ಮಹಿಳಾ ಅಭ್ಯರ್ಥಿಗಳಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ.

 

 

 

 

ಚಿತ್ರದುರ್ಗ:: 2020-21ನೇ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಅನುಷ್ಠಾನಗೊಳಿಸುತ್ತಿರುವ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ, ಲಿಂಗತ್ವ ಅಲ್ಪಸಂಖ್ಯಾತರಿಗೆ ನಿಗಮದಿಂದ ನೇರವಾಗಿ ರೂ.25,000/-ಗಳ ಸಾಲ ಮತ್ತು ರೂ.25,000/- ಸಹಾಯಧನ ಒಟ್ಟು ರೂ.50,000/-ಗಳ ಆರ್ಥಿಕ ಸೌಲಭ್ಯ ನೀಡಲಾಗುವುದು.
ಚಿತ್ರದುರ್ಗ ಜಿಲ್ಲೆಗೆ ಭೌತಿಕ 15 ಗುರಿ ನಿಗದಿಪಡಿಸಲಾಗಿದ್ದು, ಈ ಯೋಜನೆಯಡಿ ಸೌಲಭ್ಯ ಪಡೆಯಲು ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ನಿಬಂಧನೆಗಳು: ಅರ್ಜಿದಾರರು ಸಾಲ ಸೌಲಭ್ಯ ಪಡೆಯಲು ಜಿಲ್ಲೆಯಲ್ಲಿರುವ ಸಮುದಾಯ ಆಧಾರಿತ ಸಂಸ್ಥೆಯಿಂದ ನೊಂದಾಯಿತ ಸದಸ್ಯತ್ವನ್ನು ಅಫಿಡೆವಿಟ್ ಮೂಲಕ ಪಡೆದ ಬಗ್ಗೆ ದೃಢೀಕರಣ ಸಲ್ಲಿಸುವುದು. ಅರ್ಜಿದಾರರು ಅಧೀಕೃತ ನಿವಾಸದ ವಿಳಾಸ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿ ದಾಖಲಾತಿಯ ಪ್ರತಿಯನ್ನು ಸಲ್ಲಿಸುವುದು. ಅರ್ಜಿದಾರರು ಆಯ್ಕೆ ಮಾಡಿಕೊಂಡ ಆದಾಯೋತ್ಪನ್ನ ಚಟುವಟಿಕೆಯ ಯೋಜನಾವರದಿ ಸಲ್ಲಿಸಬೇಕು. ಅರ್ಜಿದಾರರು ರಾಷ್ಟ್ರೀಕೃತ ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಚಾಲ್ತಿಯಲ್ಲಿರಬೇಕು ಮತ್ತು  ಆಧಾರ್ ಸಂಖ್ಯೆ ಬ್ಯಾಂಕಿಗೆ ಜೋಡಣೆಯಾಗಿರಬೇಕು.ರೂ.20ಗಳ ಛಾಪಕಾಗದಲ್ಲಿ ನಿಗಧಿತ ಅವಧಿಯಲ್ಲಿ ಮರು ಪಾವತಿಸುವ ಕುರಿತು ಹಾಗೂ ಮರುಪಾವತಿ ಮಾಡದಿದ್ದಲ್ಲಿ ಕಾನೂನು ಕ್ರಮಕ್ಕೆ ಬದ್ದರಾಗುವ ಬಗ್ಗೆ ಮಾಡಿಕೊಳ್ಳುವ ಒಪ್ಪಂದ ಕರಾರು ಪತ್ರ ಸಲ್ಲಿಸುವುದು. ಅರ್ಜಿದಾರರು ಖಾತೆ ಹೊಂದಿರುವ ಬ್ಯಾಂಕಿನಿಂದ ಸಾಲ ಪಡೆದಿಲ್ಲ ಎನ್ನುವುದರ ಬಗ್ಗೆ ಬೇಬಾಕಿ ಸರ್ಟಿಫಿಕೇಟ್ ಸಲ್ಲಿಸುವುದು.
ಈ ನಿಬಂಧನೆಗಳಿಗೆ ಒಳಪಟ್ಟು ಅರ್ಜಿ ಸಲ್ಲಿಸುವವರು ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಅರ್ಹ ದಾಖಲೆಗಳೊಂದಿಗೆ ಅಕ್ಟೋಬರ್ 23ರ ಸಂಜೆ 5.30ರೊಳಗಾಗಿ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಚಿತ್ರದುರ್ಗ-08194-235958, ಚಳ್ಳಕೆರೆ-08195-250291, ಹೊಳಲ್ಕೆರೆ-08191-275250, ಹೊಸದುರ್ಗ-08199-230212, ಹಿರಿಯೂರು-08193-263512, ಮೊಳಕಾಲ್ಮುರು-08198-229565 ಗೆ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours