ವಾಲ್ಮೀಕಿ ಜಾತ್ರೆ: ಕಿಚ್ಚನ ಅಭಿಮಾನಿಗಳ ಅಕ್ರೋಶ,ನಟ ಸುದೀಪ್ ಮಾತು ಕೇಳಿ ಎಲ್ಲಾರೂ ಅಚ್ಚರಿ!

 

 

 

 

ಇದೇ ರೀತಿ ನಿನ್ನೆ ( ಫೆಬ್ರವರಿ 9 ) ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನ ಕಿಚ್ಚ ಸುದೀಪ್ ರಾಜನಹಳ್ಳಿಯಲ್ಲಿ ನಡೆದ ಜಾತ್ರಾ ಮಹೋತ್ಸವದ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಜಮಾಯಿಸಿದ್ದರು. ನೆಚ್ಚಿನ ನಟನ ಆಗಮನಕ್ಕಾಗಿ ಕಾದು ಕುಳಿತು ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಕಿಚ್ಚ, ಕಿಚ್ಚ ಎಂದು ಘೋಷಣೆ ಕೂಗಲಾರಂಭಿಸಿದರು. ಇನ್ನು ಕಾರ್ಯಕ್ರಮ ಶುರುವಾಗಿ ಬಹಳ ಸಮಯ ಕಳೆದರೂ ಸುದೀಪ್ ಆಗಮನವಾಗದೇ ಇದ್ದದ್ದನ್ನು ಕಂಡ ಕಿಚ್ಚ ಸುದೀಪ್ ಅಭಿಮಾನಿಗಳು ಕಿಚ್ಚ ಎಲ್ಲಿ ಎಂದು ಘೋಷಣೆ ಕೂಗುತ್ತಾ ಕಾರ್ಯಕ್ರಮದ ಆಯೋಜಕರ ವಿರುದ್ಧ ಕಿಡಿಕಾರಿದರು. ಆದರೆ ಕಾರ್ಯಕ್ರಮ ಮುಗಿದರೂ ಸಹ ಕಿಚ್ಚ ಸುದೀಪ್ ಬರಲೇ ಇಲ್ಲ. ಇದರಿಂದ ಕೋಪಗೊಂಡ ಸುದೀಪ್ ಅಭಿಮಾನಿಗಳು ಅಲ್ಲಿದ್ದ ಕುರ್ಚಿಗಳನ್ನು ಹೊಡೆದುಹಾಕಿ ಆಕ್ರೋಶ ಹೊರಹಾಕಿದ್ರು. ಇನ್ನು ಸುದೀಪ್ ಈ ರೀತಿ ಯಾಕೆ ಮಾಡಿದ್ರು ಎಂಬ ಪ್ರಶ್ನೆಯೂ ಸಹ ಎದ್ದಿತ್ತು.

 

 

ವಾಲ್ಮೀಕಿ ಸಮಾಜದ ಮೀಸಲಾತಿ ಹೆಚ್ಚಳದ ಪ್ರತಿಯನ್ನು ಪ್ರಸನ್ನಾನಂದಪುರಿ ಶ್ರೀಗಳಿಗೆ ತೋರಿಸಿದ್ದೇನೆ: ಸಿಎಂ ಬೊಮ್ಮಾಯಿ

ಹೀಗೆ ತಾವು ಕಾರ್ಯಕ್ರಮಕ್ಕೆ ಬರದಿದ್ದ ಕಾರಣದಿಂದಾಗಿ ತಮ್ಮ ಅಭಿಮಾನಿಗಳು ಆಕ್ರೋಶ ಹೊರಹಾಕಿದ ಸುದ್ದಿ ಕಿವಿಗೆ kicha sudeeep ಬಿದ್ದೊಡನೆ ಮಧ್ಯರಾತ್ತಿ ಟ್ವೀಟ್ ಮಾಡಿರುವ ಸುದೀಪ್ ತನಗೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಯಾವುದೇ ರೀತಿಯ ಆಹ್ವಾನ ಬಂದಿಲ್ಲ ಎಂದಿದ್ದಾರೆ. “ಸ್ನೇಹಿತರಿಗೆ ನಲ್ಮೆಯ ನಮಸ್ಕಾರ -ದಾವಣಗೆರೆಯ ಜಿಲ್ಲೆಯ ರಾಜನಹಳ್ಳಿಯ ಘಟನೆ ತಿಳಿದು ಬೇಸರವಾಯಿತು.ನನಗೆ ಕಾರ್ಯಕ್ರಮದ Rajanahalli  ಆಯೋಜಕರಿಂದ ಆಹ್ವಾನವಿರಲಿಲ್ಲ.ಕಾರ್ಯಕ್ರಮದ ಕುರಿತು ಮಾಹಿತಿಯೂ ಇರಲಿಲ್ಲ.ನಾನು ಒಪ್ಪಿಕೊಂಡ ಕಾರ್ಯಕ್ರಮಗಳನ್ನು ತಪ್ಪಿಸಿದವನಲ್ಲ. ಆದರೂ ಇಂದು ನಡೆದ ಘಟನೆಯ ಬಗ್ಗೆ ತೀವ್ರ ವಿಷಾದವಿದೆ.ನಿಮ್ಮ ಜೊತೆ ಬೆರೆಯಲು ನನಗೂ ಸದಾ ಆತೀವ ಆಸೆ.. ಮುಂದೆ ಖಂಡಿತ ಬರುವೆ. ಪ್ರೀತಿ ಇರಲಿ. valamiki fair  ಶಾಂತರೀತಿಯಿಂದ ವರ್ತಿಸಿ. ಪ್ರೀತಿಯೊಂದಿಗೆ ನಿಮ್ಮ ಕಿಚ್ಚ….” ಎಂದು ಬರೆದುಕೊಂಡಿದ್ದಾರೆ.

[t4b-ticker]

You May Also Like

More From Author

+ There are no comments

Add yours