ವಿಶ್ವ ಪರಿಸರ ದಿನಾಚರಣೆ ಚಿತ್ರಕಲೆ, ಪ್ರಬಂಧ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ

 

 

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಜುಲೈ 22:
ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಮೀಪದ ಕ್ರೀಡಾಭವನದಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಚಿತ್ರಕಲೆ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವಿಶ್ವ ಪರಿಸರ ದಿನಾಚರಣೆ-2022ರ ಘೋಷ ವಾಕ್ಯ “ಒಂದೇ ಒಂದು ಭೂಮಿ” ಸಂಬಂಧಿಸಿದಂತೆ ಚಿತ್ರದುರ್ಗ ನಗರ ವ್ಯಾಪ್ತಿಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯನ್ನು ಜುಲೈ 12ರಂದು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಚಿತ್ರಕಲೆ ಸ್ಪರ್ಧೆ: 10ನೇ ತರಗತಿಯಲ್ಲಿ  ಬಾಲಕಿಯರ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಐಶ್ವರ್ಯ (ಪ್ರಥಮ), ಎಸ್‍ಆರ್‍ಎಸ್ ಹೆರಿಟೇಜ್ ಪ್ರೌಢಶಾಲೆಯ ಜಿ.ಎಂ.ಪವನ್ ಪಾಟೀಲ್ (ದ್ವಿತೀಯ) ಕೋಟೆ ಕೋಟೆ ಪ್ರೌಢಶಾಲೆಯ ಟಿ.ವಿದ್ಯಾಶ್ರಿ (ತೃತೀಯ), ವಾಸವಿ ವಿದ್ಯಾ ಸಂಸ್ಥೆಯ ಕೃತಿ ನಾಯಕ್ (ನಾಲ್ಕನೇ) ಬಹುಮಾನ ಪಡೆದರು.
9ನೇ ತರಗತಿಯಲ್ಲಿ ವಾಸವಿ ವಿದ್ಯಾ ಸಂಸ್ಥೆಯ ಆರ್.ಆಕಾಶ್ (ಪ್ರಥಮ), ಬಾಲಕಿಯರ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಸುನಯನ (ದ್ವಿತೀಯ), ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಜಿ.ಬಿ.ಸಾಧಾನ (ತೃತೀಯ) ಎಸ್‍ಆರ್‍ಎಸ್ ಹೆರಿಟೇಜ್ ಪ್ರೌಢಶಾಲೆಯ ಕೆ.ಎಸ್.ಪ್ರಮೋದಗೆ (ನಾಲ್ಕನೇ) ಬಹುಮಾನ ಪಡೆದರು.
8ನೇ ತರಗತಿಯಲ್ಲಿ ವಿದ್ಯಾ ವಿಕಾಸ್ ವಿದ್ಯಾ ಸಂಸ್ಥೆಯ ಸನಿಹಾ ಸಿಂಜನಾ (ಪ್ರಥಮ), ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಟಿ.ಶ್ವೇತಾ (ದ್ವಿತೀಯ), ವಿದ್ಯಾ ವಿಕಾಸ್ ವಿದ್ಯಾ ಸಂಸ್ಥೆಯ ಜಿ.ಎಸ್.ಶಿಲ್ಪಾ (ತೃತೀಯ), ಕೋಟೆ ಪ್ರೌಢಶಾಲೆಯ ವಿಕಾಸ್ (ನಾಲ್ಕನೇ) ಬಹುಮಾನ ಪಡೆದರು.
ಪ್ರಬಂಧ ಸ್ಪರ್ಧೆ: 10ನೇ ತರಗತಿಯಲ್ಲಿ ವಾಸವಿ ವಿದ್ಯಾ ಸಂಸ್ಥೆಯ ಟಿ.ಎಸ್.ಫಾಲ್ಗುಣಿ ಸಜ್ಜನ್ (ಪ್ರಥಮ) ಎಸ್‍ಆರ್‍ಎಸ್ ಶಾಲೆಯ ವಿ.ಬಿ ಹನ್ಸಿಕಾಗೆ (ದ್ವಿತೀಯ), ಚಿನ್ಮೂಲಾದ್ರಿ ಪ್ರೌಢಶಾಲೆಯ ಕೆ. ಐಶ್ವರ್ಯ (ತೃತೀಯ), ಕೆ.ಕೆ.ನ್ಯಾಷನಲ್ ಶಾಲೆಯ ಬಿ.ಚಂದು (ನಾಲ್ಕನೇ) ಬಹುಮಾನ ಪಡೆದರು.
9ನೇ ತರಗತಿಯಲ್ಲಿ ಎಸ್‍ಆರ್‍ಎಸ್ ಶಾಲೆಯ ಎಸ್.ಮೋನಿಕಾ (ಪ್ರಥಮ), ವಾಸವಿ ವಿದ್ಯಾ ಸಂಸ್ಥೆಯ ಆರ್.ಕೆ.ಜೀವನ್ (ದ್ವೀತಿಯ) ವಾಸವಿ ವಿದ್ಯಾ ಸಂಸ್ಥೆಯ ಜಿ.ಎಸ್.ಮೋನಿಷಾ (ತೃತೀಯ) ಚಿನ್ಮೂಲಾದ್ರಿ ಪ್ರೌಢಶಾಲೆಯ ಸಿ.ಬಿ ಸುಮಾ (ತೃತೀಯ) ಬಹುಮಾನ ಪಡೆದರು.
8ನೇ ತರಗತಿಯಲ್ಲಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ನೂರ್ ಫಾತಿಮಾ (ಪ್ರಥಮ), ಎಸ್‍ಆರ್‍ಎಸ್ ಹೆರಿಟೇಜ್ ಪ್ರೌಢಶಾಲೆಯ ವೈ.ಸಂಜಿತಾ (ದ್ವಿತೀಯ), ವಾಸವಿ ವಿದ್ಯಾ ಸಂಸ್ಥೆಯ ಟಿ.ದೀಕ್ಷಾ (ತೃತೀಯ) ಹಾಗೂ ಪಾಶ್ರ್ವನಾಥ್ ಪ್ರೌಢಶಾಲೆಯ ಪಿ.ಗಗನ (ನಾಲ್ಕನೇ) ಬಹುಮಾನ ಪಡೆದರು.
ಜಿಲ್ಲಾಡಳಿತ, ಅರಣ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪ್ರಾದೇಶಿಕ ಕಚೇರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ  ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಪರಿಸರ ಮಾಲಿನ್ಯ ತಡೆಗಟ್ಟುವ ಮಾರ್ಗವೆಂದರೆ ಮೊದಲು ನಾವು ನಮ್ಮ ಮನಸ್ಸಿನ ಮಾಲಿನ್ಯ ತಡೆಗಟ್ಟಬೇಕು. ನಮ್ಮ ಮನಸ್ಸು ಶುದ್ಧವಾಗಿದ್ದರೆ ಸುತ್ತಮುತ್ತಲಿನ ಪರಿಸರವೂ ಚೆನ್ನಾಗಿರಲಿದೆ ಎಂದು ಹೇಳಿದರು.
ಸಾರ್ವಜನಿಕ ಪ್ರದೇಶಗಳಾದ ಆಸ್ಪತ್ರೆ, ಕಾಲೇಜು, ಸರ್ಕಾರಿ ಕಚೇರಿಗಳ ಸುತ್ತಮುತ್ತ ಶಬ್ಧ ಮಾಲಿನ್ಯ ನಿಯಂತ್ರಿಸಬೇಕು, ಇರುವ ಭೂಮಿಯನ್ನು ನಾವು ನಾಶ ಮಾಡುತ್ತಾ ಹೋದರೆ ನಮ್ಮ ಮುಂದಿನ ಪೀಳಿಗೆಯವರು ಏನು ಮಾಡಬೇಕು. ಅವರಿಗೂ ನಾವು ಪರಿಸರ ಉಳಿಸಿ, ಸಂರಕ್ಷಿಸಬೇಕು. ಶಾಲೆಗಳಲ್ಲಿ  ಕ್ರಾಪ್ಟ್ ತರಗತಿಯಲ್ಲಿ ಮಕ್ಕಳಿಗೆ ಬಟ್ಟೆ ಬ್ಯಾಗ್ ಹಾಕುವುದನ್ನು ಕಲಿಸುವುದರಿಂದ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬಹುದು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಲಯ ಕಚೇರಿಯ ಹಿರಿಯ ಪರಿಸರ ಅಧಿಕಾರಿ ಬಿ.ಎಸ್.ಮುರುಳೀಧರ ಮಾತನಾಡಿ, ಪ್ರತಿವರ್ಷವು ಒಂದೊಂದು ಘೋಷ ವಾಕ್ಯದ ಮೂಲಕ ಪರಿಸರ ದಿನಾಚರಣೆ ಆಚರಿಸಲಾಗುತ್ತದೆ. ನಾವು ಆರೋಗ್ಯ ಕಾಪಾಡಿಕೊಳ್ಳಲು ಪರಿಸರ ಬಹಳ ಮುಖ್ಯವಾಗಿದೆ. ಕೋವಿಡ್ ಸಂದರ್ಭದಲ್ಲಿ ಅನೇಕರು ಆಕ್ಸಿಜನ್ ಸಿಗದೆ ಪ್ರಾಣ ಬಿಟ್ಟರು. ನಮ್ಮ ಸುತ್ತಮುತ್ತಲಿನ ಪರಿಸರ ಚೆನ್ನಾಗಿದ್ದರೆ ಅಂತಹ ಪರಿಸ್ಥಿತಿಯೇ ಉದ್ಭವಿಸುತ್ತಿರಲಿಲ್ಲ. ವಿದ್ಯಾರ್ಥಿಗಳು ಶಾಲೆಯಲ್ಲಿ ಎಲ್ಲರೂ ಒಂದೊಂದು ಗಿಡ ನೆಡಿ ಎಂದು ಸಲಹೆ ನೀಡಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಪ್ರಕಾಶ್ ಮಾತನಾಡಿ, ನಾವುಗಳು ನಮ್ಮ ಪರಿಸರವನ್ನು ಜೀವಿಸುವುದಕ್ಕಾಗಿ ಉಳಿಸಿಕೊಳ್ಳಬೇಕಿದೆ. ಭೂಮಿಯಲ್ಲಿ ವೈವಿಧ್ಯಮಯವಾದ ಪರಿಸರವಿದೆ. ಭೂಮಿ ಜೀವರಾಶಿಗಳು ವಾಸಿಸಲು ಯೋಗ್ಯವಾದ ಸ್ಥಳವಾಗಿದೆ. ಜನಸಂಖ್ಯೆ, ನಗರೀಕರಣ, ಕೈಗಾರೀಕಣ ಹೆಚ್ಚುತ್ತಿದೆ. ಇದರಿಂದ ಮನುಷ್ಯನ ಮೇಲೆ ತುಂಬಾ ದುಷ್ಪರಿಣಾಮಗಳು ಬೀರುತ್ತವೆ ಹಾಗಾಗಿ ಪರಿಸರವನ್ನು ಸಂರಕ್ಷಣೆ ಮಾಡಲು ಎಲ್ಲರು ಪಣ ತೊಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪ ಪರಿಸರ ಅಧಿಕಾರಿ ಪಿ. ರಾಜೇಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಬಸವರಾಜ್ ಓಲೇಕಾರ್, ನಾರಾಯಣ್ ಮೈನ್ಸ್ ಅಧಿಕಾರಿಗಳಾದ ಮಾದೇಶ್, ಸಂಜನಾ, ನಾರಾಯಣ್ ಸ್ವಾಮಿ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

 

 

[t4b-ticker]

You May Also Like

More From Author

+ There are no comments

Add yours