ಎಚ್ಐವಿ ಸೋಂಕು ಹರಡುವಿಕೆಯ ನಿರ್ಮೂಲನೆಗಾಗಿ ಆಂದೋಲನ ಮತ್ತು ಸಾಮೂಹಿಕ ಸೀಮಂತ ಕಾರ್ಯಕ್ರಮ

 

 

 

 

ವರದಿ: ಮಹಂತೇಶ್ ಮೊಳಕಾಲ್ಮುರು

ಮೊಳಕಾಲ್ಮುರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರದಂದು..ತಾಯಿಯಿಂದ ಮಗುವಿಗೆ ಎಚ್ಐವಿ ಸೋಂಕು ಹರಡುವಿಕೆಯ ನಿರ್ಮೂಲನೆಗಾಗಿ ಆಂದೋಲನ ಮತ್ತು ಸಾಮೂಹಿಕ ಸೀಮಂತ ಕಾರ್ಯಕ್ರಮ ನಡೆಯಿತು….

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು…

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾತನಾಡಿದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅಭಿನವ್ ರವರು ಮಾತನಾಡಿ ಎಚ್ಐವಿ ಯಾರಿಗಾದರೂ ಬರುವ ಸಾಧ್ಯತೆಯಿದ್ದು ತಪ್ಪದೇ ಪ್ರತಿಯೊಬ್ಬ ಗರ್ಭಿಣಿ ಮಹಿಳೆಯು ಎಚ್ಐವಿ ಪರೀಕ್ಷೆ ಮಾಡಿಸಿಕೊಳ್ಳಬೇಕು ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ ಐ ಸಿ ಟಿ ಸಿ ಕೇಂದ್ರಗಳಲ್ಲಿ ಪರೀಕ್ಷೆ ಮತ್ತುಉತ್ತಮ ಸಲಹೆ ಹಾಗೂ ಸೇವೆಗಳನ್ನು ಉಚಿತವಾಗಿ ನೀಡಲಾಗವುದು …

 

 

ಎಚ್ ಐ ವಿ ಸೋಂಕಿತರು ಆಗಿದ್ದಲ್ಲಿ ಮುಂಜಾಗ್ರತೆ ವಹಿಸಿದ್ದಲ್ಲಿ ಮಗುವಿಗೆ ಹೆಚ್ಐವಿ ಸೋಂಕು ಬರುವುದನ್ನು ತಡೆಗಟ್ಟಬಹುದು..

ಗರ್ಭವತಿಯಾದ ಕೂಡಲೇ ನೋಂದಣಿ ಮಾಡಿಸಿ ಮೊದಲ ತ್ರೈಮಾಸಿಕ ಅವಧಿಯಲ್ಲಿ ಪರೀಕ್ಷೆ ಮಾಡಿಸಿ ಮತ್ತು ಎಚ್ಐವಿ ಯಿಂದ ಮಗುವನ್ನು ರಕ್ಷಿಸಲು ಎಚ್ಐವಿ ರಹಿತ ಮಗುವಿಗಾಗಿ ಪೋಷಕರಿಂದ ಮಗುವಿಗೆ ಹೆಚ್ಐವಿ ಸೋಂಕಿನ ವರ್ಗಾವಣೆಯನ್ನು ತಡೆಗಾಗಿ ಸುರಕ್ಷಿತ ತಾಯ್ತನ ಕ್ಕಾಗಿ ಮತ್ತು ಆರೋಗ್ಯವಂತ ಮಗುವಿಗಾಗಿ ಗರ್ಭಾವಸ್ಥೆಯಲ್ಲಿ ಮುಂಜಾಗ್ರತೆ ವಹಿಸಿ ಕಡ್ಡಾಯವಾಗಿ ಪರೀಕ್ಷೆ ಮಾಡಬೇಕೆಂದು ಗರ್ಭಿಣಿ ಸ್ತ್ರೀಯರಿಗೆ ಸಲಹೆ ನೀಡಿದರು…

ಕಾರ್ಯಕ್ರಮದಲ್ಲಿ 30ಜನ ಮಹಿಳೆಯರಿಗೆ ಅರೋಗ್ಯ ಇಲಾಖೆ ವತಿಯಿಂದ ಸೀಮಂತ ಮಾಡಲಾಯಿತು..

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಶುಭ ಪೃಥ್ವಿರಾಜ್ ವೈದ್ಯರಾದ ಡಾ. ಮಂಜುನಾಥ್ ಡಾ.ಮಧುಕುಮಾರ್ ಶ್ರುಷಕಿ ಸುಧಾ ಶಿಲ್ಪಾ ಸಿದ್ದನಾಯಕ ಶ್ರೀನಿವಾಸ್ ಖಲೀಮ್ ಉಲ್ಲಾ ಸೇರಿದಂತೆ ಆರೋಗ್ಯ ಇಲಾಖೆಯವರು ಉಪಸ್ಥಿತರಿದ್ದರು…

[t4b-ticker]

You May Also Like

More From Author

+ There are no comments

Add yours