ಕನ್ನಡ ಶಾಲೆಗಳನ್ನು ಉಳಿಸುವ ಕಾಯಕವಾಗಲಿ : ಸಾಹಿತಿ ಗೀತಾ ಸಿ.ಕೆ ಅಭಿಮತ

 

 

 

 

ಚಿತ್ರದುರ್ಗ: ಇಂದು ನಾವೆಲ್ಲ ಆಂಗ್ಲ ಮಾಧ್ಯಮದ ಹಿಂದೆ ಮತ್ತು ಖಾಸಗಿ ಶಾಲೆಗಳ ಹಿಂದೆ ಓಡುತ್ತಿದ್ದು ಸರ್ಕಾರಿ ಶಾಲೆಗಳಿಗೆ ಮಕ್ಕಳು ಇಲ್ಲದಂತಾಗಿದ್ದಾರೆ. ನಾವು ಅದರಲ್ಲೂ ವಿಶೇಷವಾಗಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಶಾಲೆಗಳನ್ನು ಉಳಿಸಬೇಕಾಗಿದೆ ಅಲ್ಲದೆ ಕನ್ನಡದ ಭಾಷೆಯ ಬಗ್ಗೆ ಆಂದೋಲನವಾಗಬೇಕಿದೆ, ಕ್ರಾಂತಿ ಮಾಡಬೇಕಿದೆ, ಚಳವಳಿ ಮಾಡಬೇಕಿದೆ ಹೋರಾಡಬೇಕಿದೆ ಎಂದು ಸಾಹಿತಿ ಸಿ.ಕೆ. ಗೀತಾ ಹೇಳಿದರು.
ಅವರು ನಗರದ ಸ್ಟೇಡಿಯಂ ರಸ್ತೆಯಲ್ಲಿರುವ ಶಿಕ್ಷಕರ ಸರ್ಕಾರಿ ಮಹಾವಿದ್ಯಾಲಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತು ೧೦೮ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಉಪನ್ಯಾಸ ನೀಡುತ್ತಾ ಭಾಷೆಯ ಬಳಕೆಯನ್ನು ನಾವು ಬದಲಾಯಿಸುತ್ತಿದ್ದೇವೆ. ಆಡಳಿತ ಭಾಷೆ ಕನ್ನಡ ಎಂದು ಹೇಳುತ್ತಿದ್ದರೂ ನಾವೆಲ್ಲ ಬಳಸುವುದು ಮಾತ್ರ ಇಂಗ್ಲೀಷ್ ಆಗಿದೆ. ಕನ್ನಡದ ಭಾಷೆಯ ಬಗ್ಗೆ ಆಂದೋಲನವಾಗಬೇಕಿದೆ. ಕ್ರಾಂತಿ ಮಾಡಬೇಕಿದೆ, ಚಳವಳಿ ಮಾಡಬೇಕಿದೆ ಹೋರಾಡ ಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ನಿಕಟಪೂರ್ವ ಜಿಲ್ಲಾ ಗೌರವ ಕಾರ್ಯದರ್ಶಿ ನಾಗರಾಜ್ ಮಾತನಾಡಿ, ನಾವಿಂದು ನಾಲ್ವಡಿ ಕೃಷ್ಟರಾಜ ಒಡೆಯರ್, ಸರ್ ಎಂ ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅವರನ್ನು ಸ್ಮರಿಸಬೇಕು. ನಮ್ಮ ರಾಜ್ಯದಲ್ಲಿ ಇಂದು ರಾಜ್ಯಾಂದ್ಯAತ ಮೇ ೫ ರಂದು ಸಂಸ್ಥಾಪನಾ ದಿನಾಚರಣೆ ಮಾಡುತ್ತಿದ್ದು, ಶಿಕ್ಷಕರಾಗುವ ನಿಮ್ಮಂತ ಯುವ ಮನಸುಗಳಿಗೆ ಇಂತಹ ಕಾರ್ಯಕ್ರಮಗಳು ಉತ್ತಮ ಅವಕಾಶ ನೀಡುತ್ತಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಯನ್ನು ಯಾರೂ ಮಾಡಲಾಗಿಲ್ಲ. ಅವರು ಕೊಟ್ಟ ಕೊಡುಗೆಯೇ ಕಸಾಪ ಎಂದರು
ಸಮಾರಂಭವನ್ನು ಶಿಕ್ಷಕರ ಸರ್ಕಾರಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಹೆಚ್. ಮಂಜುನಾಥ್ ಉದ್ಘಾಟಿಸಿ ಮಾತನಾಡಿ, ಕನ್ನಡವನ್ನು ಬಳಸಬೇಕು ಅದರಿಂದ ಭಾಷೆ ಬೆಳೆಯುತ್ತದೆ. ಕನ್ನಡಸಾಹಿತ್ಯ ಸಮ್ಮೇಳನಗಳಿಗೆ ಭಾಗವಹಿಸಿ ಪ್ರೋತ್ಸಾಹಿಸಬೇಕು ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ರಾಮಲಿಂಗಶೆಟ್ಟಿ, ಶಿಕ್ಷಕರ ಸರ್ಕಾರಿ ಮಹಾವಿದ್ಯಾಲಯದ ಪ್ರವಾಚಕರಾದ ಟಿ.ಜಿ. ಲೀಲಾವತಿ, ಶ್ರೀನಿವಾಸ್, ಡಯಟ್ ಉಪನ್ಯಾಸಕ ಆರ್. ನಾಗರಾಜ್, ಕಸಾಪ ನಿಕಟಪೂರ್ವ ಜಿಲ್ಲಾ ಗೌರವ ಕಾರ್ಯದರ್ಶಿ ಮಾಲತೇಶ್ ಅರಸ್, ತಾಲೂಕು ಕಾರ್ಯದರ್ಶಿ ನವೀನ್ ಪಿ. ಕೋಶಾಧ್ಯಕ್ಷ ಮೋಹನ್ ಕುಮಾರ್ ಗುಪ್ತ, ವೆಂಕಟೇಶ್ ಮೂರ್ತಿ ಇದ್ದರು.

 

 

[t4b-ticker]

You May Also Like

More From Author

+ There are no comments

Add yours