ನಾವೇ ನಿಮ್ಮ ಬಳಿ ಬರ್ತಿವಿ, ಸಮಸ್ಯೆಗೆ ಪರಿಹಾರ ಕೊಡತ್ತಿವಿ :ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ

 

 

 

 

ಚಿತ್ರದುರ್ಗ:(chitrdaurga)  ನಿಮ್ಮ ಸಮಸ್ಯೆಗಳ ಪರಿಹಾರ ಒದಗಿಸುವ ಮೂಲಕ  ಸಮಸ್ಯೆ ಮುಕ್ತ ಗ್ರಾಮದ ಕಡೆ ಹೆಜ್ಜೆ ಹಾಕೋಣ ಎಂದು ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ಹೇಳಿದರು‌.

ತಾಲೂಕಿನ ಹೊಸ ಚೂರಿ ಪಾಪೇನಹಟ್ಟಿಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮದ ಜ್ವಲಂತ ಸಮಸ್ಯೆಗಳಿಗೆ ಸ್ಥಳದಲೇ ಪರಿಹಾರ ಒದಗಿಸುವ ಕೆಲಸ ನಾವು ಮಾಡುತ್ತೇವೆ.ಸರ್ಕಾರ ಜನರ ಮನೆ ಬಾಗಿಲಿಗೆ ಸರ್ಕಾರದ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಜಿಲ್ಲಾಡಳಿತ ಮನೆ ಬಾಗಿಲಿಗೆ ಬಂದು ಆ ಗ್ರಾಮದ ಯಾವುದೇ ಸಮಸ್ಯೆ ಇದ್ದರು ಅದಕ್ಕಾ ಕಾಲಮಿತಿಯೊಳಗೆ ಮತ್ತು ಎಲ್ಲಾ ದಾಖಲೆಗಳು ಒದಗಿಸಿದರೆ ಸ್ಥಳದಲೇ ಪರಿಹಾರ ಒದಗಿಸಲಾಗಿದೆ.

 

 

ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಪಡಿತರ ಚೀಟಿ, ಪೌತಿ ಖಾತೆ ಬದಲಾವಣೆ, ಪಹಣಿ ತಿದ್ದುಪಡಿ, ಪೋಡಿ, ಉಳುಮೆ ಚೀಟಿ, ಹಕ್ಕು ಪತ್ರಗಳ ವಿತರಣೆ, ಸ್ಮಶಾನ ಸಮಸ್ಯೆ, ದಾರಿ ಸಮಸ್ಯೆಗೆ   ಈ ಕಾರ್ಯಕ್ರಮ ಮೂಲಕ  ಸಾರ್ವಜನಿಕರಿಗೆ ಸಹಕಾರಿಯಾಗಿದೆ. ರೈತರು ಕಂದಾಯ ಇಲಾಖೆಗೆ ಸಂಬಂಧಿಸಿದ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.

ಇಂದು  33 ಜನರಿಗೆ  ಪಿಂಚಣಿ  ಆದೇಶ ಪತ್ರ,33 ಪೌತಿ ಖಾತೆ ಬದಲಾವಣೆ ಪಲಾನುಭವಿಗಳು,33 ಪಹಣಿ ವಿತರಣೆ 33 ಹಾಗೂ ಶಿಶು ಅಭಿವೃದ್ಧಿ ಇಲಾಖೆಯಿಂದ  2 ಭಾಗ್ಯಲಕ್ಷ್ಮಿ  ಬಾಂಡ್ ವಿತರಣೆ ಮಾಡಲಾಯಿತು. grama vasthavey

ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಸಮಸ್ಯೆಗಳನ್ನು ಗ್ರಾಮದಲ್ಲೇ ಆಲಿಸಲಾಗುತ್ತಿದೆ. ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹರಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಈ‌ ಸಂದರ್ಭದಲ್ಲಿ ತಾಲೂಕು ಸಮಾಜ‌ ಕಲ್ಯಾಣಧಕಾರಿ ಓ.ಪರಮೇಶ್ವರಪ್ಪ,  ಬಿಇಓ ತಿಪ್ಪೇಸ್ವಾಮಿ, ಪಶುಸಂಗೋಪನೆ ಇಲಾಖೆ ಡಾ.ಕುಮಾರ್, ಕೃಷಿ ಇಲಾಖೆ ಎಡಿ ಚಂದ್ರಕುಮಾರ್, ಇಂಜಿನಿಯರ್ ಪಾತಪ್ಪ ಇದ್ದರು.

[t4b-ticker]

You May Also Like

More From Author

+ There are no comments

Add yours