ಸರ್ಕಾರ ಮತ್ತು ರಾಜಕೀಯ ಪಕ್ಷಗಳು ವಿಶ್ವಕರ್ಮ ಸಮಾಜವನ್ನು ಲೆಕ್ಕಕ್ಕೆ ಇಟ್ಟಿಲ್ಲ: ಶಂಕರಾತ್ಮಾನಂದ ಸ್ವಾಮಿಜಿ ವಿಷಾದ

 

 

 

 

ಚಿತ್ರದುರ್ಗ ಜು. ೦೩
ಸರ್ಕಾರ ಮತ್ತು ರಾಜಕೀಯ ಪಕ್ಷಗಳು ವಿಶ್ವಕರ್ಮ ಸಮಾಜವನ್ನು ಲೆಕ್ಕಕ್ಕೆ ಇಟ್ಟಿಲ್ಲ ಚುನಾವಣೆ ಸಮಯದಲ್ಲಿ ಮಾತ್ರ ಬರುವ ಅವರು ಮತವನ್ನು ಪಡೆದು ಗೆದ್ದ ನಂತರ ನಮ್ಮ ಬಗ್ಗೆ ಯಾವ ಕೆಲಸವನ್ನು ಸಹಾ ಮಾಡದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಇದರ ಬಗ್ಗೆ ಸಮಾವೇಶದಲ್ಲಿ ಆಲೋಚನೆ ಮಾಡಬೇಕಿದೆ ಎಂದು ಚನ್ನಗಿರಿ ತಾಲ್ಲೂಕಿನ ವಡ್ನಾಳ ವಿಶ್ವಕರ್ಮ ಸಾವಿತ್ರಿ ಪೀಠದ ಶ್ರೀ ಶಂಕರಾತ್ಮಾನಂದ ಸ್ವಾಮಿಜಿ ವಿಷಾಧಿಸಿದರು.

 

 

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶ್ರೀಗಳು, ನಮ್ಮ ಸಮಾಜದ ಜನ ರಾಜ್ಯದಲ್ಲಿ ೩೫ ರಿಂದ ೪೦ ಲಕ್ಷ ಜನರಿದ್ದಾರೆ. ಆದರೆ ಯಾವ ಸರ್ಕಾರವಾಗಲೀ, ರಾಜಕೀಯ ಪಕ್ಷವಾಗಲೀ ನಮ್ಮನ್ನು ಪರಿಗಣಿಸುತ್ತಿಲ್ಲ, ತಾತ್ಸಾರ ಮಾಡುತ್ತಿದೆ. ನಾವುಗಳು ಒಗ್ಗರಣೆಯಲ್ಲಿ ಸಾಸಿವೆ ಇದ್ದಂತೆ ಒಗ್ಗರಣೆಗೆ ಸಾಸಿವೆ ಅಗತ್ಯ ಆದರೆ ಒಗ್ಗರಣೆ ಆದ ಮೇಲೆ ಸಾಸಿವೆಗೆ ಬೆಲೆ ಇಲ್ಲವಾಗಿದೆ. ಅಧಿಕಾರವನ್ನು ಹಿಡಿಯುವ ಸಮಯದಲ್ಲಿ ಮಾತ್ರ ನಮ್ಮ ನೆನಪಾಗುತ್ತದೆ. ತದ ನಂತರ ಮರೆತು ಬಿಡುತ್ತಾರೆ ಎಂದು ದೂರಿದರು.
ನಮ್ಮಿಂದ ಮತವನ್ನು ಪಡೆದ ನಂತರ ನಮ್ಮ ಸಮಸ್ಯೆಯನ್ನು ಆಲಿಸುವುದಿಲ್ಲ, ಸೌಲಭ್ಯವನ್ನು ಸಹಾ ನೀಡುವುದಿಲ್ಲ, ಮನೆ ಮತ್ತು ದೇವಾಲಯ ನಿರ್ಮಾಣದಲ್ಲಿ ನಮ್ಮ ಜನಾಂಗದ ಪಾತ್ರ ಹೆಚ್ಚಾಗಿದೆ. ಆದರೆ ಸರ್ಕಾರ ರಾಜಕೀಯ ಪಕ್ಷದವರು ಇದನ್ನು ಗಮನಿಸುತ್ತಿಲ್ಲ, ಕರೋನ ಸಮಾಯದಲ್ಲಿ ನಮ್ಮ ನಿಗಮಕೆಕ ನೀಡಿದ ಹಣದಲ್ಲಿ ಸರ್ಕಾರ ೧೫ ಕೋಟಿ ಹಿಂದಕ್ಕೆ ಪಡೆದಿದೆಬೇರೆ ಸಮಾಜದವರಿಗೆ ಕೋಟ್ಯಾಂತರ ನೀಡಿದ್ದರೂ ಸಹಾ ಅವರ ಹಣವನ್ನು ಪಡೆಯದೆ ಸಣ್ಣ ಬಡ ಸಮಾಜವಾದ ವಿಶ್ವಕರ್ಮ ನಿಗಮದ ಹಣವನ್ನು ಸರ್ಕಾರ ಪಡೆದಿದೆ ದುರಂತಸಮಾಜದ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದರು.
ಡಿಸೆಂಬರ್ ಅಥವಾ ಜನವರಿಯಲ್ಲಿ ಬೆಂಗಳೂರಿನಲ್ಲಿ ವಿಶ್ವಕರ್ಮ ಸಮಾಜದ ಬೃಹತ್‌ದಾದ ಸಮಾವೇಶವನ್ನು ಮಾಡಲಾಗುವುದು ಇದಕ್ಕೆ ಈ ಸಮಾವೇಶ ಪೂರ್ವಬಾವಿ ಸಭೆಯಾಗಲಿದೆ ಇದಕ್ಕೆ ರಾಜ್ಯದ ಎಲ್ಲರು ಸಹಾ ಸಕ್ರಿಯವಾಗಿ ಭಾಗವಹಿಸಬೇಕಿದೆ ಎಂದು ಶ್ರೀ ಶಂಕರಾತ್ಮಾನAದ ಸ್ವಾಮಿಜಿ ಕರೆ ನೀಡಿದರು.
ಅಖಿಲ ಭಾರತ ವಿಶ್ವಕರ್ಮ ಪರಿಷತ್ ರಾಜ್ಯಾಧ್ಯಕ್ಷರಾದ ಆರ್.ಪ್ರಸನ್ನಕುಮಾರ್ ಮಾತನಾಡಿ ಪರಿಷತ್ ದೆಹಲಿಯಲ್ಲಿ ಕೇಂದ್ರ ಸ್ಥಾನವನ್ನು ಮಾಡಿದ್ದು ದೇಶದಲ್ಲಿ ೯ ರಾಜ್ಯ ಹಾಗೂ ರಾಜ್ಯದ ೬ ಜಿಲ್ಲೆಗಳಲ್ಲಿ ಇದೆ. ವಿಶ್ವಕರ್ಮ ಸಮಾಜ ಹಿಂದುಳಿದ ಅತಿ ಎರಡನೇ ಸಮಾಜವಾಗಿದೆ. ೫ ಕಸುಬುಗಳನ್ನು ಮಾಡುವುದರ ಮೂಲಕ ತಮ್ಮ ಬದುಕನ್ನು ನಿರ್ವಹಿಸುತ್ತಾ ಸಮಾಜದ ಇತರರೆಗೆ ನೆರವಾಗುತ್ತಿದ್ದಾರೆ. ನಮ್ಮ ಜನಾಂಗದಲ್ಲಿ ೧೧೦ ಮಠಗಳಿದ್ದು, ಇದರಲ್ಲಿನ ಶ್ರೀಗಳು ಜು. ೧೧ ರಂದು ದಾವಣಗೆರೆಯಲ್ಲಿ ನಡೆಯುವ ವಿಶ್ವಕರ್ಮರ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ನಮ್ಮ ಜನಾಂಗದ ಸುಮಾರು ೬೫೦ ಕಾಳಿಕಾಂಬ ದೇವಾಲಯಗಳಿದ್ದು ಇವುಗಳನ್ನು ಸ್ವಂತವಾಗಿ ನಿರ್ಮಾಣ ಮಾಡಲಾಗಿದೆ ಸರ್ಕಾರದ ಯಾವುದೇ ಸಹಾಯವನ್ನು ಪಡೆದಿಲ್ಲ ನಾವೇ ಇದರ ನಿರ್ಮಾಣ ಮಾಡಲಾಗಿದೆ. ಜು.೧೧ರ ಸಮಾವೇಶದಲ್ಲಿ ಎಲ್ಲಾ ರಾಜಕೀಯ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ. ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರವರಿಗೆ ಸಮಾಜದವತಿಯಿಂದ ಪ್ರಶಸ್ತಿಯನ್ನು ನೀಡಲಾಗುವುದು. ಇದರೊಂದಿಗೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು ಎಂದರು.
ಗೋಷ್ಟಿಯಲ್ಲಿ ಶಂಕರ್‌ಚಾರ್, ನಾರಾಯಣಚಾರ್, ಮೌನೇಶ್ವರಚಾರ್, ಶಂಕರಮೂರ್ತಿ ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours