, ಬೈಯ್ಯಪ್ಪ, ಮಂಜುಳಾ, ಪಾಲಾಕ್ಷಮ್ಮ ಹಾಗೂ ಎಸ್‍ಡಿಎಂಸಿ ಅಧ್ಯಕ್ಷರಾದ ಟಿ.ರುದ್ರಪ್ಪ ಆಶಾ ಕಾರ್ಯಕರ್ತೆ ತಿಪ್ಪಮ್ಮ ಮತ್ತು ಶಾಲೆಯ ಮುಖ್ಯ ಶಿಕ್ಷಕರಾದ ಎಂ. ಶಿವಲಿಂಗಪ್ಪ ಹಾಗೂ ಸಹ ಶಿಕ್ಷಕರು, ಟಗರನಹಟ್ಟಿ  ಗೊಲ್ಲರಹಟ್ಟಿ  ಪಂಚಾಯತಿ ಸದಸ್ಯರಾದ ಎಸ್.ನಿಜಲಿಂಗಪ್ಪ, ಎಸ್.ವೆಂಕಟಾಚಲ, ಆಶಾ ಕಾರ್ಯಕರ್ತೆ ಮಂಜುಳಾ, ಅಂಗನವಾಡಿ ಕಾರ್ಯಕರ್ತೆ ಗೌರಮ್ಮ, ಸಮುದಾಯ ಆರೋಗ್ಯಾಧಿಕಾರಿ ಲೋಕಮ್ಮ, ಮುಖ್ಯ ಶಿಕ್ಷಕಿ ಸುನಂದಮ್ಮ, ಎಸ್‍ಡಿಎಂಸಿ ಅಧ್ಯಕ್ಷರಾದ ಲವೇಶ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours