ಕಣ್ಣಾಮುಚ್ಚಾಲೆ ಆಡುವಾಗ ಐಸ್‌ ಕ್ರೀಮ್ ಬಾಕ್ಸ್‌ನಲ್ಲಿ‌ ಅಡಗಿ ಕುಳಿತಿದ್ದಾಗ ಇಬ್ಬರು ಬಾಲಕಿಯರು ಸಾವು

 

 

 

 

ಮೈಸೂರು, ಏ.27- ಕಣ್ಣಾಮುಚ್ಚಾಲೆ ಆಡುವಾಗ ಐಸ್‌ ಕ್ರೀಮ್ ಬಾಕ್ಸ್‌ನಲ್ಲಿ‌ ಅಡಗಿ ಕುಳಿತಿದ್ದಾಗ ಇಬ್ಬರು ಬಾಲಕಿಯರು ಉಸಿರುಗಟ್ಟಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಂಜನಗೂಡು ತಾಲೂಕಿನ ಮಸಗೆ ಗ್ರಾಮದಲ್ಲಿ ನಡೆದಿದೆ.
ಮಸಗೆ ಗ್ರಾಮದ ನಾಗರಾಜು-ಚಿಕ್ಕದೇವಮ್ಮ ಎಂಬುವರ ಪುತ್ರಿ ಭಾಗ್ಯ (12) ಹಾಗೂ ರಾಜನಾಯಕ -ಗೌರಮ್ಮ ಎಂಬುವರ ಪುತ್ರಿ ಕಾವ್ಯ (7) ಮೃತಪಟ್ಟವರು.
ಆಟ ಆಡುತ್ತಿದ್ದ ಸಂದರ್ಭದಲ್ಲಿ ಐಸ್ ಕ್ರೀಮ್ ಬಾಕ್ಸ್ ಒಳಗೆ ನತದೃಷ್ಟ ಬಾಲಕಿಯರಿಬ್ಬರೂ ಲಾಕ್ ಆಗಿಬಿಟ್ಟಿದ್ದಾರೆ. ಆ ಐಸ್ ಕ್ರೀಮ್ ಬಾಕ್ಸ್ ಬಾಗಿಲು ತೆರೆಯಲಾಗದೆ ಉಸಿರುಗಟ್ಟಿ ಅಸುನೀಗಿದ್ದಾರೆ.
ತಗಡೂರು ಗ್ರಾಮದ ಹನುಮಂತನಾಯಕ ಅವರ ಐಸ್ ಕ್ರೀಮ್ ಬಾಕ್ಸ್​ ನಲ್ಲಿ ಈ ದುರಂತ ನಡೆದಿದೆ. ಕಣ್ಣಾಮುಚ್ಚಾಲೆ ಆಡುತ್ತಾ ಐಸ್ ಕ್ರೀಮ್ ಬಾಕ್ಸ್ ಒಳಗೆ ಅಡಗಿ ಕುಳಿತ ಬಾಲಕಿಯರು ಸುಮಾರು ಅರ್ಧ ಗಂಟೆ ಸಮಯ ಕಳೆದರೂ ಹೊರಬಂದಿಲ್ಲ. ಬಾಗಿಲು ತೆರೆದು ನೋಡಿದಾಗ ಉಸಿರುಗಟ್ಟಿ ಸಾವನ್ನಪ್ಪಿರುವುದು ಪತ್ತೆಯಾಗಿದೆ. ಈ ಪ್ರಕರಣದ ವಿಚಾರವಾಗಿ ಯಾವುದೇ ದೂರು ದಾಖಲಾಗಿಲ್ಲ.
ನಂಜನಗೂಡು ತಾಲ್ಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ‌ ಪ್ರಕರಣ ನಡೆದಿದೆ. ಯಾವುದೇ ದೂರು ದಾಖಲಿಸದೆ ಮೃತ ಬಾಲಕಿಯರಿಬ್ಬರ ಶವಸಂಸ್ಕಾರವನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours