ಐತಿಹಾಸಿಕ ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ಇಂದು ಚಾಲನೆ

 

 

 

 

ಚಿತ್ರದುರ್ಗ, ಆ.18: ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ವತಿಯಿಂದ ಚಿತ್ರದುರ್ಗ ನಗರದಲ್ಲಿ ನಡೆಸುವ ಹಿಂದೂ ಮಹಾ ಗಣಪತಿ ಮಹೋತ್ಸವ ೨೦೨೨ ಕ್ಕೆ ಇಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹಾಗೂ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಮುಖಂಡರು, ಕಾರ್ಯಕರ್ತರು ಧ್ವಜ ಪೂಜೆ ಮತ್ತು ಗೋ ಪೂಜೆ ಮಾಡುವ ಮುಖಾಂತರ ವಿದ್ಯುಕ್ತ ಚಾಲನೆ ನೀಡಲಾಯಿತು.

ಈ ವೇಳೆ ಮಾತಾನಾಡಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಕಳೆದ ೨೦೦೭ ರಿಂದ ಪ್ರಾರಂಭವಾದ ಈ ಕಾರ್ಯಕ್ರಮ
೧೬ ನೇ ವರ್ಷಗಳಿಂದ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ನೇತೃತ್ವದಲ್ಲಿ ನಡೆಸಿಕೊಂಡು ಬರಲಾಗುತ್ತಿರುವ ಹಿಂದೂ ಮಹಾ ಗಣಪತಿ ದಕ್ಷಿಣ ಭಾರತದಲ್ಲೇ ಹೆಚ್ಚು ಪ್ರಖ್ಯಾತಿಯನ್ನು ಪಡದಿದೆ. ಸಂಘಟನೆಯ ಹಾಗೂ ಸಾರ್ವಜನಿಕರ ಸಹಕಾರ, ಜವಬ್ದಾರಿಯಿಂದ ನಡೆಯುವ ಗಣೇಶ ಮಹೋತ್ಸವದಲ್ಲಿ ೧೮ ದಿನಗಳ ಕಾಲ ವಿಶೇಷ ಪೂಜೆ, ಧಾರ್ಮಿಕ ಕಾರ್ಯಗಳು ನಡೆಸಿ, ಸೆ.೧೭ ಕ್ಕೆ ವಿಸರ್ಜನೆ ಮಾಡಲಾಗುವುದು ಎಂದು ಹೇಳಿದರು.

 

 

ಮಹೋತ್ಸವಕ್ಕೆ ಯಾರಲ್ಲೂ ಸಹ ಆರ್ಥಿಕ ಸಹಾಯವನ್ನು ಕೇಳುವುದಿಲ್ಲ. ಬದಲಾಗಿ ಸಾರ್ವಜನಿಕರೇ ಸ್ವಯಂ ಪ್ರೇರಿತರಾಗಿ ಧನ ಸಹಾಯ ಮಾಡುವ ಮೂಲಕ ವಿಜೃಂಭಣೆಯಿAದ ಗಣೇಶೋತ್ಸವ ಆಚರಿಸಲಾಗುವುದು.
ಗಣೇಶೋತ್ಸವದ ಕೊನೆಯ ದಿನ ಶೋಭಾಯಾತ್ರೆಗೆ ಕೋಟ್ಯಾಂತರ ಹಣ ಖರ್ಚು ಮಾಡಲಾಗುವುದು ಎಂದು ಕೆಲವರು ಹೇಳುತ್ತಾರೆ. ಆದರೆ ಶೋಭಾಯಾತ್ರೆಗೆ ೫ ಲಕ್ಷ ರೂ.ಗಳನ್ನು ಮಾತ್ರ ವೆಚ್ಚಾ ಮಾಡಲಾಗುವುದು. ಶೋಭಾಯಾತ್ರೆಗೆ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದ ಆಗಮಿಸುವ ಭಕ್ತರಿಗೆ ನಗರದ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಊಟ, ತಿಂಡಿ ಹಾಗೂ ಪಾನಿಯಾಗಳನ್ನು ಸ್ವಂತ ಖರ್ಚಿನಲ್ಲಿ ಮಾಡುವ ಮೂಲಕ ಹಿಂದೂ ಮಹಾ ಗಣಪತಿ ಮಹೋತ್ಸವವನ್ನು ಎಲ್ಲರೂ ಒಗ್ಗೂಡಿ ವಿಜೃಂಭಣೆಯಿAದ ಆಚರಿಸಲಾಗುವುದು ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರದ ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನAದ ಶ್ರೀಗಳು ಮಾತನಾಡಿ, ಇದೊಂದು ಉತ್ತಮವಾದ ಧರ್ಮ ಕಾರ್ಯಕ್ರಮವಾಗಿದೆ. ಹಲವಾರು ವರ್ಷಗಳಿಂದ ಯಾವುದೇ ರೀತಿ ವಿಘ್ನ ಇಲ್ಲದಂತೆ ನೇರವೇರಿಕೊಂಡು ಬರುತ್ತಿದೆ. ಇದಕ್ಕೆ ಎಲ್ಲರು ಸಹಾಯ, ಸಹಕಾರವನ್ನು ನೀಡುತ್ತಿದ್ದಾರೆ. ಚಿತ್ರದುರ್ಗ ಹಿಂದು ಮಹಾ ಗಣಪತಿ ಎಂದರೆ ಅದೊಂದು ಐತಿಹಾಸಿಕವಾದ ಕಾರ್ಯಕ್ರಮವಾಗಿದೆ. ಈ ಭಾರಿ ರಾಜ್ಯದಲ್ಲಿ ಉತ್ತಮವಾದ ಮಳೆಯಾಗಿದೆ.ಇದೇ ರೀತಿ ಮುಂದಿನ ದಿನದಲ್ಲಿ ಉತ್ತಮವಾದ ಬೆಳೆಯನ್ನು ಸಹಾ ನಿರೀಕ್ಷಿಸಲಾಗಿದೆ. ವಿನಾಯಕ ಎಲ್ಲಾ ವಿಘ್ನವನ್ನು ನಿವಾರಣೆ ಮಾಡಿ ಕಾರ್ಯಕ್ರಮ ಸುಲಲಿತವಾಗಿ ನಡೆಯಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಮಹೋತ್ಸವದ ಅಧ್ಯಕ್ಷ ವಿಫುಲ್, ಭದ್ರಿನಾಥ್, ಪ್ರಭಂಜನ್, ವಿಠ್ಠಲ್, ಮಲ್ಲಿಕಾರ್ಜುನ್ ಶರಣ ನಗರಸಭಾ ಸದಸ್ಯರಾದ ಹರೀಶ್ ಶಶಿಧರ್, ಮುಖಂಡರಾಧ ಶ್ರೇಣಿಕ್, ಶರಣ್ ಕುಮಾರ್, ಮೋಹನ್, ಸೇರಿದಂತೆ ಇತರರು ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours