ಕಡ್ಲೆಗುದ್ದು ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ದಾನಿಗಳಿಂದ ಉಚಿತ ಆಂಡ್ರಾಯ್ಡ್ ಮೊಬೈಲ್ ಫೋನ್ ವಿತರಣೆ

 

 

 

 

 

ಕರೋನದ ಸಂಕಷ್ಟ ಸಮಯದಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಲು ಮೊಬೈಲ್ ಡೊನೇಟ್ ಮಾಡಿ ಅಭಿಯಾನವನ್ನು ಶ್ರೀ ಆಂಜನೇಯ ಸ್ವಾಮಿ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಮಹೇಶ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ವಿನಂತಿಸಿಕೊಂಡಿದ್ದರು.
ಇವರ ಮನವಿಗೆ ಸ್ಪಂದಿಸಿದ ಚಿತ್ರದುರ್ಗ ಮೂಲದ ಐಟಿ ಉದ್ಯೋಗಿಗಳಾದ ಭುವನೇಶ್ವರ್ ಹಾಗೂ ಅವರ ಸ್ನೇಹಿತರು ಹಾಗೂ ಬಸವರಾಜ್ 20 ಮೊಬೈಲ್ ಗಳನ್ನು ಶಾಲಾ ವಿದ್ಯಾರ್ಥಿಗಳಾಗಿ ಕೊಡುಗೆಯಾಗಿ ಇಂದು ನೀಡಿದರು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಜ್ಞಾನ ವಿಷಯ ಪರಿವೀಕ್ಷಕರಾದ ಶ್ರೀ ಎಚ್ ಗೋವಿಂದಪ್ಪನವರು ವಿದ್ಯಾರ್ಥಿಗಳ ಕಲಿಕೆಗಾಗಿ ಮೊಬೈಲ್ ಡೊನೇಟ್ ಮಾಡುತ್ತಿರುವುದು ತುಂಬಾ ಶ್ಲಾಘನೀಯ ಕಾರ್ಯ ಇವರುಗಳ ಈ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಲಿ ಇವರ ಈ ಕಾರ್ಯಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಧನ್ಯವಾದಗಳನ್ನು ಸಲ್ಲಿಸಿದರು.

 

 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ್ ಅಧ್ಯಕ್ಷರಾದ ಶ್ರೀಮತಿ ಲೋಲಾಕ್ಷಮ್ಮನವರು ಮಾತನಾಡಿ ಭುವನೇಶ್ವರ್ ಬಸವರಾಜ್ ಸ್ನೇಹಿತರು ನೀಡಿದಂತಹ ಉಚಿತ ಮೊಬೈಲ್ ಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಉತ್ತಮ ಅಂಕಗಳಿಸಿ ಕೀರ್ತಿ ತರಬೇಕೆಂದು ಹಾರೈಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷರಾದ ಹನುಮಂತಪ್ಪನವರು ಮಾತನಾಡಿ ಸಮಾಜಮುಖಿ ಕೆಲಸ ಮಾಡುತ್ತಿರುವ ಇವರ ಈ ಕಾರ್ಯ ಸದಾ ಹೀಗೆ ಮುಂದುವರೆಯಲಿ ಇತರರಿಗೂ ಪ್ರೇರಣೆಯಾಗಲಿ ಎಂದು ಮಾತನಾಡಿದರು.

ಮೊಬೈಲ್ ಡೊನೇಟ್ ಮಾಡಿದ ಭುವನೇಶ್ವರ್ ಅವರು ಮಾತನಾಡಿ ಶಾಲೆಯ ಮುಖ್ಯ ಶಿಕ್ಷಕರಾದ ಮಹೇಶ್ ಅವರ ವಿನಂತಿಯ ಮೇರೆಗೆ ಅವರ ಕ್ರಿಯಾಶೀಲತೆ ಮಕ್ಕಳ ಮೇಲಿನ ಪ್ರೀತಿಯ ಅಕ್ಕರೆಯನ್ನು ಗಮನಿಸಿ ಈ ಸಣ್ಣ ಕಾರ್ಯವನ್ನು ಮಾಡುತ್ತಿದ್ದೇವೆ ಇದು ನಮ್ಮ ಕರ್ತವ್ಯ ಎಂದು ಮಾತನಾಡಿದರು.

ಶಾಲೆಯ ಮುಖ್ಯ ಶಿಕ್ಷಕರಾದ ಮಹೇಶ್ ಅವರು ಮಾತನಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಆನ್ಲೈನ್ ಕಲಿಕೆಗಾಗಿ ತಾವು ಬಳಸದೆ ಇರುವಂತಹ ಮೊಬೈಲನ್ನು ದಾನ ಮಾಡಿ ಎಂದು ಮನವಿ ಮಾಡಿಕೊಂಡಿದ್ದರ ಫಲವಾಗಿ ಇಂದು ಭುವನೇಶ್ವರ್ ಬಸವರಾಜ್ ಇವರುಗಳ ಸ್ನೇಹಿತರು 20 ಆಂಡ್ರಾಯ್ಡ್ ಮೊಬೈಲ್ ಫೋನ್ ಗಳನ್ನು ಉಚಿತವಾಗಿ ನೀಡಿರುವುದು ನಮ್ಮೆಲ್ಲರಿಗೂ ಸಂತಸವನ್ನು ಉಂಟುಮಾಡಿದೆ. ಇಂತಹ ದಾನಿಗಳುಆಧುನಿಕ ಕಾಲದಲ್ಲಿ. ತುಂಬಾ ಅಪರೂಪ ಇವರುಗಳಿಗೆ ವಿದ್ಯಾರ್ಥಿಗಳ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದರು.
ಮೊಬೈಲ್ ವಿತರಣಾ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ನಾಗರಾಜ್ ವರದಿಗಾರರಾದ ರಾಜು ಸಿರಿಗೆರೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ತಿಪ್ಪೇರುದ್ರಪ್ಪ, ಶಿಕ್ಷಕರಾದ ಚಿತ್ರ ಲಿಂಗಪ್ಪ ಮಂಜಪ್ಪ ನಾಗರಾಜ್ ಕರಿಬಸಪ್ಪ ಮಹಾಂತೇಶ್ ಮಂಜುನಾಥ್ ನಟರಾಜ್ ಹಾಗೂ ಗ್ರಾಮಸ್ಥರು ಪೋಷಕರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours