ಕನ್ನಡ ಉಳಿಸಿ ಬೆಳೆಸುವ ಕೆಲಸ ಯುವ ಸಮೂಹ ಮಾಡಬೇಕು:ಶಾಸಕ ಟಿ.ರಘುಮೂರ್ತಿ

 

 

 

 

ಚಳ್ಳಕೆರೆ: ಕನ್ನಡವನ್ನು ಉಳಿಸಿ ಬೆಳೆಸುವಂತಹ ಕೆಲಸ ಎಲ್ಲಾರೂ ಮಾಡಬೇಕಿದೆ, ಕನ್ನಡ ಉಳಿಸಿ ಬೆಳೆಸುವ ಕೆಲಸ ಇಂದಿನ ಯುವ ಸಮೂಹ ಮಾಡಬೇಕಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಚಳ್ಳಕೆರೆ ನಗರದ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

 

 

ಕನ್ನಡ ಪ್ರತಿಯೊಬ್ಬರಲ್ಲಿ  ಬೆಳಕನ್ನು ಚೆಲ್ಲಿದೆ.  ಸರ್ಕಾರ ಅಷ್ಟೆ ಅಲ್ಲದೇ ಭಾಷಾ ಪ್ರೇಮ ಎಲ್ಲಾರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕನ್ನಡ ಜ್ಞಾನ , ಕನ್ನಡ ಬಳಕೆ, ಕನ್ನಡ ಅಧ್ಯಯನ‌ ಹೆಚ್ಚು  ಪರಿಣಾಮಕಾರಿ ಎಂದರು.

ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ರಘುಮೂರ್ತಿ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಡಿಜೆ ವೆಂಕಟೇಶ್, ನಗರಸಭೆ ಅಧ್ಯಕ್ಷರಾದ ಶ್ರೀಮತಿ ಸುಮಕ್ಕ ಅಂಜನಪ್ಪ, ಉಪಾಧ್ಯಕ್ಷರಾದ ಶ್ರೀಮತಿ ಮಂಜುಳಾ ಆರ್ ಪ್ರಸನ್ನ ಕುಮಾರ್, ನಗರಸಭೆ ಸದಸ್ಯರುಗಳಾದ ಶ್ರೀಮತಿ ಸುಜಾತ ಪ್ರಹ್ಲಾದ್, ಶ್ರೀಮತಿ ಕವಿತಾ ಬೋರಯ್ಯ, ಶ್ರೀಮತಿ ಸುಮಾ ಭರಮಯ್ಯ, ಶ್ರೀಮತಿ ಚೈತುಂಬಿ ಮಾಲಿಕ್ ಸಾಬ್, ಪ್ರಕಾಶ್, ರಾಘವೇಂದ್ರ, ರಮೇಶ್ ಗೌಡ, ಮುಖಂಡರುಗಳಾದ ಜಗದೀಶ್, ಕೃಷ್ಣಮೂರ್ತಿ, ದೊಡ್ಡ ರಂಗಪ್ಪ, ಪ್ರಹಲ್ಲಾದ್, ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷರಾದ ವೀರೇಶ್, ಖಾದರ್, ಅಂಜನಪ್ಪ, ಬೋರಣ್ಣ ಹಾಗೂ ಮುಖಂಡರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours