ಹಾಸನಾಂಬೆಯ ದರ್ಶನ ಸಿಗದೇ ಸಿಟ್ಟೆದ್ದು ಬಿಜೆಪಿ ಶಾಸಕ ವಾಪಸ್,

 

 

 

 

ಹಾಸನ: ಹಾಸನಾಂಬೆಯ (Hasanamba Temple) ದರ್ಶನ ಸಿಗದೇ ಬಿಜೆಪಿ (BJP) ಶಾಸಕ ಸ್ವಪಕ್ಷದ ಶಾಸಕನ ವಿರುದ್ಧ ಗರಂ ಆಗಿ, ಏಕವಚನದಲ್ಲೇ ಕಿಡಿಕಾರಿದ ಘಟನೆ ಹಾಸನದಲ್ಲಿ ನಡೆದಿದೆ.

ಮೈಸೂರು (Mysuru) ಜಿಲ್ಲೆಯ ಚಾಮರಾಜ ಕ್ಷೇತ್ರದ ನಾಗೇಂದ್ರ (Nagendra) ಅವರು ಇಂದು ಮಧ್ಯಾಹ್ನ ಕುಟುಂಬ ಸಮೇತರಾಗಿ ಹಾಸನಾಂಬೆ ದೇವಿ ದರ್ಶನಕ್ಕೆ ಆಗಮಿಸಿದ್ದರು. ಆದರೆ ಆ ವೇಳೆ ನೈವೇದ್ಯಕ್ಕಾಗಿ ಗರ್ಭಗುಡಿ ಹಾಗೂ ದೇವಾಲಯದ ಮುಖ್ಯದ್ವಾರ ಮುಚ್ಚಲಾಗಿತ್ತು. ಆದರೆ ಒಂದು ಗಂಟೆಯಾದರೂ ದೇವಾಲಯದ ಒಳಗೆ ಹೋಗಲಾಗದೇ ಶಾಸಕ ನಾಗೇಂದ್ರ ಹಾಗೂ ಕುಟುಂಬಸ್ಥರು ಪರದಾಡಿದ್ದಾರೆ. ಎಷ್ಟೇ ಸಮಯ ಕಾದರೂ ದರ್ಶನ ಸಿಗದೇ ಬೇಸರದಿಂದ ವಾಪಸ್ ತೆರಳುವ ವೇಳೆ ಬಿಜೆಪಿ ಕಾರ್ಯಕರ್ತರ ಎದುರೇ ಶಾಸಕ ಪ್ರೀತಂಗೌಡ (Preetam Gowda) ವಿರುದ್ಧ ಏಕವಚನದಲ್ಲೇ ಹರಿಹಾಯ್ದರು.

 

 

ಈ  ಮಟ್ಟಕ್ಕೆ ನಡೆದುಕೊಳ್ತಾನಲ್ಲ, ಒಂದು ಫೋನ್ ತೆಗೆಯೋ ಸೌಜನ್ಯ ಇಲ್ಲ, ನಾವೇನು ಅವನ ನಿಧಿ ಕೇಳ್ತಾ ಇದ್ದೀವಾ, ಆಸ್ತಿ ಕೇಳ್ತಾ ಇದ್ದೀವಾ, ಒಬ್ಬ ಶಾಸಕ ಬಂದು ಇನ್ನೊಬ್ಬ ಶಾಸಕನಿಗೆ ಫೋನ್ ಮಾಡಿದ್ರೆ ಒಂದು ಫೋನ್ ತೆಗೆಯುವ ಸೌಜನ್ಯ ಇಲ್ಲ. ಈ ದೌಲತ್ತು ಹೆಚ್ಚು ದಿನ ನಡೆಯೋದಿಲ್ಲ ಬಿಡಿ. ನನಗೆ ಗೊತ್ತಿದೆ, ನಾಳೆ ಜಿಲ್ಲಾಡಳಿತದ ಕಡೆಯಿಂದ ಬರುತ್ತೇನೆ ಬಿಡಿ. ಇಷ್ಟೆಲ್ಲಾ ವ್ಯವಸ್ಥೆ ಮಾಡಿ ನಾವು ಬಂದ್ರೆ ದರ್ಶನಕ್ಕೆ ಅವಕಾಶ ಕೊಡಲ್ಲ, ಫೋನ್ ರಿಸೀವ್ ಮಾಡಲ್ಲ” ಎಂದು ಸ್ಥಳೀಯ ಶಾಸಕ ಪ್ರೀತಂಗೌಡ ವಿರುದ್ಧ ಶಾಸಕ ನಾಗೇಂದ್ರ ಏಕವಚನದಲ್ಲೇ ಕಿಡಿಕಾರಿದರು.

ಇದೇ ವೇಳೆ ಹಾಸನ ಎಎಸ್‍ಪಿ ಎಂ.ಕೆ. ತಮ್ಮಯ್ಯ ವಿರುದ್ಧ ಶಾಸಕ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದರು. ಹಾಸನಾಂಬೆ ದೇವಿ ದರ್ಶನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ಮುಖ್ಯದ್ವಾರದ ಬಳಿ ಬಂದಾಗ ಶಾಸಕ ನಾಗೇಂದ್ರರನ್ನು ತಡೆದು ಶಾಸಕರಾದರೆ ನೀವು ಮಾತ್ರ ಒಳಗೆ ಬನ್ನಿ ಎಂದಿದ್ದಾರೆ.

[t4b-ticker]

You May Also Like

More From Author

+ There are no comments

Add yours