ಸಮಸ್ಯೆ ಮುಕ್ತ ಗ್ರಾಮ ಮಾಡುವಲ್ಲಿ ತಹಶೀಲ್ದಾರ್ ರಘುಮೂರ್ತಿ ಕಾರ್ಯನಿಷ್ಠೆ ವಿಶಿಷ್ಟವಾಗಿದೆ:ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮೆಚ್ಚುಗೆ

 

 

 

 

ಚಳ್ಳಕೆರೆ:  ರಾಜ್ಯದ  ಮುಖ್ಯ ಮಂತ್ರಿಗಳು ಹಾಗೂ ಕಂದಾಯ ಮಂತ್ರಿಗಳು ಆಶಯದಂತೆ ಶೇಕಡ ನೂರರಷ್ಟು ಸರ್ಕಾರಿ ಸೌಲತ್ತುಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಚಳ್ಳಕೆರೆ ತಾಲ್ಲೂಕು ಆಡಳಿತದಿಂದ ಮಾಡಲಾಗಿದ್ದು   ತಹಶೀಲ್ದಾರ್ ರಘುಮೂರ್ತಿ  ಅವರು ಮಾಡಿದ  ಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಹೇಳಿದರು.

ಇಂದು ಘಟಪರ್ತಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿ ಘಟಪರ್ತಿ ಗ್ರಾಮ ಹಾಗೂ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ 5 ಗ್ರಾಮಗಳಲ್ಲಿ ರೈತ ಸಮಸ್ಯೆಗಳ ಆದಂತ ಪೌತಿ ಖಾತೆ ಪೋಡಿ ಪ್ರಕರಣಗಳು ಪಿಂಚಣಿಗಳ ದಾರಿ ಸಮಸ್ಯೆಗಳು ಸ್ಮಶಾನ ಪಹಣಿ ಯಲ್ಲಿರುವ ಲೋಪ ದೋಷಗಳು ಇನ್ನೂ ಹತ್ತು ಹಲವು ಕಂದಾಯ ಇಲಾಖೆ ಸಮಸ್ಯೆಗಳನ್ನು ಒಂದು ತಿಂಗಳಿನಿಂದ ಇಲ್ಲಿ ಅಧ್ಯಯನ ಮಾಡಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಸಾರ್ವಜನಿಕರಿಗೆ ಮುಕ್ತಿ ಕಲ್ಪಿಸಿ ಎಂದರು. 55 ಗ್ರಾಮಗಳನ್ನು ಕಂದಾಯ ಇಲಾಖೆಯ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಿರುವುದು ನಿಜಕ್ಕೂ ಕೂಡ ಅಧಿಕಾರಿಗಳ ಹೊಣೆಗಾರಿಕೆ ಹಾಗೂ ಸಾರ್ವಜನಿಕರಿಗೆ ಇರುವ ಕಾಳಜಿಯನ್ನು ತೋರಿಸುತ್ತದೆ. ಪ್ರತಿ ಗ್ರಾಮಗಳಲ್ಲೂ ಈ ರೀತಿ ಕೆಲಸವಾದರೆ ಮಹಾತ್ಮ ಗಾಂಧೀಜಿಯವರು ಕಂಡಂತ ರಾಮರಾಜ್ಯದ ಕನಸು ಈಡೇರಿದಂತಾಗುತ್ತದೆ ಕಂದಾಯ ಇಲಾಖೆ ಹೊರತುಪಡಿಸಿ ಉಳಿದ ಇಲಾಖೆಗಳ ಕೆಲಸಗಳಾದ ರಸ್ತೆ ಮನೆ ನಿವೇಶನ ಮನೆಗಳು ಆಸ್ಪತ್ರೆ ಮುಂತಾದ ಸಮಸ್ಯೆಗಳಿಗೆ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಿ ಕಾಲಮಿತಿಯೊಳಗೆ ಇವುಗಳನ್ನು ಇತ್ಯರ್ಥ ಪಡಿಸಲಾಗುವುದು ಹಾಗೆಯೇ ಇಲ್ಲಿನ ತಹಶೀಲ್ದಾರ್  ರಘುಮೂರ್ತಿ, ಸಚಿವರು  ಮತ್ತು ದಾನಿಗಳ ಸಹಕಾರದೊಂದಿಗೆ ಈ ಭಾಗದ 1000 ಪದವೀಧರರಿಗೆ ವಿವಿಧ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳ ಆನ್ಲೈನ್ ಕೋಚಿಂಗ್ ವ್ಯವಸ್ಥೆಯನ್ನು ಇದೇ ತಿಂಗಳು 21ರಂದು ಲೋಕಾರ್ಪಣೆ ಮಾಡುತ್ತಿದ್ದು ಅಧಿಕಾರಿಗಳ ಕಾರ್ಯ ನಿಜಕ್ಕೂ ಕೂಡ ಪ್ರಶಂಸನೀಯ.ಈ  ಭಾಗದ ಎಲ್ಲಾ ಪದವಿಧರರು ಇದರ ಸೌಲಭ್ಯವನ್ನು ಪಡೆದುಕೊಂಡ   ಶೈಕ್ಷಣಿಕ ನೆಲೆಗಟ್ಟನ್ನು ವೃದ್ಧಿಸಿಕೊಂಡು ಮುಂದಿನ ಸಮಾಜದಲ್ಲಿ ಉನ್ನತಮಟ್ಟದ ಹುದ್ದೆಗಳನ್ನು ಅಲಂಕರಿಸಿ ಕೊಳ್ಳುವಂತೆ ಸಲಹೆ ನೀಡಿದರು.

 

 

ತಹಸೀಲ್ದಾರ್ ಎನ್. ರಘುಮೂರ್ತಿ ಮಾತನಾಡಿ ಚಳ್ಳಕೆರೆ ತಾಲ್ಲೂಕು ರಾಜ್ಯದಲ್ಲೇ ಅತಿ ದೊಡ್ಡ ತಾಲೂಕ್ ಆಗಿತ್ತು ಸಾಂಸ್ಕೃತಿಕವಾಗಿ ಅತಿ ಶ್ರೀಮಂತ ತಾಲೂಕು, ಅತಿ ಕಡಿಮೆ ಮಳೆ ಬೀಳುವ ಪ್ರದೇಶವಾಗಿರುವುದರಿಂದ ಸ್ವಲ್ಪ ಬಡತನವಿದೆ. ಇದನ್ನು ಮೀರಿ ತಾಲ್ಲೂಕಿನ ಜನ ಸಂಸ್ಕಾರವುಳ್ಳ ಅಂತವರು ಇಂಥ ಜನಗಳ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮತ್ತು ನಿಷ್ಕಳಂಕವಾಗಿ ಮಾಡುವಂತೆ ಈ ಭಾಗದ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.  ಅದರಂತೆ ಈಗಾಗಲೇ 42 ಗ್ರಾಮಗಳನ್ನು ಕಂದಾಯ ಇಲಾಖೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ. ಅದರಂತೆ ಇಂದು ಕೂಡ ಘಟಪರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇದು ಹಳ್ಳಿಗಳನ್ನು ಸಮಸ್ಯೆ ಮುಕ್ತ ಗ್ರಾಮವನ್ನಾಗಿ ಮಾಡಲಾಗಿದೆ. ಕಂದಾಯ ಇಲಾಖೆ ಯಾವುದೇ ಸಮಸ್ಯೆಗಳಿದ್ದಲ್ಲಿ ತಕ್ಷಣ ನನ್ನ ಗಮನಕ್ಕೆ ತಂದಲ್ಲಿ ಬಗೆಹರಿಸಲಾಗುವುದು. ಯಾವುದೇ ಕಾರಣಕ್ಕೂ ರೈತರುಗಳು ಮತ್ತು ಸಾರ್ವಜನಿಕರು ಅನ್ನು ಕಚೇರಿಗಳನ್ನು ಅರಸಿ ತಾಲೂಕು ಕೇಂದ್ರವನ್ನು ಸುತ್ತುವುದು ಬೇಡ ಕಂದಾಯ ಇಲಾಖೆಯ ಅಧಿಕಾರಿ ನೌಕರರೇ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಕೆಲಸ ಮಾಡಿ ಕೊಡಲಿದ್ದಾರೆ. ತಾಲೂಕಿನಲ್ಲಿ ಇರುವಂತಹ ಎಲ್ಲ ಗ್ರಾಮಗಳನ್ನು ಇದೇ ರೀತಿ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡುವ ಕೈಂಕರ್ಯವನ್ನು ತಾಲೂಕು ಆಡಳಿತ ಕೈಗೊಂಡಿದೆ. ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಮತ್ತು ನೌಕರರು ಈ ಒಂದು ಆಂದೋಲನದಲ್ಲಿ ಪೂರ್ಣಪ್ರಮಾಣದಲ್ಲಿ ಸಹಕರಿಸುತ್ತಿದ್ದು  ಜಿಲ್ಲಾಧಿಕಾರಿಗಳ ಹಾಗೂ ಸಾರಿಗೆ ಸಚಿವರ ಆಶಯದಂತೆ ಸಾರ್ವಜನಿಕರ ಒಳಿತನ್ನು ಅರಿತು ತಾಲೂಕಿನಲ್ಲಿ ಕೆಲಸ ನಿರ್ವಹಿಸಲಾಗುವುದು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯ ಘಟಪರ್ತಿ ರವಿ ಮಾತನಾಡಿ ಇವತ್ತು ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್  ಅವರು ನಮ್ಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳನ್ನು ಕಂದಾಯ ಸಹಾಯಕರು  ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಿದ್ದು ನಮ್ಮಗಳಿಗೆ ತುಂಬಾ ಸಂತೋಷವನ್ನುಂಟು ಮಾಡಿದೆ. ಸಾರ್ವಜನಿಕರಿಗೆ ಹೊರೆಯನ್ನು ತಪ್ಪಿಸಲಾಗಿದೆ ನೆಮ್ಮದಿ ತಂದಿದೆ ಅದಕ್ಕೋಸ್ಕರ ಅವರನ್ನು ವಿಶೇಷವಾಗಿ ಅಭಿನಂದಿಸುತ್ತೇವೆ ಎಂದರು. ಇನ್ನು ಬಸ್ಸುಗಳು ಸಾರ್ವಜನಿಕ ಪಶುಸಂಗೋಪನಾ ಆಸ್ಪತ್ರೆ ಲೈಬ್ರರಿ ಆರೋಗ್ಯ ಇಲಾಖೆಯ ಸಿಬ್ಬಂದಿಯ ಕುರಿತಾದ ಹಲವು ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಎಲ್ಲ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮಗಳ ಕುರಿತಾದ ಮಾಹಿತಿಯನ್ನು ಸಂಕ್ಷಿಪ್ತವಾಗಿ ಒದಗಿಸಿದರು ಅಂಗವಿಕಲ ಕಲ್ಯಾಣ ಇಲಾಖೆಯಿಂದ ಬೈಸಿಕಲ್ ಮತ್ತು ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು. ಕಂದಾಯ ಇಲಾಖೆಯಿಂದ ಮತ್ತು ಗ್ರಾಮ ಪಂಚಾಯಿತಿಯಿಂದ ಸಾರ್ವಜನಿಕರಿಗೆ ಕೊಡ ಮಾಡುವಂತ ನಾಗರಿಕ ಸೌಲಭ್ಯಗಳನ್ನು ವಿತರಿಸಲಾಯಿತು. ಹತ್ತು ಗಂಟೆಗೆ ಜಿಲ್ಲಾಧಿಕಾರಿಗಳ ಕಾರ್ಯಕ್ರಮ ಮುಗಿದ ಬಳಿಕ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಿದ್ದು ಇಡೀ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಆನಂದದಿಂದ ಮಿಂದೆದ್ದರು. ತಹಶೀಲ್ದಾರ್ ಒಳಗೊಂಡಂತೆ ಈ ಕಾರ್ಯಕ್ರಮದಲ್ಲಿ ಗೀತೆಗಳನ್ನು ಹಾಡಿ ಗ್ರಾಮಸ್ಥರನ್ನು ರಂಜಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಉಮಾದೇವಿ ತಿಮ್ಮಾರೆಡ್ಡಿ, ಉಪಾಧ್ಯಕ್ಷ ಸೇವಾನಾಯ್ಕ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿ ಡಾ.ಎನ್.ಕಾಶಿ, ತಾ.ಪಂ.ಸಹಾಯಕ ನಿರ್ದೇಶಕ ಸಂತೋಷ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್,
ದೊಡ್ಡ ಉಳ್ಳಾರ್ತಿ ವೈದ್ಯಾಧಿಕಾರಿ ಡಾ.ಶ್ರೀನಿವಾಸ‌.ಜಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರವಿ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ರೇವಣ್ಣ, ರೇಷ್ಮೆ ಸಹಾಯಕ ನಿರ್ದೇಶಕ ಕೆಂಚೋಜಿರಾವ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರತಿಭಾ ಸೇರಿದಂತೆ ಗ್ರಾ.ಪಂ.ಸದಸ್ಯರು, ಘಟಪರ್ತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.

[t4b-ticker]

You May Also Like

More From Author

+ There are no comments

Add yours