ಎರಡು ಡಜನ್ ಕ್ಕೂ ಹೆಚ್ಚು ಎಂಪಿ ಆಕಾಂಕ್ಷಿಗಳು, ಸಚಿವ ಮಹದೇವಪ್ಪ ಹೇಳಿದ್ದೇನು

 

 

 

 

ಚಿತ್ರದುರ್ಗ:  ಲೋಕಸಭೆ ಚುನಾವಣೆಗೆ ತಯಾರಿ ಆರಂಭಿಸಿರುವ ಕಾಂಗ್ರೆಸ್  (congress )  ಪಾಳೆಯದಲ್ಲಿ ರಣೋತ್ಸಾಹ ಮೂಡಿದೆ. ಅದರ ಛಾಪು ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಕಂಡುಬಂದಿತು.

ಸಭೆ ಆರಂಭದಲ್ಲೇ ಮಾತನಾಡಿದ ಡಾ.ಎಚ್.ಸಿ.ಮಹಾದೇವಪ್ಪ, ನಮ್ಮ ಪಕ್ಷದ ಮುಂದಿರುವ ಸವಾಲು ಮುಂದಿನ ಲೋಕಸಭೆ ಚುನಾವಣೆ. ಮತ್ತೊಮ್ಮೆ ಸರ್ಕಾರ ಜನರ ಆಶೀರ್ವಾದ ಪಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಕಾರ್ಯಕರ್ತರು ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕು ಎಂದರು. ನಾನು ವೀಕ್ಷಕನಾಗಿ ಇಲ್ಲಿಗೆ ಆಗಮಿಸಿದ್ದೇನೆ. ಎಲ್ಲ ಆಕಾಂಕ್ಷಿಗಳು, ಅವರ ಬೆಂಬಲಿಗರು, ಶಾಸಕರು, ಸಚಿವರು, ಪಕ್ಷದ ಜಿಲ್ಲೆ, ತಾಲೂಕು ಪದಾಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹಿಸಿ ಗೆಲ್ಲುವುದನ್ನು ಮಾತ್ರ ಮಾನದಂಡವನ್ನಾಗಿ ಇರಿಸಿಕೊಂಡು ವರಿಷ್ಠರಿಗೆ ವರದಿ ಸಲ್ಲಿಸುತ್ತೇನೆ ಯಾರ ಪರ ಅಥವಾ ವಿರೋಧವಾಗಿ ನಾನಿಲ್ಲ ಎಂದು ಸ್ಪಷ್ಟಪಡಿಸಿದರು. ಆನಂತರ ಲೋಕಸಭೆ ಟಿಕೇಟ್ ಆಕಾಂಕ್ಷಿಗಳು ಒಬ್ಬೊಬ್ಬರಾಗಿ ಬಂದು ಹೆಸರು ಹೇಳಿ ಪರಿಚಯ ಮಾಡಿಕೊಂಡು, ಪಕ್ಷದಲ್ಲಿ ಕೆಲಸ ಮಾಡಿರುವುದನ್ನು ತಿಳಿಸಿ ಇಂಥ ಕಾರಣಕ್ಕೆ ನಾನು ಆಕಾಂಕ್ಷಿ ಎಂದು ಹೇಳುತ್ತಾ ಹೋದರು.
ಚಿತ್ರದುರ್ಗ ಲೋಕಸಭೆಗೆ ಕೈ ಟಿಕೇಟ್ ಆಕಾಂಕ್ಷಿಗಳ ಪಟ್ಟಿ ಎರಡು ಡಜನ್‌ ತಲುಪಿದ್ದು ವಿಶೇಷ.

ವಿಕ್ಷಕರಾಗಿ ಸಚಿವ ಮಹದೇವಪ್ಪ ಆಗಮನ 

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವೀಕ್ಷಕರಾಗಿ ನೇಮಕವಾಗಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿ, ಪೂರ್ವಭಾವಿ ಸಭೆ ನಡೆಸಿ, ಆಕಾಂಕ್ಷಿಗಳಿಂದ ಅರ್ಜಿ ಪಡೆದುಕೊಂಡರು.
ವೀಕ್ಷಕರಾಗಿರುವ ಎಚ್.ಸಿ.ಮಹಾದೇವಪ್ಪ ಅವರ ಮುಂದೆ ಶಕ್ತಿ ಪ್ರದರ್ಶನ ಮಾಡಲು ಎಲ್ಲ ಆಕಾಂಕ್ಷಿಗಳು ನೂರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಕಚೇರಿ ಮುಂದೆ ಜಮಾವಣೆಗೊಂಡಿದ್ದರು.

ಪೂರ್ವಭಾವಿ ಸಭೆಯಲ್ಲಿ
ಶಕ್ತಿ ಪ್ರದರ್ಶನ ಮಾಡಿದ ಎಂಪಿ ಟಿಕೇಟ್ ಆಕಾಂಕ್ಷಿಗಳು
ಬರೋಬ್ಬರಿ 2 ಡಜನ್ ಮೀರಿದ ಪಟ್ಟಿ .

ಇದನ್ನೂ  ಓದಿ: 40 ಸಾವಿರ ಲಂಚ ಪಡೆಯುವಾಗ ಪಿಡಿಓ‌ ಸೇರಿ ಇಬ್ಬರು ಲೋಕಯುಕ್ತ ಬಲೆಗೆ

ಕಾಂಗ್ರೆಸ್‍ನಿಂದ ಲೋಕಸಭೆ ಟಿಕೇಟ್ ಬಯಸಿ ವೀಕ್ಷಕರ ಮುಂದೆ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ ಪಟ್ಟಿ ಈ ರೀತಿ ಇದೆ

 

 

2009 ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಜೆ.ಜೆ.ಹಟ್ಟಿ ಡಾ.ತಿಪ್ಪೇಸ್ವಾಮಿ, ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ವಿನಯ್ ತಿಮ್ಮಾಪುರ, ಪಾವಗಡದ ಎಚ್.ವಿ.ಕುಮಾರಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ರಾಮಪ್ಪ, ಸುನೀಲ್ ಕುಮಾರ್, ಪಿ.ರಘು, ಹನುಮಂತಪ್ಪ ಗೋಡೆಮನೆ, ಬಾಬಾ ಸಾಹೇಬ್ ಜುಲೇಲಕರ್, ಹಿರಿಯೂರು ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಎಂಎಸ್‍ಐಎಲ್ ಮಾಜಿ ಅಧ್ಯಕ್ಷ ಡಿ.ಬಸವರಾಜು, ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಚೌಳೂರು ಲೋಕೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಜಯಲಕ್ಷ್ಮೀ, ಮಲ್ಲೇಶಪ್ಪ, ಎಚ್.ಸಿ.ನಿರಂಜನಮೂರ್ತಿ, ಜಿ.ಎಚ್.ಮೋಹನ್ ಸೇರಿದಂತೆ ಒಟ್ಟು 24 ಜನ ಟಿಕೇಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ.

ಜಿಲ್ಲೆ, ರಾಜ್ಯದ ಕಾಂಗ್ರೆಸ್ ಪಕ್ಷದ ವರಿಷ್ಠರು ಈ ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಿ ಹೈಕಮಾಂಡ್ ಅಂಗಳಕ್ಕೆ ಸಲ್ಲಿಕೆ ಮಾಡಲಿದ್ದಾರೆ…

ಚಿತ್ರದುರ್ಗ ಲೋಕಸಭಾ ಕ್ಷೇತ್ರ ವಿಕ್ಷಕರಾಗಿ ಆಗಮಿಸಿದ್ದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಮಾತನಾಡಿ ಚಿತ್ರದುರ್ಗದಲ್ಲಿ ಐತಿಹಾಸಿಕ ಎಸ್ಸಿ ಎಸ್ಟಿ ಸಮಾವೇಶ ಮಾಡುವ ಮೂಲಕ ರಾಜ್ಯದಲ್ಲಿ ಅಧಿಕಾರಿ ಚುಕ್ಕಾಣಿ ಹಿಡಿಯಲು ತಾವುಗಳು ಶ್ರಮಿಸಿದ್ದಿರಿ ನಿಮಗೆ ಕೃತಜ್ಞತೆಗಳ ಅರ್ಪಿಸುತ್ತೇನೆ.
ನಮ್ಮ ಸರ್ಕಾರ ಬಂದು ಆರು ತಿಂಗಳು ಪೂರೈಸಿದೆ. ಅಧಿಕಾರಿಕ್ಕೆ ಬಂದ ಮೊದಲ ದಿನ ಐದು ಗ್ಯಾರೆಂಟಿ ನೀಡುತ್ತೇನೆ ಎಂದು ಜನರಿಗೆ ಬರವಸೆ ಕೊಟ್ಟಂತೆ ಈಗಾಗಲೇ ನಾಲ್ಕು ಗ್ಯಾರೆಂಟಿ ಯೋಜನೆ ಜಾರಿಗೊಳಿಸಿದ್ದೆವೇ. 1.32 ಲಕ್ಷ ಕುಟುಂಬಗಳು ಅನ್ನ ಭಾಗ್ಯ, ಗೃಹಜ್ಯೋತಿ, ಶಕ್ತಿ ಯೋಜನೆ ತಲುಪುತ್ತಿದೆ. ಈ ಮೂಲಕ ಬಡವರಿಗೆ ಬದುಕಿನ ಭದ್ರತೆ ನೀಡಿದ್ದೇವೆ.

ಪಿಟಿಸಿಎಲ್ ಕಾಯ್ದೆಯನ್ನು ವಾಪಸ್ ತಂದಿದ್ದೇನೆ. ಎಸ್ಸಿ, ಎಸ್ಟಿ ಮೀಸಲಾತಿಯಂತೆ ಹಿಂದುಳಿದ ವರ್ಗದವರಿಗೆ ಗುತ್ತಿಗೆ ಮೀಸಲಾತಿ ತಂದಿದ್ದೇವೆ. ಮೇ ತಿಂಗಳಲ್ಲಿ ಮತ್ತೊಂದು ಮಹಾ ಐತಿಹಾಸಿಕ ಕ್ಷಣಗಳು ಸೃಷ್ಟಿಸುವ ಅವಕಾಶ ಲೋಕಚುನಾವಣೆ ಮೂಲಕ ಬರಲಿದೆ. ಎಲ್ಲಾ ಸಮಾಜದವರಿಗೆ . ನಮ್ಮ ಸಾಧನೆ ಮೂಲಕ ಕಾರ್ಯಕರ್ತರ ಒಗ್ಗಟ್ಟಿನ ಮೂಲಕ ಲೋಕಸಭೆ ಗೆಲ್ಲಬೇಕು,ಅದಕ್ಕೆ ತಮ್ಮೆಲ್ಲರ ಶ್ರಮು ಸಹಕಾರ ಅಗತ್ಯ ಎಂದರು.

ಈ ಚುನಾವಣೆ ಸಾವಲಾಗಿ ಸ್ವೀಕರಿಸಿದ್ದೇನೆ. ನಮ್ಮ ಎಲ್ಲಾ ಹಿರಿಯ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗತ್ತದೆ. 8 ಲೋಕಸಭಾ ಕ್ಷೇತ್ರದಲ್ಲಿ , ಬ್ಲಾಕ್ ಕಾಂಗ್ರೆಸ್, ಆಫೀಸ್ ಬ್ಯಾರರ್ , ಅಭಿಪ್ರಾಯ ನೀಡಲಾಗುತ್ತದೆ‌. ಶಾಸಕರ ಅಭಿಪ್ರಾಯ ಪಡೆಯುತ್ತೇನೆ, ನ್ಯಾಯ ಸಮ್ಮತ ಅಭ್ಯರ್ಥಿ ಆಯ್ಕೆ ಗೆ ನನ್ನಿಂದಾಗಲಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಸಚಿವ ಡಿ.ಸುಧಾಕರ್ ,
ಶಾಸಕರಾದ,ಎನ್.ವೈ.ಗೋಪಾಲಕೃಷ್ಣ, ಟಿ.ರಘಮೂರ್ತಿ, ಬಿ.ಜಿ. ಗೋವಿಂದಪ್ಪ ,ಕೆಸಿ ವೀರೇಂದ್ರಪಪ್ಪಿ,ಮಾಜಿ ಸಚಿವ ಹೆಚ್.ಆಂಜನೇಯ,ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್ ಪೀರ್ ಮತ್ತು ಪದಾಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ: ಇಂದು ವಿದ್ಯುತ್ ವ್ಯತ್ಯಯ ಎಲ್ಲೆಲ್ಲಿ ಕರೆಂಟ್ ಇರಲ್ಲ

[t4b-ticker]

You May Also Like

More From Author

+ There are no comments

Add yours