ಸಾರ್ವಜನಿಕರು ಸರ್ಕಾರಿ ಜಮೀನನ್ನು ಅನಧಿಕೃತವಾಗಿ ಉಪಯೋಗಿಸುವುದು ಕಾನೂನು ಅಪರಾಧ : ತಹಶೀಲ್ದಾರ್ ಎನ್.ರಘಮೂರ್ತಿ

 

 

 

 

ಚಳ್ಳಕೆರೆ:  ತಾಲೂಕಿನ  ನಾಯಕನಹಟ್ಟಿ ಹೋಬಳಿಯ ಅಬ್ಬೇನಹಳ್ಳಿ ಸರ್ವೇ ನಂಬರ್ 27 /4ರಲ್ಲಿ ಕಳೆದ 15 ವರ್ಷಗಳಿಂದ ಸರ್ಕಾರಿ ಪ್ರೌಢಶಾಲೆ ಹೆಸರಿಗೆ ಪ್ರಸ್ತಾಪಿಸಿರುವ ಎರಡು ಎಕರೆ ಸರ್ಕಾರಿ ಜಮೀನನ್ನು   ವೀರಭದ್ರಪ್ಪ ಬಿನ್ ನಾಗಪ್ಪ ಇವರು ಒತ್ತುವರಿ ಮಾಡಿದ ಸ್ಥಳಕ್ಕೆ  ತಹಶೀಲ್ದಾರ್ ಎನ್.ರಘುಮೂರ್ತಿ ಭೇಟಿ ನೀಡಿ ಪರಿಶೀಲಿಸಿದರು.

 

 

ಸ್ಥಳದಲ್ಲಿ   ಜನರ ಜೊತೆ ಮಾತನಾಡಿ  ಹಲವು ಬಾರಿ ನೋಟಿಸ್ ಕೊಟ್ಟಿದ್ದರು ಸದರಿ ಭೂಮಿಯನ್ನು ಬಿಟ್ಟು ಕೊಡದೆ ಅಂತಿಮವಾಗಿ ನನ್ನ ಗಮನಕ್ಕೆ ಬಂದ ಕಾರಣ ನಾನು ಬಂದಿದ್ದೇನೆ.   ಸರ್ವೆಯರ್ ನಾಯಕನಹಟ್ಟಿ  ಪೊಲೀಸ್ ಉಪನಿರೀಕ್ಷಕ ಶಿವರಾಜ್ ಮತ್ತು ಕಂದಾಯ ಪೊಲೀಸ್ ಇಲಾಖೆ ಸಿಬ್ಬಂದಿಗಳೊಂದಿಗೆ ಆಗಮಿಸಿ ಸದರಿ ಸರ್ಕಾರಿ ಜಮೀನನ್ನು ಸ್ಥಳದಲ್ಲಿ ಅಳತೆ ಮಾಡಿಸಿ ಇದೇ ಗ್ರಾಮದ ವೀರಭದ್ರಪ್ಪ ಬಿನ್ ನಾಗಪ್ಪ ಇವರು 2 ಎಕ್ರೆ ಪ್ರದೇಶವನ್ನು ಒತ್ತುವರಿ ಮಾಡಿರುವುದು ಮತ್ತೆ ಸಿದ್ಧಪಡಿಸಿಕೊಂಡು ಸ್ಥಳದಲ್ಲಿಯೇ ಜೆಸಿಬಿ ತರಿಸಿ ಸರ್ಕಾರದ ವಶಕ್ಕೆ ಪಡೆದು ಟ್ರೆಂಚ್ ಒಡೆಸಿದ್ದೇನೆ. ಇರುವುದೊಂದೇ  ಭೂಮಿ ಈ ಭೂಮಿ ನಮ್ಮ ತಾಯಿ ಇದ್ದಾಗೆ ಈ ಭೂಮಿಯಲ್ಲಿನ ಯಾವುದೇ ಸರ್ಕಾರಿ ಜಮೀನನ್ನು ಅನಧಿಕೃತವಾಗಿ ಉಪಯೋಗಿಸುವುದು ಅಪರಾಧವಾಗಿದೆ. ಕಾನೂನಿನ ತಿಳುವಳಿಕೆ ಇಲ್ಲದೆ ನೀನು ಒತ್ತುವರಿ ಮಾಡಿಕೊಂಡಿದ್ದೀಯ ಮುಂದೆ ಇಂತಹ ಯಾವುದೇ ಕೃತ್ಯಕ್ಕೆ ಕೈ ಹಾಕಬಾರದು ಎಂದು ಎಚ್ಚರಿಕೆ ನೀಡಿದರು.  ಸರ್ಕಾರಿ ಸ್ವತ್ತುಗಳ ಆದಂತಹ ಕೆರೆಕಟ್ಟೆ ದಾರಿ ಗೋಮಾಳ ಮತ್ತು ಕಾವಲುಗಳ ಅಂತಹ ಜಮೀನುಗಳನ್ನು ಯಾವುದೇ ಕಾರಣಕ್ಕೂ ಅತಿಕ್ರಮ ಮಾಡಬಾರದು ಎಂದರು.

ಕಂದಾಯ ಇಲಾಖೆಯಿಂದ ಕೊಡ ಮಾಡುವಂತಹ ಎಲ್ಲ ಸೌಲಭ್ಯಗಳನ್ನು ನಿಮ್ಮ ಮನೆ ಬಾಗಿಲಿಗೆ ತಾಲೂಕು ಆಡಳಿತ ವತಿಯಿಂದ ಪೂರೈಸಲಾಗುವುದು ಗ್ರಾಮದಲ್ಲಿ ಶಾಂತಿ ಮತ್ತು ಸೌಹಾರ್ದತೆ ಬಹಳ ಮುಖ್ಯ ಶಾಂತಿಭಂಗ ಕಡದವ ಯಾವುದೇ ಕೆಲಸಕ್ಕೆ ಕೈ ಹಾಕಬಾರದು ಸಾಮರಸ್ಯದ ಜೀವನಕ್ಕೆ ನೀವೆಲ್ಲ ಪ್ರಯತ್ನಿಸಿ ಎಂದು ಕಿವಿಮಾತು ಹೇಳಿದರು ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ರೇವಣ್ಣ ರಾಜಸ್ವನಿರೀಕ್ಷಕರ ಚೇತನ್ ಕುಮಾರ್ ತಾಲೂಕು ಸರ್ವೆಯರ್ ಪ್ರಸನ್ನಕುಮಾರ್ ಶಾಲಾ ಆಡಳಿತ ಮಂಡಳಿಯ ಸದಸ್ಯರು ಪ್ರೌಢ ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours