ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ದೊರಕಿದೆ: ತಹಶೀಲ್ದಾರ್ ಎನ್‌.ರಘುಮೂರ್ತಿ

 

 

 

 

ಚಳ್ಳಕೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರದ  ಆಶಯದಂತೆ 75 ನೇ  ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನವನ್ನು  ಸಂಭ್ರಮದಿಂದ ಆಚರಿಸಿ  ಹರ್ ಘರ್ ತಿರಂಗ ಕಾರ್ಯಕ್ರಮ  ತಾಲೂಕಿನಲ್ಲಿ ಯಶಸ್ವಿಯಾಗಿದೆ ಎಂದು ತಹಶೀಲ್ದಾರ್ ಎನ್‌.ರಘುಮೂರ್ತಿ ಹೇಳಿದರು.

ತಳುಕು ಹೋಬಳಿ ಚೆನ್ನೈಗಾನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಚಳ್ಳಕೆರೆ ತಾಲ್ಲೂಕಿನಲ್ಲಿ 1,450 ಮೀಟರ್ ಉದ್ದದ ರಾಷ್ಟ್ರಧ್ವಜವನ್ನು ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಬಿಂಬಿಸುವ ಮೂಲಕ ದೇಶಪ್ರೇಮ ಮತ್ತು ರಾಷ್ಟ್ರಪ್ರೇಮವನ್ನು ಪ್ರತಿಯೊಬ್ಬರ ಮನೆ ಮತ್ತು ಮನಗಳಲ್ಲಿ ಉಳಿಯುವಂತೆ ಕೆಲಸವನ್ನು ಮಾಡಿದ್ದೇವೆ. ನಮ್ಮ ಹಿರಿಯರು  ತ್ಯಾಗ ಮತ್ತು ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯವನ್ನು  ತಂದು ಕೊಟ್ಟಿದ್ದಾರೆ.  ನಾವೆಲ್ಲರೂ ಕೂಡ ಸ್ವಾತಂತ್ರ್ಯ  ಮತ್ತು ಸಂವಿಧಾನ  ಸದ್ಬಳಕೆ ಮಾಡಿಕೊಂಡು ದೇಶದ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದರು.

 

 

ದೇಶದ ಸ್ವಾತಂತ್ರ್ಯಕ್ಕೆ ಗಾಂಧೀಜಿ ಮತ್ತು ಅಂಬೇಡ್ಕರ್ ಮೊದಲಿಗರಾಗಿ ಸುಭಾಷ್ ಚಂದ್ರ ಬೋಸ್ ಚಂದ್ರಶೇಖರ್ ಆಜಾದ್ , ವೀರ ಸಾವರ್ಕರ್, ಸಂಗೊಳ್ಳಿ ರಾಯಣ್ಣ, ಕಿತ್ತೂರಾಣಿ ಚೆನ್ನಮ್ಮ ಮುಂತಾದ ಹಲವಾರು ವೀರರು  ಸ್ವಾತಂತ್ರ್ಯಕ್ಕಾಗಿತಮ್ಮ ಜೀವನವನ್ನೇ ಮೂಡಿಪಾಗಿಟ್ಟರು.  ಗುರುಗಳ ತ್ಯಾಗ ಮತ್ತು ಬಲಿದಾನದಿಂದ 200 ವರ್ಷಗಳ ಕಾಲ ಬ್ರಿಟಿಷರಲ್ಲಿದ್ದಂತ ಸ್ವಾತಂತ್ರ್ಯವನ್ನು ನಾವುಗಳ ಪಡೆದಿದ್ದೇವೆ. ಈ 75 ವರ್ಷಗಳ ಅವಧಿಯಲ್ಲಿ ದೇಶ ಮತ್ತು ರಾಜ್ಯದಲ್ಲಿ ವಿಜ್ಞಾನ ತಂತ್ರಜ್ಞಾನ ಬಾಹ್ಯಾಕಾಶ ಶಿಕ್ಷಣ ನೀರಾವರಿ ಕೈಗಾರಿಕೆ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದೆ. ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ವಿಶೇಷವಾದ ಸ್ಥಾನಮಾನ ಲಭಿಸಿದೆ.  ಮುಂದೆಯೂ ಕೂಡ  ಶಾಂತಿ ನೆಮ್ಮದಿ ಮತ್ತು ಅಹಿಂಸೆ ನಮ್ಮಲ್ಲಿ ಮನೆ ಮಾಡಬೇಕಿದೆ. ಈ ಭಾಗದ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯುವ ಮುಖಾಂತರ ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ವಾಮ್ಯದ ಹೆಚ್ಚು ಹೆಚ್ಚು ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಆಗಬೇಕು ಎಂದು ಆಶಿಸಿದರು.

ಶೈಕ್ಷಣಿಕ ನೆಲೆಗಟ್ಟು ಭದ್ರಗೊಳ್ಳಬೇಕು ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಶಿಕ್ಷಣದ ಮೂಲಕ ಅಲಂಕರಿಸಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಮುಖಂಡ ರಾಮರೆಡ್ಡಿ ಮಾತನಾಡಿದರು.  ಗ್ರಾಮದ ಹಿರಿಯರಾದಂತಹ ತಿಮ್ಮಾರೆಡ್ಡಿ, ಬಿಜೆಪಿ ಮುಖಂಡರಾದ ಚನ್ನಿಗಾನಹಳ್ಳಿ ಮಲ್ಲೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು ಸಮಾರಂಭದಲ್ಲಿ ಗೌರಸಮುದ್ರ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ರಾಜಣ್ಣ ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರುಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours