ಉದ್ಯೋಗ ಮಾಹಿತಿ: ಯೋಗ ತರಬೇತುದಾರರ ಹುದ್ದೆಗೆ ನೇರ ಸಂದರ್ಶನ

 

 

 

 

ಚಿತ್ರದುರ್ಗ, ಸೆಪ್ಟೆಂಬರ್28:
ಆಯುಷ್ಮಾನ್ ಭಾರತ ಯೋಜನೆಯಡಿಯಲ್ಲಿ ಅಭಿವೃದ್ಧಿ ಪಡಿಸಿರುವ ಆಯುರ್ವೇದ ಕ್ಷೇಮ ಕೇಂದ್ರಗಳಿಗೆ ಯೋಗ ತರಬೇತಿದಾರರನ್ನು (ಪಾರ್ಟ್ ಟೈಮ್) ಭರ್ತಿ ಮಾಡಿಕೊಳ್ಳಲು ಸೆಪ್ಟೆಂಬರ್29 ರಿಂದ ಅಕ್ಟೋಬರ್ 5ರವರೆಗೆ ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿಯಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ.
 ಯೋಗ ತರಬೇತಿದಾರರು (ಪಾರ್ಟ್‍ಟೈಮ್) 04 ಹುದ್ದೆಗಳು: ಚಿತ್ರದುರ್ಗ ತಾಲ್ಲೂಕು ಅಳಗವಾಡಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ 02 ಹುದ್ದೆಗಳು ಹಾಗೂ ಚಳ್ಳಕೆರೆ ತಾಲ್ಲೂಕು ಹುಲಿಕುಂಟೆ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ 02 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಯಾವುದೇ ಮೀಸಲಾತಿ ಇರುವುದಿಲ್ಲ. ಎಲ್ಲ ವರ್ಗದವರು ಅರ್ಜಿ ಸಲ್ಲಿಸಬಹುದು. 1ನೇ ಯೋಗ ತರಬೇತಿದಾರರಿಗೆ ರೂ.8000/- 2ನೇ ಯೋಗ ತರಬೇತಿದಾರರಿಗೆ ನಿಯಮಾನುಸಾರ ಮಾಸಿಕ ಸಂಭಾವನೆ ನೀಡಲಾಗುವುದು.
ನಿಗದಿಪಡಿಸಿದ ವಿದ್ಯಾರ್ಹತೆ: ಪಿಯುಸಿ ವಿದ್ಯಾರ್ಹತೆ ಜೊತೆಗೆ ಯೋಗ  ತರಬೇತಿ ಪ್ರಮಾಣ ಪತ್ರ ಪಡೆದಿರಬೇಕು.  ಸ್ಥಳೀಯ ಅಭ್ಯರ್ಥಿಗೆ ಆದ್ಯತೆ ನೀಡಲಾಗುವುದು. ಕನಿಷ್ಟ 21 ವರ್ಷ ಹಾಗೂ ಗರಿಷ್ಟ 60 ವರ್ಷ ವಯೋಮಿತಿ ಹೊಂದಿರಬೇಕು.
ಆಸಕ್ತ ಸ್ಥಳೀಯ ಅಭ್ಯರ್ಥಿಗಳು ಸಂದರ್ಶನದಲ್ಲಿ ನೇರವಾಗಿ ಭಾಗವಹಿಸಬಹುದಾಗಿದೆ. ಅಭ್ಯರ್ಥಿಗಳು ತಮ್ಮ ಬಯೋಡಾಟಾದೊಂದಿಗೆ ಮೂಲ ಎಸ್‍ಎಸ್‍ಎಲ್‍ಸಿ, ಪಿಯುಸಿ ಅಂಕಪಟ್ಟಿ, ಆಧಾರ್ ಕಾರ್ಡ್, ತರಬೇತಿ, ಅನುಭವ ಪ್ರಮಾಣ ಪತ್ರಗಳನ್ನು ತಪ್ಪದೇ ತರುವುದು. ಹೆಚ್ಚಿನ ವಿವರಗಳಿಗೆ ಜಿಲ್ಲಾ ಆಯುಷ್ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆಯುಷ್ ಅಧಿಕಾರಿಗಳು ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours