ಇಂದು ಸಚಿವ ಶ್ರೀರಾಮುಲು ಅವರಿಂದ ಮೊಳಕಾಲ್ಮುರು ಕ್ಷೇತ್ರದಲ್ಲಿ 68 ಕೋಟಿ ವೆಚ್ಚದ ಅಭಿವೃದ್ದಿ ಕಾರ್ಯ

 

 

 

 

ಚಿತ್ರದುರ್ಗ:  ಸಚಿವರಾದ ಬಿ.ಶ್ರೀರಾಮುಲು ಅವರು ಇಂದು ಸಾಲು ಸಾಲು ಅಭಿವೃದ್ಧಿ ಕಾರ್ಯಗಳಿಗೆ ಭೂಮಿಪೂಜೆ ಮತ್ತು ಉದ್ಘಾಟನೆ ಮಾಡಲಿದ್ದಾರೆ. ಇಂದು 68 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳು ಜರುಗಲಿದೆ.

 

 

 ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ  24  ಲಕ್ಷ ವೆಚ್ಚದಲ್ಲಿ  ಮನಮೈನಹಟ್ಟಿ ಮತ್ತು ಬೋಸೆದೇವರಹಟ್ಟಿ ಗ್ರಾಮದಲ್ಲಿ  ಎರಡು  ಶುದ್ದ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ.

ನಾಯಕನಹಟ್ಟಿ  ಪಟ್ಟಣದ ಒಳಮಠದ ಹತ್ತಿರ ಸುಮಾರು 6 ಕೋಟಿ ವೆಚ್ಚದಲ್ಲಿ ಎಸ್ ಸಿಪಿ, ಟಿಎಸ್ ಪಿ ಯೋಜನೆಯಲ್ಲಿ ಸಿ.ಸಿ.ರಸ್ತೆ ಭೂಮಿ ಪೂಜೆ.
ಪಟ್ಟಣದ  2,5, 7 ಮತ್ತು 14 ನೇ ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ.
ಕೋಡಿಹಳ್ಳಿ ಗ್ರಾಮದಲ್ಲಿ   ಸುಮಾರು 1 ಕೋಟಿ ವೆಚ್ಚದಲ್ಲಿ ಜಿಂದಾಲ್ ಸಂಸ್ಥೆಯ ಸಹಯೋಗದಲ್ಲಿ ಉತ್ತಮ ಗುಣಮಟ್ಟದ 4 ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ.
ಗಿರಿಯಮ್ಮನಹಳ್ಳಿ ಗ್ರಾಮದಲ್ಲಿ  ಸುಮಾರು 40 ಕೋಟಿ ಜಲಜೀವನ್ ಮಿಷನ್ ಯೋಜನೆಯಲ್ಲಿ 145 ಕೋಟಿ  ವೆಚ್ಚದಲ್ಲಿ ಮನೆಮನೆಗೆ ನಳ ಸಂಪರ್ಕ.
ತಳುಕು ಗ್ರಾಮದಲ್ಲಿ   ಕೃಷಿ ಇಲಾಖೆಯಿಂದ ರೈತರಿಗೆ ಕೃಷಿ ಉಪಕರಣ ಕಾರ್ಯಕ್ರಮ ಮತ್ತು ಟಿಎಸ್ ಪಿ ಯೋಜನೆಯಡಿಯಲ್ಲಿ  2 ಕೋಟಿ ವೆಚ್ಚದಲ್ಲಿ 40 ಗ್ರಾಮಗಳ ಎಸ್.ಟಿ ಕಾಲೋನಿಯಲ್ಲಿ  ಹೈ ಮಾಸ್ಕ್ ಉದ್ಘಾಟಿನಾ ಕಾರ್ಯಕ್ರಮ.
ತಿಮ್ಮಣ್ಣನಹಳ್ಳಿಯಲ್ಲಿ  16 ಲಕ್ಷ ವೆಚ್ಚದಲ್ಲಿ  ಹೈ ಟೆಕ್ ಅಂಗನವಾಡಿ ಕಟ್ಟಡ ಉದ್ಘಾಟನೆ.
ವಲಸೆ ಗ್ರಾಮದಲ್ಲಿ 16 ಲಕ್ಚ ವೆಚ್ಚದಲ್ಲಿ ಹೈ ಟೆಕ್ ಅಂಗನವಾಡಿ ಕಟ್ಟಡ ನಿರ್ಮಾಣ.
ಚನ್ನಗಾನಹಳ್ಳಿ ಗ್ರಾಮದಲ್ಲಿ 16 ಲಕ್ಷ  ಅಂಗನವಾಡಿ ಮತ್ತು  12 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶ್ರೀ ಅಂಬೇಡ್ಕರ್ ಭವನ ಉದ್ಘಾಟನೆ.
ಚಿತ್ರನಾಯಕನಹಳ್ಳಿ ಗ್ರಾಮದಲ್ಲಿ  ಡಿಎಂಎಫ್ ಅನುದಾನದಲ್ಲಿ ಸುಮಾರು2 ಕೋಟಿ ವೆಚ್ಚದಲ್ಲಿ ವಿವಿಧ ಗ್ರಾಮದಲ್ಲಿ 15 ಶಾಲಾ ಕೊಠಡಿಗಳ ಉದ್ಘಾಟನೆ.
ಮೈಲನಹಳ್ಳಿ ಗ್ರಾಮದಲ್ಲಿ  25 ಲಕ್ಷ ಹೈ ಶೌಚಾಲಯ ಉದ್ಘಾಟನೆ ಮತ್ತು 14 ಕೋಟಿ ವೆಚ್ಚದಲ್ಲಿ ದೊಡ್ಡುಉಳ್ಳಾರ್ತಿಯಿಂದ ರೇಣುಕಾಪುರದವರೆಗೆ ಡಾಂಬರೀಕರಣಕ್ಕೆ ಭೂಮಿ ಪೂಜೆ .
ಓಬಳಾಪುರ ಗ್ರಾಮದಲ್ಲಿ  1 ಕೋಟಿ ವೆಚ್ಚದಲ್ಲಿ ಜಿಂದಾಲ್ ಸಂಸ್ಥೆಯ ಸಹಯೋಗದಲ್ಲಿ  4 ಶಾಲಾ ಕೊಠಡಿ, 1 ಕೋಟಿ  ವೆಚ್ಚದಲ್ಲಿ ನಿರ್ಮಾಣವಾಗಿರುವ ಸಿಸಿ ರಸ್ತೆ, ಮತ್ತು ಏಳು ಸಮಸ್ಯೆ ಮುಕ್ತ ಗ್ರಾಮಗಳ ಘೋಷಣೆ ಸೇರಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಮತ್ತು ಉದ್ಘಾಟನೆ ಮಾಡಲಿದ್ದಾ ಎಂದು ತಿಳಿದು ಬಂದಿದೆ.
[t4b-ticker]

You May Also Like

More From Author

+ There are no comments

Add yours