ಒಗ್ಗಟ್ಟು, ಜಾಗೃತಿ, ಶಿಕ್ಷಣ ಕೊರೆತೆಯಿಂದ ಸಮಾಜದಿಂದ ಹೊರಗೂಳಿದಂತಾಗಿದೆ : ಶ್ರೀ ಶಾಂತವೀರಸ್ವಾಮೀಜಿ

 

 

 

 

ಚಿತ್ರದುರ್ಗ: ಸಮಾಜದಲ್ಲಿ ಗೊತ್ತಿಲ್ಲದ ಜಾತಿಗಳ ಸಂಘಟನೆಯಾಗಬೇಕು, ನಿಜವಾಗ್ಯೂ ಶೋಷಿತ, ಅಲ್ಪಸಂಖ್ಯಾತ ಜನರಿಗೆ ಅವಕಾಶಗಳು ಸಿಗುವಂತಾಗಬೇಕು, ಆದರೆ, ಒಗ್ಗಟ್ಟು, ಜಾಗೃತಿ, ಶಿಕ್ಷಣ ಕೊರೆತೆಯಿಂದ ಸಮಾಜದಿಂದ ಹೊರಗೂಳಿದಂತಾಗಿದೆ ಎಂದು ಕುಂಚಿಟಿಗ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಾಂತವೀರಸ್ವಾಮೀಜಿಯವರು ವಿಶಾದ ವ್ಯಕ್ತಪಡಿಸಿದರು.
ನಗರದ ಹೊರಹೊಲಯದಲ್ಲಿರುವ ಭೋವಿ ಗುರುಪೀಠದಲ್ಲಿ ಭಾನುವಾರ ಅತೀ ಹಿಂದುಳಿದ ವರ್ಗಗಳ ವೇದಿಕೆಯ ಮುಖ್ಯಮಂತ್ರಿ ಚಂದ್ರು ಹಾಗೂ ವೇಣುಗೋಪಾಲ್ ಜೊತೆ ಮಾತನಾಡಿದ ಅವರು, ಶೋಷಣೆ, ಬಿನ್ನಾಭಿಪ್ರಾಯ, ಒಡಕಿನಂತ ಪ್ರತಿಷ್ಠೆಗಳನ್ನು ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಹೋರಾಡಿದರೆ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ. ದಲಿತ, ಹಿಂದುಳಿದ, ಬುಡಕಟ್ಟು, ಅರೆ ಅಲೆಮಾರಿ ಸಮುದಾಯಗಳು ತುಂಬಾ ಅನ್ಯಾಯಕ್ಕೆ ಒಳಗಾಗಿವೆ. ಈ ಸಮುದಾಯಗಳ ಬೆಳವಣಿಗೆಗೆ ಅಭಿವೃದ್ಧಿಗಾಗಿ ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಲ್ಲಿ 60ಕ್ಕೂ ಹೆಚ್ಚು ಸಮುದಾಯಗಳಿಗೆ ಜಮೀನು ನೀಡಿದ್ದರು. ಆದರೆ ಆ ಜಮೀನು ಇದುವರೆಗೂ ಆ ಸಮುದಾಯಗಳ ಅಭಿವೃದ್ಧಿಗೆ ಸಿಕ್ಕಿಲ್ಲ. ಈಗನ ಸರ್ಕಾರ ಕೂಡಲೇ ಆ ಸಮುದಾಯಗಳಿಗೆ ಜಮೀನು ಸಿಗುವಂತೆ ಕ್ರಮ ಕೈಗೊಳ್ಳಬೇಕು.
ಈಗಾಗಲೇ ಭಲಾಡ್ಯ ಜಾತಿಗಳಿಗೆ 15ಕ್ಕೂ ಹೆಚ್ಚು ಬಾರಿ ಜಮೀನು ಮಂಜೂರು ಮಾಡಿದ್ದಾರೆ, ಆದರೆ ಅವ್ಯಾವು ವಿವಾಧವಾಗದೆ ಆ ಸಮುದಾಯದ ಅಭಿವೃದ್ಧಿಗೆ ಜಮೀನು ಸಿಕ್ಕಿದೆ, ಆದರೆ ಈ ತಳ ಸಮುದಾಯಗಳಿಗೆ ಏಕೆ ಸಿಗುತ್ತಿಲ್ಲ ಎಂದು ಅಸಮದಾನ ವ್ಯಕ್ತಪಡಿಸಿದರು.
ಈ ಹಿಂದೆ 2ಎ ಮತ್ತು ಪ್ರವರ್ಗ-1ಕ್ಕೆ ಕೆಲವು ಜಾತಿಗಳನ್ನು ಸೇರಿಸಿದಾಗ ವಿರೋಧ ವ್ಯಕ್ತಪಡಿಸಿ ಜಾಗೃತಿಗೊಳ್ಳಬೇಕಾಗಿತ್ತು ಆದರೆ ನಾವು ತಡವಾಗಿ ಜಾಗೃತಿಗೊಳ್ಳುತ್ತಿದ್ದೇವೆ, ಈಗಲಾದರೂ ಗಟ್ಟಿ ಧ್ವನಿಯಿಂದ ಹೋರಾಟ ಮಾಡಬೇಕಾಗಿದೆ ಎಂದು ತಿಳಿಸಿದರು.
ಯಾದವ ಗುರುಪೀಠದ ಶ್ರೀ ಕೃಷ್ಣಯಾದವಾನಂದ ಸ್ವಾಮೀಜಿ ಮಾತನಾಡಿ ಶಕ್ತಿ ಇಲ್ಲದ ಸಮುದಾಯಗಳಿಗೆ ಶಕ್ತಿ ತುಂಬುವ ಕೆಲಸವಾಗಬೇಕಾಗಿದೆ. ನೊಂದವರಿಗೆ ಆಶ್ರಯ ನೀಡುವ ಕೆಲಸ ಸರ್ಕಾರವು ಮಾಡಬೇಕಾಗಿದೆ, ತುಳಿತಕ್ಕೊಳಗಾದ ಸಮುದಾಯಗಳಿಗೆ ಅವಕಾಶಗಳನ್ನು ಕಲ್ಪಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ತಿಳಿಸಿದರು.
ಮಾಜಿ ವಿಧಾನ ಪರೀಷತ್ ಸದಸ್ಯರು, ಮುಖ್ಯಮಂತ್ರಿ ಚಂದ್ರು ಮಾತನಾಡಿ, ಈಗಾಗಲೇ ಸರ್ಕಾರ ಆರ್ಥಿಕ ಮತ್ತು ಸಾಮಾಜಿಕ ಗಣತಿಯನ್ನು ನಡೆಸಿದೆ, ಆ ವರದಿಯನ್ನು ಬಿಡುಗಡೆಗೊಳಿಸಬೇಕು ಎಂದು ಜನರಲ್ಲಿ ಜಾಗೃತಿಗೊಳಿಸಿ ಹೋರಾಟ ರೂಪಿಸುವ ಕೆಲಸ ಮಾಡಬೇಕಾಗಿದೆ, ಅತೀ ಹಿಂದುಳಿದ ಜಾತಿಗಳ ಜಾಗೃತಿಯನ್ನು ಮಾಡಿ ಆ ಸಮುದಾಯಗಳ ಏಳಿಗೆಗೆ ಎಲ್ಲರೂ ಶ್ರಮವಹಿಸಬೇಕು. ಈಗ ಹುಲಿ ಎದುರಿಗೆ ಊಟ ಹಾಕುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಅದನ್ನು ಬಿಟ್ಟು ಎಲ್ಲರಿಗೂ ಅವಕಾಶ ಸಿಗುವಂತೆ ಪರಿಸ್ಥಿತಿ ನಿರ್ಮಾಣ ಮಾಡಬೇಕಾಗಿದೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಯಲ್ಲಿ ಎಲ್ಲಾ ಸಮುದಾಯಗಳಿಗೆ ಸ್ಪರ್ಥಿಸಲು ಮೀಸಲಾತಿ ನೀಡಿರುವ ರೀತಿಯಲ್ಲಿಯೇ ವಿಧಾನ ಸಭೆ, ಲೋಕಸಭೆಗೆ ಸ್ಪರ್ಥಿಸಲು ಮೀಸಲಾತಿ ಕಲ್ಪಿಸಬೇಕಿದೆ ಎಂದು ತಿಳಿಸಿದರು.
ಮಾಜಿ ವಿಧಾನ ಪರೀಷತ್ ಸದಸ್ಯರು, ವೇಣುಗೋಪಾಲ್ ಮಾತನಾಡಿ ಸಂವಿಧಾನದ ಚೌಕಟ್ಟಿನಲ್ಲಿ ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ತತ್ವವನ್ನು ಇಂದಿಗೂ ಜಾರಿಗೊಳಿಸಲಾಗುತ್ತಿಲ್ಲ, ಸಮಾನತೆಯ ಅವಕಾಶಗಳು ಕಲ್ಪಿಸಲು ಎಲ್ಲರು ಒಗ್ಗಟ್ಟಾಗಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರುವ ಮೂಲಕ ಹಿಂದುಳಿದವರಿಗೂ ಸಮಾಜದಲ್ಲಿ ಪಾಲು ಸಿಗುವಂತೆ ಮಾಡಬೇಕಿದೆ ಅಂಬೇಡ್ಕರ್‍ರವರು ಸಮಾನತೆ ಸಿಗಲಿಲ್ಲವೆಂದರೆ ಸ್ವಂತಂತ್ರ್ಯ ಸಿಕ್ಕು ಪ್ರಯೋಜನವಿಲ್ಲ ಎಂದಿದ್ದರು, ಆ ರೀತಿಯ ಪರಿಸ್ಥಿತಿ ಎದುರಿಸುತ್ತಿದ್ದೇವೆ, ತಾರತಮ್ಯವಿಲ್ಲದೆ ತಳ ಸಮುದಾಯಗಳೆಲ್ಲ ಒಂದೇ ಎಂದು ಭಾವಿಸಿ ಹೋರಾಟ ರೂಪಿಸಬೇಕಾಗಿದೆ, ನಮ್ಮ ಸಮುದಾಯಗಳಿಗೆ ಶಕ್ತಿ ಮತ್ತು ಸ್ವಾಭಿಮಾನ ತುಂಬಬೇಕು, ನಿಗಮಗಳನ್ನು ಮಾಡಿ ನೂರಾರು ಕೋಟಿ ನೀಡುವ ಈ ಸರ್ಕಾರಗಳು ಅತೀ ಹಿಂದುಳಿದ ಜಾತಿಗಳಿಗೆ ಅಧ್ಯಕ್ಷರನ್ನು ಸಹ ನೇಮಕ ಮಾಡಿಲ್ಲ, ಒಂದೆರಡು ಜಾತಿಗಷ್ಟೇ ಮಂತ್ರಿಗಳು ಸಿಮಿತವಾದರೆ ಸರ್ಕಾರದಲ್ಲಿ ಇತರೆ ಜಾತಿಗಳ ಪ್ರಾತಿನಿತ್ಯ ಹೇಗೆ ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಶಿವು ಯಾದವ್, ಎನ್.ಡಿ.ಕುಮಾರ್, ನಾಗರಾಜ್ ಗೋಕುಲ, ಗೋಪಾಲಚಾರಿ, ಪಾತಣ್ಣ, ಬಾಲಕೃಷ್ಣ ಯಾದವ್, ಲೋಕೇಶ್ ನಾಯಕ್, ಚಂದ್ರಶೇಖರ್ ಗೌಡ, ಶಿವಶಂಕರ್, ಬಸವರಾಜ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

 

 


ಸಭೆ ತಿರ್ಮಾನ
ಬೆಂಗಳೂರಿನಲ್ಲಿ ಹಿಂದುಳಿದ ಮತ್ತು ಅತೀ ಹಿಂದುಳಿದ ಸಮುದಾಯದ ಮಠಾಧೀಶರ ಸಭೆಯನ್ನು ಏರ್ಪಡಿಸಿ ಮುಖ್ಯಮಂತ್ರಿಗಳಿಗೆ ಈ ಸಮುದಾಯಗಳ ಅಭಿವೃದ್ಧಿಯ ಕಾರ್ಯಗಳ ಬಗ್ಗೆ ಚರ್ಚಿಸಲು ಸಭೆಯಲ್ಲಿ ತಿರ್ಮಾನಿಸಲಾಯಿತು.

[t4b-ticker]

You May Also Like

More From Author

+ There are no comments

Add yours