ಆಧುನಿಕ ಭರಾಟೆಯಲ್ಲಿ ಸಿಲುಕಿ ಸಂಪ್ರಾದಾಯಿಕ ಕೃಷಿ ಕಣ್ಮರೆಯಾಗುತ್ತಿದೆ: ಶಾಸಕ ಟಿ.ರಘುಮೂರ್ತಿ

 

 

 

 

ಚಳ್ಳಕೆರೆ: ವಿಜ್ಞಾನ ಮುಂದುವರೆದಂತೆಲ್ಲ ಹೊಸ ಹೊಸ ಅವಿಷ್ಕಾರ ಹುಟ್ಟಿಕೊಂಡಿವೆ ಯಂತ್ರಗಳ ಭರಾಟೆಗೆ ಸಿಲುಕಿ ರೈತರ ಕೃಷಿಚಟುವಟಿಕೆಗಳು ಹಾಗೂ ಪೂರ್ವಜರ ಕಾಲದ ಬೇಸಾಯ ಪದ್ದತಿಗಳು ಕಣ್ಮರೆಯಾಗುತ್ತಿವೆ ಎಂದು ಶಾಸಕ  ಟಿ.ರಘುಮೂರ್ತಿ ವಿಷಾದ ವ್ಯಕ್ತಪಡಿಸಿದರು.

ತಾಲೂಕಿನ  ನನ್ನಿವಾಳ ಗ್ರಾಮದಲ್ಲಿ  ತಾಲೂಕು ಆಡಳಿತ, ವಿವಿಧ ರೈತ ಸಂಘಟನೆಗಳು ಹಾಗೂ ಗ್ರಾಮ ಪಂಚಾಯತಿಯ ಸಂಯುಕ್ತಾಶ್ರಯದಲ್ಲಿ  ಆಯೋಜಿಸಿದ್ದ ‘ರೈತರ ವರ್ಷದ ಮೊದಲನೇ ನೇಗಿಲು ಮನೆ ಮಾಡುವ ಹೊನ್ನಾರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯಲ್ಲಿಯೇ ವಿನೂತನ ಕಾರ್ಯಕ್ರಮವನ್ನು ತಾಲ್ಲೂಕು ಆಡಳಿತ ರೈತ ಸಂಘಟನೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ನಡೆಸಿದೆ. ತಾಲ್ಲೂಕಿನಾದ್ಯಂತ ಒಟ್ಟು 57 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ವಿಫಲವಾಗಿದ್ದು, ರೈತರಿಗೆ ಬೆಳೆ ನಷ್ಟ ಪರಿಹಾರವನ್ನು ಕೊಡಿಸಲು ಸರ್ಕಾರದೊಂದಿಗೆ ಚರ್ಚಿಸಿ ಪರಿಹಾರ ನೀಡಲಾಗಿದೆ. ಆದರೂ ಇನ್ನೂ ಕೆಲವು ರೈತರಿಗೆ ಈ ಪರಿಹಾರದ ಹಣ ಬಂದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚೆ ನಡೆಸುತ್ತಿರುವುದಾಗಿ ತಿಳಿಸಿದರು.

 

 

 

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ ರಾಷ್ಟ್ರದ ಹಸಿವನ್ನು ನೀಗಿಸುವ ಶಕ್ತಿ ಇರುವುದು ರೈತರಿಗೆ ಮಾತ್ರ. ಅನ್ನದಾತ ದೇಶದ ಬೆನ್ನೆಲುಬು ಎಂದರು. ರೈತರ ಬೆಳೆ ವಿಮೆ, ಬೆಳೆ ನಷ್ಟ ಕುರಿತಂತೆ ಕೆಲವೊಂದು ಸಮಸ್ಯೆಗಳಿದ್ದು, ಅವುಗಳನ್ನು ಕೆಲವು ದಿನಗಳಲ್ಲಿ ಬಗೆಹರಿಸಲಾಗುವುದು.

 

ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ  ನಮಗೆ ಅನ್ನ ನೀಡುವ ಭೂಮಿ ತಾಯಿಯ ಬಗ್ಗೆ ನಮ್ಮೆಲ್ಲರಿಗೂ ಅಪಾರವಾದ ಗೌರವವಿದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ರೈತರ ಬದುಕಿನಲ್ಲಿ ಹೊಸ ಉತ್ಸಾಹ ತುಂಬಲು ಜಿಲ್ಲಾಧಿಕಾರಿ ಮತ್ತು ಕ್ಷೇತ್ರದ ಶಾಸಕ ರಘುಮೂರ್ತಿ ಆಗಮಿಸಿರುವುದು ಸಂತೋಷ ಎಂದರು.

,ಕೃಷಿ ಇಲಾಖೆ ಅಧಿಕಾರಿಗಳಾದ ಅಶೋಕ್, ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ವಿರುಪಾಕ್ಷಪ್ಪರವರು, ತಾಲೂಕು ಆಡಳಿತ, ಮತ್ತು ರೈತ ಸಂಘದ ಭೂತಯ್ಯ ಕೆ. ಪಿ. ,ರಂಗಸ್ವಾಮಿ ಸೋಮಗುದ್ದು, ರೆಡ್ಡಿಹಳ್ಳಿ ಈರಣ್ಣ ಹಾಗೂ ರೈತ ಸಂಘಟನೆಗಳು ಹಾಗೂ ಗ್ರಾಮ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours