ಹೊಲದಲ್ಲಿ ಬೇಸಾಯ ಮಾಡುವ ಮೂಲಕ ರೈತರಿಗೆ ಆತ್ಮಸ್ಥೈರ್ಯ ತುಂಬಿದ ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ:  ತಾಲೂಕು ಖ್ಯಾತ ಗೊಂಡನಹಳ್ಳಿ ಗ್ರಾಮದ ಸರ್ವೇ ನಂಬರ್ 59 ರಲ್ಲಿ ಲ್ಲಿನ ನರಸಿಂಹ ಮೂರ್ತಿ ಇವರ ಜಮೀನಿನಲ್ಲಿ ತಾಸಿಲ್ದಾರ್ ಎನ್ ರಘುಮೂರ್ತಿ ರೈತ ಜೊತೆ  ಬೇಸಾಯ ಹೊಡೆಯುವುದರ ಮೂಲಕ ರೈತರಿಗೆ ಆತ್ಮಸ್ಥೈರ್ಯವನ್ನು ಮೂಡಿಸಿದರು.

ಚಳ್ಳಕೆರೆ ತಾಲೂಕಿನ ರೈತ ಸಂಘದ ಅಧ್ಯಕ್ಷರಾದಂತ ಸೋಮ ಗುದ್ದು ರಂಗಸ್ವಾಮಿ , ರೆಡ್ಡಿಹಳ್ಳಿ ವೀರಣ್ಣ ಮತ್ತು ಭೂತಯ್ಯ ಇವರುಗಳು ತಾಲೂಕ ಕಚೇರಿಗೆ ಕಳೆದ ಮೂರು ದಿನಗಳ ಹಿಂದೆ ಭೇಟಿ ನೀಡಿ ಬೆಳೆ ಪ್ರೀಮಿಯಂ ಹಣವನ್ನು ಅವೈಜ್ಞಾನಿಕವಾಗಿ ನೀಡುತ್ತಿದ್ದು ರೈತರ ಸಂಕಷ್ಟ ದಲ್ಲಿದ್ದರು ಸರ್ಕಾರ ಸ್ಪಂದಿಸುತ್ತಿಲ್ಲವೆಂದು ಈ ಬಾರಿಯು  ಹಂಗಾಮಿಗೆ ಮಳೆ ಬಾರದೆ ಇರುವುದರಿಂದ ನಿಗದಿತ ಪ್ರಮಾಣದ ಬೆಳೆ ಬಿತ್ತನೆಯಾಗಿಲ್ಲ ರೈತರಿಗೆ ಅನ್ಯಾಯವಾಗದ ಹಾಗೆ ಬೆಳೆ ಪರಿಹಾರ ಮತ್ತು ಪ್ರೀಮಿಯಂ ಹಣವನ್ನು ದೊರಕಿಸಬೇಕು ಎಂದರು.

ರೈತ ಸಂಘದ ಅಧ್ಯಕ್ಷ  ಭೂತಯ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ರೈತರಗಳೊಂದಿಗೆ ಹಾಲುಂಡಹಳ್ಳಿ ಯಾಗಲಕಟ್ಟೆ ಕಾಲುವೆಹಳ್ಳಿ ಕರಿಕಟ್ಟೆ ಮತ್ತು ನಾಗಗೊಂಡನಹಳ್ಳಿ ಮುಂತಾದ ಗ್ರಾಮಗಳಲ್ಲಿ ಭೇಟಿ ನೀಡಿ ಮುಂಗಾರು ಹಂಗಾಮಿನ ಬಿತ್ತನೆ ಆಗಿರುವಂತಹ ಮತ್ತು ಬಿತ್ತಲು ಬಾಕಿ ಇರುವಂತಹ ಜಮೀನುಗಳನ್ನು ಪರಿಶೀಲಿಸಿದರು.

 

 

ಜುಲೈ   ತಿಂಗಳ ಅಂತ್ಯದೊಳಗೆ  ಪ್ರೀಮಿಯಂ ಹಣವನ್ನು ಕಡ್ಡಾಯವಾಗಿ ಸಂಬಂಧಿಸಿದ ಬ್ಯಾಂಕುಗಳಿಗೆ ಜಮಾ ಮಾಡಬೇಕೆಂದು ವಿನಂತಿಸಿದರು.  ಸರ್ಕಾರ ರೈತರೊಂದಿಗಿದ್ದು ಎಲ್ಲಾ  ಸಂದರ್ಭದಲ್ಲಿ ರೈತರು ಎದೆಗುಂದಬಾರದು ಎಂದು  ರೈತರಿಗೆ ತಹಶೀಲ್ದಾರ್  ಆತ್ಮಸ್ಥೈರ್ಯ ತುಂಬಿದರು.

ರೈತ ಸಂಘದ ಅಧ್ಯಕ್ಷ ಭೂತಯ್ಯ ಮಾತನಾಡಿ ಕಳೆದ ವರ್ಷ ನೀಡಿದಂತ ಅವೈಜ್ಞಾನಿಕವಾದ ಪರಿಹಾರವನ್ನು ಈ ವರ್ಷ ಕೊಡಬಾರದುಮ  ರೈತರ ಹಿತವನ್ನು ಇಟ್ಟುಕೊಂಡು ಕೇಂದ್ರ ಸರ್ಕಾರದ ಪರಿಹಾರದ ಮಾನದಂಡವನ್ನು ಸಡಿಲಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿದರು.

ರೈತ ಸಂಘದ ಅಧ್ಯಕ್ಷ ಭೂತಯ್ಯ ಮತ್ತು ತಹಶೀಲ್ದಾರ್  ರಘುಮೂರ್ತಿ ಎಡೆ ಬೇಸಾಯವನ್ನು ಸದರಿ ಜಮೀನಿನಲ್ಲಿ ಹೊಡೆಯುವ ಮುಖಾಂತರ ನೆರೆದಿದ್ದಂತಹ ರೈತರಿಗೆ ಅಚ್ಚರಿ ಮೂಡಿಸಿದರು.

ಈ‌ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಉಮೇಶ್ ರೈತರಾದ ರಾಮಣ್ಣ ತಿಪ್ಪೇಸ್ವಾಮಿ ಪಾಲಯ್ಯ ಕರಿಯಣ್ಣ ಶ್ರೀನಿವಾಸ್ ಕೃಷ್ಣಪ್ಪ ನರಸಿಂಹಮೂರ್ತಿ ಮುಂತಾದವರಿದ್ದರು

[t4b-ticker]

You May Also Like

More From Author

+ There are no comments

Add yours