ಖಾಸಗಿ ಬಸ್ ನಿಲ್ದಾಣದ ನೆಲಮಹಡಿಯಾಯ್ತ ಸಾರ್ವಜನಿಕರ ಬಯಲು ಶೌಚಾಲಯ

 

 

 

 

*ಖಾಸಗಿ ಬಸ್ ನಿಲ್ದಾಣದ ನೆಲಮಹಡಿ ಸಾರ್ವಜನಿಕರ ಬಯಲು ಶೌಚಾಲಯ*

ಚಳ್ಳಕೆರೆ: ನಗರದ ಹೃದಯ ಭಾಗದಲ್ಲಿ ನಿರ್ಮಾಣ ಮಾಡಿರುವ ನೂತನ ಖಾಸಗಿ ಬಸ್ ನಿಲ್ದಾಣ ಕಟ್ಟಡದ ನೆಲ ಮಹಡಿಯು ಸಾರ್ವಜನಿಕರ ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ.!!
ಖಾಸಗಿ ಬಸ್‌ಗಳ ನಿಲ್ದಾಣವನ್ನು ನೂತನವಾಗಿ ನಿರ್ಮಾಣ ಮಾಡಿ ಮೂರು ವರ್ಷಗಳ ಕಡೆ ಸಾಗುತ್ತಿದೆ. ಇನ್ನು ಅನುದಾನದ ಕೊರತೆಯಿಂದ ಕಟ್ಟಡದ ಕೆಲಸ-ಕಾರ್ಯಗಳು ಸಂಪೂರ್ಣವಾಗಿಲ್ಲ. ಇದ್ದರಿಂದ ಈ ಖಾಸಗಿ ಬಸ್ ನಿಲ್ದಾಣದ ಕಡೆ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಇದನ್ನೆ ದುರುಪಯೋಗಿಸಿಕೊಂಡ ಸಾರ್ವಜನಿಕರು ಕಟ್ಟದ ನೆಲ ಮಹಡಿಯಲ್ಲಿ ಮಲ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.
ಇದರಿಂದ ನೆಲಮಹಡಿಯು ದುರ್ವಾಸನೆ ಬೀರುವುದು ಒಂದು ಕಡೆಯಾದರೆ, ಮತ್ತೊಂದು ಮಳೆಯು ನೀರು ನೆಲಮಹಡಿ ತುಂಬೆಲ್ಲ ತುಂಬಿಕೊAಡು ನೆಲಮಹಡಿಯ ಚರಂಡಿಯಾಗಿ ಮಾರ್ಪಟ್ಟಿದೆ..!!

 

 

ಖಾಸಗಿ ಬಸ್ ನಿಲ್ದಾಣವನ್ನು ಲಕ್ಷಗಟ್ಟಲೆ ಹಣ ವೆಚ್ಚ ಮಾಡಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ, ಇನ್ನು ಈ ಕಟ್ಟಡಕ್ಕೆ ಅನುದಾನದ ಕೊರತೆಯಾಗಿರುವುದರಿಂದ ಬಸ್ ನಿಲ್ದಾಣವು ಉದ್ಘಾಟನೆಯು ಆಗಿಲ್ಲ, ಆದರೂ ಕೂಡ ಖಾಸಗಿ ಬಸ್‌ಗಳು, ಈ ಖಾಸಗಿ ಬಸ್ ನಿಲ್ದಾಣದಿಂದಲೆ ಪ್ರತಿದಿನ ಸಂಚಾರ ನಡೆಸುತ್ತಿವೆ. ಈ ಖಾಸಗಿ ಬಸ್ ನಿಲ್ದಾಣದಿಂದ ಚಿತ್ರದುರ್ಗ, ನಾಯಕನಹಟ್ಟಿ, ಪಾವಗಡ ಕಡೆ ಸಂಚರಿ¸ವ ಬಸ್‌ಗಳಲ್ಲಿ ಪ್ರಯಾಣ ಬೆಳೆಸುವ ಸಾರ್ವಜನಿಕರು ಅಲ್ಲಿ ಪಕ್ಕದಲ್ಲಿರುವ ಸಾರ್ವಜನಿಕ ಶೌಚಾಲಯವನ್ನು ಬಳಸಿಕೊಳ್ಳದೆ ಬಸ್ ನಿಲ್ದಾಣ ಕಟ್ಟಡದ ನೆಲಮಹಡಿಯನ್ನೇ ಮಲಮೂತ್ರ ವಿಸರ್ಜನೆ ಮಾಡುವ ತಾಣವಾಗಿಸಿಕೊಂಡಿದ್ದಾರೆ.

*ಬಸ್ ನಿಲ್ದಾಣದ ಮುಂದೆ ಮಳೆ ನೀರು*: ಮಳೆ ಬಂದರೆ ಸಾಕು ಖಾಸಗಿ ಬಸ್ ನಿಲ್ದಾಣದ ಮುಂದೆ ಮಳೆ ನೀರು ಶೇಖರಣೆಯಾಗುತ್ತದೆ. ಪ್ರತಿ ಬಾರಿ ಮಳೆ ಬಂದರೆ ಸಾಕು ವಾಹನ ಸವಾರರಿಗೆ, ಪಾದಚಾರಿಗಳಿಗೆ ಹಾಗೂ ಅಲ್ಲಿಂದ ಪ್ರಯಾಣ ಬಳಸುವ ಪ್ರಯಾಣಿಕರು ನಿಂತ ಮಳೆ ನೀರಿನಲ್ಲಿಯೇ ಸರ್ಕಸ್ ಮಾಡಿ ಸಂಚಾರ ಮಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ತೊಂದರೆಯಾಗುತ್ತದೆ.
*ಮಳೆ ನೀರು ರಾಜಕಾಲುವೆಗೆ ಹರಿಸಲಿ*: ಮಳೆ ಬಂದರೆ ಚಿತ್ರದುರ್ಗ ಮುಖ್ಯರಸ್ತೆಯಿಂದ ಬರುವ ನೀರು ರಾಜಕಾಲುವೆ ಸೇರದೆ ಇರುವುದರಿಂದ ತಾಲ್ಲೂಕು ಕಚೇರಿ ಆವರಣದ ಮಳೆ ನೀರು ಸಹ ಖಾಸಗಿ ಬಸ್ ನಿಲ್ದಾಣದ ಕಡೆ ಹರಿಯುವುದರಿಂದ ಮಳೆ ನೀರೆಲ್ಲ ಬಂದು ನೂತ ಖಾಸಗಿ ಬಸ್ ನಿಲ್ದಾಣದ ಕಟ್ಟಡಕ್ಕೆ ಬಂದ ನಿಲ್ಲುತ್ತದೆ. ಇದರಿಂದ ಖಾಸಗಿ ಬಸ್ ನಿಲ್ದಾಣದ ಮುಂದೆ ಮಳೆ ನೀರು ನಿಂತು ಸಾರ್ವಜನಿಕರಿಗೆ ಕಿರಿ-ಕಿರಿಯಾಗುತ್ತಿದೆ. ಆದ್ದರಿಂದ ಖಾಸಗಿ ಬಸ್ ನಿಲ್ದಾಣ ಮುಂದೆ ನಿಲ್ಲುವ ಮಳೆ ನೀರುನ್ನು ರಾಜಕಾಲುವೆ ಹರಿಯುಂತೆ ಮಾಡಬೇಕು ಎನ್ನುವುದೇ ಸಾರ್ವಜನಿಕರ ಆಶಯವಾಗಿದೆ.
===============================

[t4b-ticker]

You May Also Like

More From Author

+ There are no comments

Add yours