ಮಾ.10 ನೀಲಕಂಠೇಶ್ವರ ನೂತನ ಬೆಳ್ಳಿ ಕವನ‌ ಉದ್ಘಾಟನೆ.

 

 

 

 

ಚಿತ್ರದುರ್ಗ ಮಾ. ೮
ನಗರದ ನೀಲಕಂಠೇಶ್ವರ ಸ್ವಾಮಿಯ ಗರ್ಭಗುಡಿಯ ಬಾಗಿಲಿಗೆ ನೂತನವಾಗಿ ನಿರ್ಮಾಣ ಮಾಡಿರುವ ಬೆಳ್ಳಿ ಕವಚದ ಉದ್ಘಾಟನಾ ಸಮಾರಂಭವೂ ಮಾ.೧೦ರ ಬುಧವಾರ ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ ಎಂದು ಸಮಾಜದ ಕಾರ್ಯಕಾರಿ ಸಮಿತಿ ತಿಳಿಸಿದೆ.
ಚಿತ್ರದುರ್ಗ ನಗರದ ಮಧ್ಯಭಾಗದಲ್ಲಿರುವ ಈ ದೇವಾಲಯದಲ್ಲಿ ಸ್ವಾಮಿಯ ಗರ್ಭ ಗುಡಿಗೆ ಬೆಳ್ಳಿಯ ಕವಚವನ್ನು ನಿರ್ಮಾಣ ಮಾಡಬೇಕೆಂದು ಸಮಾಜದ ಕಾರ್ಯಕಾರಿ ಸಮಿತಿ ನಿರ್ಧಾರ ಮಾಡಿದ ಹಿನ್ನಲೆಯಲ್ಲಿ ಈಗ ಬೆಳ್ಳಿಯ ಕವಚ ನಿರ್ಮಾಣವಾಗಿ ಉದ್ಘಾಟನೆಗೆ ಸಿದ್ದವಾಗಿದೆ ಇದರ ನಿರ್ಮಾಣಕ್ಕೆ ಸುಮಾರು ೬೦ ಕೆ.ಜಿ. ಬೆಳ್ಳಿಯನ್ನು ಬಳಕೆ ಮಾಡಲಾಗಿದ್ದು ಇದರ ವೆಚ್ಚ ಸುಮಾರು ೫೦ ಲಕ್ಷ ರೂ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಸೋನಿ ಸಮಾಜದವರು ಸುಮಾರು ೨೫ ಕೆ.ಜಿ. ವೀರಶೈವ ಸಮಾಜದಿಂದ ೩೦ ಕೆ.ಜಿ ಉಳಿದ ೫ ಕೆ.ಜಿ. ಬೆಳ್ಳಿಯನ್ನು ಭಕ್ತಾಧಿಗಳಿಂದ ಸಂಗ್ರಹ ಮಾಡಲಾಗಿದೆ. ಇದರ ನಿರ್ಮಾಣವನ್ನು ನಾಯಕಹಟ್ಟಿಯ ವೆಂಕಟೇಶ ಆಚಾರ್ ಸುಮಾರು ೬ ರಿಂದ ೮ ತಿಂಗಳ ಕಾಲದಲ್ಲಿ ನಿರ್ಮಾಣ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ನಿರ್ಮಾಣವಾಗಿರುವ ಗರ್ಭಗುಡಿಯಲ್ಲಿ ಬೆಳ್ಳಿ ಕವಚದ ಒಂದ ಕಡೆಯಲ್ಲಿ ಜೋರ್ತಿಲಿಂಗಗಳು, ಮೇಲ್ಗಡೆಯಲ್ಲಿ ಶಿವ ಸ್ವರೂಪಿಯಾದ ಲಿಂಗ, ಅದರ ಮುಂದೆ ನಂದಿ, ಅಕ್ಕ-ಪಕ್ಕದಲ್ಲಿ ಷಣ್ಮುಖ, ಗಣೇಶರ ಮೂರ್ತಿಗಳನ್ನು ಕೆತ್ತಲಾಗಿದೆ. ಬಾಗಿಲ ಎರಡು ಕಡೆಯಲ್ಲಿ ಶಿವನನ್ನು ಕಾಯಲು ದ್ವಾರಪಾಲಕರನ್ನು ನಿರ್ಮಾಣ ಮಾಡಿ ಅವರ ಕೈಯಲ್ಲಿ ದಂಡವನ್ನು ನೀಡಲಾಗಿದೆ. ಉಳಿದ ಜಾಗದಲ್ಲಿ ಬಳ್ಳಿಯ ಕೆತ್ತನೆ ಮಾಡಲಾಗಿದೆ. ಇದರೊಂದಿಗೆ ದೇವಾಲಯದಲ್ಲಿ ಇರುವ ವಿವಿಧ ದೇವರ ಮೂರ್ತಿಗಳಾದ ಪಾರ್ವತಿ, ವೀರಭದ್ರ, ಭದ್ರಕಾಳಮ್ಮ, ಷಣ್ಮುಖ, ಗಣಪತಿಗಳಿಗೂ ಸಹಾ ನೂತನವಾಗಿ ಸಮಾಜದಿಂದ ಬೆಳ್ಳಿಯ ಕವಚಗಳನ್ನು ನಿರ್ಮಾಣ ಮಾಡಲಾಗಿದ್ದು ಈ ದೇವರುಗಳ ಬಾಗಿಲುಗಳು ಸಹಾ ಶೀಥಲಗೊಂಡಿದ್ದು ಅವುಗಳನ್ನು ಸಹಾ ಹೊಸದಾಗಿ ಸಾಗುವಾನಿ ಮರದಿಂದ ನಿರ್ಮಾಣ ಮಾಡಲಾಗಿದೆ. ಮಾ. ೧೦ ರಂದು ಬೆಳ್ಳಿಗೆ ೧೦ ಗಂಟೆಗೆ ನಡೆಯುವ ಬೆಳ್ಳಿ ಕವಚದ ಉದ್ಘಾಟನಾ ಸಮಾರಂಭದಲ್ಲಿ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ಸಾನಿಧ್ಯವಹಿಸಲಿದ್ದು, ಜಿಲ್ಲಾಧಿಕಾರಿ ಶ್ರೀಮತಿ ಕವಿತಾ ಎಸ್ ಮನ್ನಿಕೇರಿ ಭಾಗವಹಿಸಲಿದ್ದಾರೆ ಎಂದು ಸಮಾಜದ ಕಾರ್ಯಕಾರಿ ಸಮಿತಿಯವರು ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours