ಎರಡು ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗೆ ಚಾಲನೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ:  ‌ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ  ತಾಲೂಕಿನ ವಿವಿಧ  ಭಾಗದಲ್ಲಿ ಭಾನುವಾರದಂದು  ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಸುಮಾರು 2 ಕೋಟಿ ವೆಚ್ಚದ  ಸಿ.ಸಿ.ರಸ್ತೆ ಮತ್ತು ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಮತ್ತು ಆಸ್ಪತ್ರೆ ಕಟ್ಟಡಕ್ಕೆ ಚಾಲನೆ ನೀಡಿದರು.
 ತಾಲೂಕಿನ ಜೋಡಿಚಿಕ್ಕೆನಹಳ್ಳಿ 20 ಲಕ್ಷ ,        ನೇರೆನಾಳ್ 20ಲಕ್ಷ, ಜೆ.ಎನ್.ಕೋಟೆ 20 ಲಕ್ಷ, ತೊಪುರಮಾಳಿಗೆ 30 ಲಕ್ಷ , ಕೆಳಗಳಹಟ್ಟಿ 40 ಲಕ್ಷ ಸಜ್ಜನಕೆರೆ 30 ಲಕ್ಷ ವೆಚ್ಚದ ಸಿ.ಸಿ.ರಸ್ತೆಗೆ ಕಾಮಗಾರಿ ಮತ್ತು  ಡಿಎಂಎಫ್ ಅನುದಾನದಲ್ಲಿ ಜೆ.ಎನ್.ಕೋಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಕ್ಕೆ  40 ಲಕ್ಷ ಹಣ ನೀಡಿದ್ದು ಎಲ್ಲಾ ಕಾಮಗಾರಿಗೆ ಇಂದು ಪೂಜೆ ಮಾಡಿದ್ದೇನೆ.
ಈ ಭಾಗದಲ್ಲಿ ಸುಮಾರು 10 ಕೋಟಿ ವೆಚ್ಚದಲ್ಲಿ 12 ಚಕ್ ಡ್ಯಾಂ ನಿರ್ಮಾಣ ಮಾಡಲಾಗಿದೆ. ಎಲ್ಲಾ ಚಕ್ ಡ್ಯಾಂ ಗಳು ಸಹ ಪೂರ್ಣ ಭರ್ತಿಯಾಗಿ‌ ಕೋಡಿ‌  ಸಹ ಬಿದ್ದಿದ್ದವು. ಜೆ.ಎನ್.ಕೋಟೆ ದೊಡ್ಡ ಗ್ರಾಮವಾಗಿದ್ದು ಅಲ್ಲಿನ ಸುತ್ತಲಿನ 1-2 ಕಿಲೋ ಮೀಟರ್ ಗಳಲ್ಲಿ ಹಳ್ಳಿಗಳ ಸಂಖ್ಯೆ ಹೆಚ್ಚಾಗಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಜನರು ಬಹುದಿನಗಳಿಂದ ಕೇಳುತ್ತಿದ್ದರು ಅದಕ್ಕಾಗಿ 40 ಹಣ ನೀಡಿದ್ದೇನೆ‌. ಇನ್ನು ಬೇಕಾದ ಸೌಲಭ್ಯ ಕಲ್ಪಸುತ್ತೇನೆ ಎಂದರು.
ಗ್ರಾಮ ಪಂಚಾಯತಿ ಅಧ್ಯಕ ಮಂಜುನಾಥ್, ಮುಖಂಡರಾದ ಪಲ್ವಗೆರೆ ಕುಮಾರ್, ಧನಂಜಯ,
ಜೆ.ಎನ್.ಕೋಟೆ ಗಿರೀಶ್, ನಾಗರಾಜ್ ,ಎಟಿಎಸ್ ತಿಪ್ಪೇಸ್ವಾಮಿ, ಜೋಡಿಚಿಕ್ಕೆನಹಳ್ಳಿ ತಿಮ್ಮಣ್ಣ, ಹುನುಮಂತಪ್ಪ, ಮಂಜುನಾಥ್ ಮತ್ತು ಗ್ರಾಮಸ್ಥರು ಇದ್ದರು.
[t4b-ticker]

You May Also Like

More From Author

+ There are no comments

Add yours