ಕಂದಾಯ ಸಚಿವರ ಆಗಮನ, ಘಟಪರ್ತಿ ವ್ಯಾಪ್ತಿಯ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ನೀಡಲು ಸಿದ್ದತೆ: ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ:  ದಿನಾಂಕ 18 6 2022 ರಂದು  ಕಂದಾಯ ಮಂತ್ರಿಗಳು ಚಳ್ಳಕೆರೆ ತಾಲೂಕಿನ ಘಟಪರ್ತಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದು ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚಳ್ಳಕೆರೆ ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು.

ಇಂದು ಘಟಪರ್ತಿ  ಗ್ರಾಮದಲ್ಲಿ  ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ಅಧಿಕಾರಿಗಳನ್ನೊಳಗೊಂಡ ಸಭೆಯಲ್ಲಿ ಮಾತನಾಡಿ  ಸಾರಿಗೆ ಸಚಿವರ ಆಶಯದಂತೆ ಕಂದಾಯ ಮಂತ್ರಿಗಳು ಘಟಪರ್ತಿ ಗ್ರಾಮಕ್ಕೆ ಆಗಮಿಸಲಿದ್ದು  ಅಂದು  ವಾಸ್ತವ್ಯ ಮಾಡಲಿದ್ದು ಈ ಘಟಪರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ 5 ಗ್ರಾಮಗಳು ಕೂಡ ಸಮಸ್ಯೆ ಮುಕ್ತ ಗ್ರಾಮಗಳಾಗಬೇಕು.

 

 

ಈ ಗ್ರಾಮಗಳಲ್ಲಿನ ಸಾರ್ವಜನಿಕರ ಅದರಲ್ಲೂ ಕಂದಾಯ ಇಲಾಖೆಯ ಕೆಲಸ ಕಾರ್ಯಗಳಾದ ಅಂತ ಪೌತಿ ಖಾತೆ ದರಕಾಸ್ತು ಜಮೀನಿನ ಪೋಡಿ ಕಾರ್ಯ ಸಾರ್ವಜನಿಕರಿಗೆ ಪಿಂಚಣಿ ನೀಡುವುದು, ಸ್ಮಶಾನಗಳ ಸಮಸ್ಯೆ, ಸರ್ಕಾರಿ ಜಮೀನು, ಒತ್ತುವರಿ ತೆರವು, ಸಾರ್ವಜನಿಕರಿಗೆ ದಾರಿ ನೀಡುವ ವ್ಯವಸ್ಥೆ ವಿವಿಧ ಉದ್ದೇಶಗಳಿಗೆ ಗ್ರಾಮ ಪಂಚಾಯತಿಗಳಿಗೆ ಸಾರ್ವಜನಿಕ ಉದ್ದೇಶಕ್ಕೆ ಜಮೀನು ಹಸ್ತಾಂತರಿಸುವ ಕಾರ್ಯ ರೈತರಿಗೆ ಬೆಳೆ ಪರಿಹಾರ ನೀಡುವ ಕಾರ್ಯ ಇವೆಲ್ಲವೂ ಸೇರಿದಂತೆ ಗ್ರಾಮದಲ್ಲಿನ ನೈರ್ಮಲೀಕರಣ ಕುಡಿಯುವ ನೀರಿನ ವ್ಯವಸ್ಥೆ ಎಲ್ಲವೂ ಸರಿಯಾಗಬೇಕು. ಈ ಗ್ರಾಮದಲ್ಲಿ  ಯಾವುದೇ ಸಮಸ್ಯೆ  ಇರದಂತೆ ಸಮಸ್ಯೆ ಮುಕ್ತವಾಗಿರಬೇಕು.

ಈ ಬಗ್ಗೆ ಕಂದಾಯ ಇಲಾಖೆ ಸಿಬ್ಬಂದಿಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೆ ಭೇಟಿ ನೀಡಿ ಮನೆ ಮನೆ ಸಂಪರ್ಕಿಸಿ ಎಲ್ಲ ಫಲಾನುಭವಿಗಳನ್ನು ಗುರುತಿಸಿ ಮೇಲ್ಕಂಡ ಎಲ್ಲಾ ಕಾರ್ಯಗಳನ್ನು ಶೇಕಡ ನೂರರಷ್ಟು ಪೂರ್ಣಗೊಳಿಸಿ ವಾರದೊಳಗೆ ವರದಿ ನೀಡುವಂತೆ ಸೂಚಿಸಿದರು. ಪಂಚಾಯಿತಿ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳು ಅಭಿವೃದ್ಧಿ ಅಧಿಕಾರಿಗಳು ಮತ್ತು ನಿರ್ಮಲೀಕರಣ ಸಿಬ್ಬಂದಿಗಳು ಗ್ರಾಮಗಳಲ್ಲಿನ ಎಲ್ಲಾ ಚರಂಡಿಗಳನ್ನು ಸ್ವಚ್ಛಗೊಳಿಸಿ ಜನಗಳ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ತಿಳಿಸಿದರು. ಈ ಕುರಿತು   ಜಿಲ್ಲಾಧಿಕಾರಿಗಳು ಎಲ್ಲಾ  ಸಿದ್ದತೆ  ಮಾಡಿಕೊಳ್ಳುವಂತೆ ಸೂಚಿಸಿದ್ದು ಯಾವುದೇ ವ್ಯತ್ಯಯವಾಗ ಕೂಡದೆಂದು ನಿರ್ದೇಶನ ನೀಡಿದ್ದಾರೆ. ಅದರಂತೆ ಎಲ್ಲಾ ಅಧಿಕಾರಿ ನೌಕರರು, ಚುನಾಯಿತ ಪ್ರತಿನಿಧಿಗಳು, ಸಚಿವರ ವಾಸ್ತವ್ಯಕ್ಕೆ ಒಂದು ನಿರ್ದಿಷ್ಟ ಕಾರ್ಯಸೂಚಿಯನ್ನು ತಯಾರಿಸಿದ್ದು ಅದಕ್ಕೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು. ಆರಂಭದಲ್ಲಿ ಸಚಿವರನ್ನು ಜಾನಪದ ಶೈಲಿಯ ಬಂಡಿ ಗಾಡಿಯಲ್ಲಿ ರೈತರೊಂದಿಗೆ ಆಹ್ವಾನಿಸಿ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡು ಗ್ರಾಮದ ಯುವಕ ಯುವತಿಯರು ಮತ್ತು ವಿದ್ಯಾರ್ಥಿಗಳೊಂದಿಗೆ ಗ್ರಾಮಸ್ವರಾಜ್ಯದ ಪರಿಕಲ್ಪನೆಯ ಸಂವಹನ ಕಾರ್ಯಕ್ರಮ ಸಭಾ ಕಾರ್ಯಕ್ರಮ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಹೀಗೆ ಹತ್ತು ಬಗೆಯ ದಿನವಿಡೀ ಕಾರ್ಯಕ್ರಮದಲ್ಲಿ ಉಭಯ ಪಾಲ್ಗೊಳ್ಳುತ್ತಿದ್ದು  ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ,ತಾಲೂಕು ಮಟ್ಟದ ಅಧಿಕಾರಿಗಳಿಗೆ ಮತ್ತು ಸ್ಥಳೀಯ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು. ಎಲ್ಲ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಸಚಿವರ ಕಾರ್ಯಕ್ರಮಕ್ಕೆ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಘಟಪರ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದಂತಹ ಉಮಾದೇವಿ ತಿಮ್ಮಾರೆಡ್ಡಿ ಉಪಾಧ್ಯಕ್ಷರಾದ ಸೇವಾ ನಾಯಕ್ ಸದಸ್ಯರಾದಂತಹ ಘಟಪರ್ತಿ ರವಿ ನಿರಂಜನ ಗೌಡ ಮಂಜುನಾಥ ಪುಟ್ಟಮ್ಮ ರಾಮಣ್ಣ ರಾಜಸ್ವನಿರೀಕ್ಷಕರ ರಫೀಕ ಅಹಮದ್ ಮುಂತಾದವರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours