ಒತ್ತುವರಿ ಮಾಡಿದ ಶಾಲೆ ಜಾಗವನ್ನು ಶಾಲೆಗೆ ಬಿಡಿಸಿಕೊಟ್ಟ ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

 

 

 

ಚಳ್ಳಕೆರೆ:ತಾಲ್ಲೂಕಿನ ಗೋಸಿಕೆರೆ ಹೊಸಕಪಿಲೆ ಸರ್ಕಾರಿ ಕಿರಿಯ‌ ಪ್ರಾಥಮಿಕ ಪಾಠ ಶಾಲೆಯಲ್ಲಿ ಸರಕಾರಿ ಜಾಗವು 2.16 ಗುಂಟೆ ಇದ್ದು ಇದರಲ್ಲಿ 1.14 ಜಾಗುವು ಒತ್ತುವರಿಯಾಗಿತ್ತು ಹೊಸಕಪ್ಪಲೆ ಗ್ರಾಮಸ್ಥರು ಈ ಹಿಂದೆ ಇದ್ದ ತಹಶೀಲ್ದಾರ್ ಗಮನಕ್ಕೆ ತಂದಿದ್ದರೂ ಹಲವು ಕಾರಾಣಾತರಗಳಿಂದ ಒತ್ತುವರಿ ತೆರವಾಗರಲಿಲ್ಲಾ ಒತ್ತುವರಿ ವಿಷಯವನ್ನು ತಹಸೀಲ್ದಾರ್ ಎನ್ ರಘುಮೂರ್ತಿ ಯವರಿಗೆ ಬಿಇಓ ಹಾಗೂ ಗ್ರಾಮದ ಮುಖಂಡರು  ಗಮನಕ್ಕೆ ತಂದಿದ್ದಾರೆ. ಬುಧವಾರ ಬೆಳಗ್ಗೆ ಗೋಸಿಕೆರೆ ಹೊಸಕಪಿಲೆಗೆ ಭೇಟಿ ನೀಡಿ ದಾಖಲಾತಿಗಳನ್ನು ಪರಿಶೀಲಿಸಿ ಸರ್ವೇ ಅಧಿಕಾರಿಗಳಿಂದ ಮಾಹಿತಿ ಪಡೆದು ಒತ್ತುವರಿ ಮಾಡಿಕೊಂಡ ಗ್ರಾಮಸ್ಥರೊಂದಿಗೆ ಮಾತನಾಡಿ ಸರ್ಕಾರಿ ಜಾಗ ಆಕ್ರಮವಾಗಿ ಒತ್ತುವರಿ ಮಾಡಬಾರದು ಅದರಲ್ಲೂ ಶಾಲೆ ಜಾಗವನ್ನು ಒತ್ತುವರಿ ಮಾಡಬಾರದು ಎಲ್ಲಾ ಮಕ್ಕಳಿಗೆ ಬೇಕಾಗಿರುವುದು ಶಿಕ್ಷಣ ಇಂತಹ ಶಿಕ್ಷಣಕ್ಕೆ ಬೇಕು. ಶಾಲೆ ಜಾಗವನ್ನು ಒತ್ತುವರಿ ಮಾಡಬಾರದು ಎಂದು ತಿಳಿ ಹೇಳಿದ ಮೇಲೆ ಒತ್ತುವರಿ ಮಾಡಿಕೊಂಡಿದ್ದ ವ್ಯಕ್ತಿ ಸರ್ಕಾರಿ ಜಾಗವನ್ನು ಬಿಟ್ಟುಕೊಡಲು ಒಪ್ಪಿದ ಕಾರಣ ತಕ್ಷಣ ಸರ್ವೇ ಅಧಿಕಾರಿಗೆ ಒತ್ತುವರಿ ಮಾಡಿದ  ಜಾಗವನ್ನು ಅಳತೆ ಮಾಡಿ ಶಾಲೆ ಸುಭದ್ರಕ್ಕೆ ತೆಗೆದುಕೊಳ್ಳುಲು ಸೂಚನೆ ನೀಡಿದರು.ಈ ಸಮಯದಲ್ಲಿ ಟಿ.ಎನ್.ಕೊಟೆ ಗ್ರಾಮಪಂಚಾಯಿತಿ ಅಧ್ಯಕ್ಷರಾದ ನವೀನ್  ಗ್ರಾಮ ಪಂಚಾಯತಿ ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ,ಇಸಿಓ ರವಿಶಂಕರ್ ಶಿಕ್ಷಕರಾದ ಗಂಗಾನಾಯಕ್ ಹಾಗೂ ಗ್ರಾಮಸ್ಥರು ಇದ್ದರು

[t4b-ticker]

You May Also Like

More From Author

+ There are no comments

Add yours