ಉಚಿತ ತರಬೇತಿ:ಜಿಟಿಟಿಸಿ ಕೇಂದ್ರಸಲ್ಲಿ ಅಲ್ಪಾವಧಿ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ.

 

 

 

 

ಚಳ್ಳಕೆರೆ-02 ಚಳಕೆರೆ ನಗರದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಉಚಿತವಾಗಿ ತರಬೇತಿ ನೀಡಲಾಗುವುದು ಎಂದು ಪ್ರಾಂಶುಪಾಲ‌ ತಿಪ್ಪೇಸ್ವಾಮಿ ತಿಳಿಸಿದರು.

 

 

ಅವರು ನಗರದ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ‌ನೀಡಿ. ಎಸ್‍ಎಸ್‍ಎಲ್‍ಸಿ, ಐಟಿಐ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರಸ್ತುತ ಇಲ್ಲಿನ ಜಿಟಿಟಿಸಿ ಕೇಂದ್ರದಲ್ಲಿ ಕನ್ಷೆನ್ಷನಲ್ ಮಿಲ್ಲಿಂಗ್ ಮಷೀನ್ ಆಪರೇಟರ್, ಟರ್ನಿಂಗ್ ಮಷೀನ್ ಆಪರೇಟರ್, ಸಿಎನ್‍ಸಿ ಮಷೀನ್ ಆಪರೇಟರ್(ಮಿಲ್ಲಿಂಗ್ ಮತ್ತು ಟರ್ನಿಂಗ್) ಸಿಎನ್‍ಸಿ ಪ್ರೋಗ್ರಾಮರ್, ಟೂಲ್ ರೂಮ್ ಮಷೀನಿಸ್ಟ್ ಮುಂತಾದ ಅಲ್ಪಾವಧಿ ಕೋರ್ಸ್‍ಗಳ ಪ್ರವೇಶಾತಿ ಆರಂಭವಾಗಿದ್ದು ಕೆಲವೇ ಸೀಟುಗಳು ಮಾತ್ರ ಲಭ್ಯವಿದೆ. ತರಬೇತಿ ಅವಧಿಯಲ್ಲಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ದೊರಯಲಿದೆ. ಮೂರು ತಿಂಗಳು ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಅವರ ಕೌಶಲ್ಯಾಧರಿಸಿ ರಾಜ್ಯದ ವಿವಿಧ ಕಂಪನಿಗಳಿಗೆ ನೌಕರಿಗೆ ಶಿಫಾರಸ್ಸು ಮಾಡಲಾಗುವುದು. ಪ್ರವೇಶಾತಿ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತವಾಗಿದ್ದು ಕಚೇರಿಗೆ ಆಗಮಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಕ್ಕೆ ಮೊಬೈಲ್ :- 70190 66755ಗೆ ಸಂಪರ್ಕಿಸಬಹುದಾಗಿದೆ.

[t4b-ticker]

You May Also Like

More From Author

+ There are no comments

Add yours