ಸ್ಮಾರ್ಟ್ ಲುಕ್ ಮೂಲಕ ಕೋಟೆ ನಾಡಿಗೆ ಇಳಿದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು, ಸಖತ್ ಮೈಲೇಜ್ ಗೆ ಜನರು ಫುಲ್ ಖುಷ್

 

 

 

 

ಕೋಟೆ ನಾಡಿಗೆ ಕಾಲಿಟ್ಟ ಟಾಟಾ ನೆಕ್ಸಾನ್ ಇವಿ ಕಾರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್.

ಕೇವಲ 320 ರೂ.ಗಳಲ್ಲಿ 400 ಕಿಲೋ ಮೀಟರ್ ದೂರದ ಬೆಂಗಳೂರಿಗೆ ಹೋಗಿ ವಾಪಸ್ ಬರಬಹುದು..!!!

ನ್ಯೂಸ್ 19ಕನ್ನಡ ಡೆಸ್ಕ್   

ಚಿತ್ರದುರ್ಗ: ದೇಶಾದ್ಯಂತ ಅತಿಹೆಚ್ಚು ಜನಪ್ರಿಯವಾಗಿರುವ ಅತೀ ಬೇಡಿಕೆಯ ಟಾಟಾ ನೆಕ್ಸಾನ್ ಇವಿ ಕಾರು ಕೋಟೆ ನಾಡಿಗೆ ಕಾಲಿಟ್ಟಿದ್ದು ಶ್ರೀಆಟೋ ವಿತರಕರ ಮೂಲಕ ಬುಕ್ಕಿಂಗ್ ಮಾಡಬಹುದಾಗಿದೆ ಎಂದು ಶ್ರೀಆಟೋ ಸಂಸ್ಥೆಯ ಮಾಲೀಕರಾದ ಎಂ.ವಿ.ವಿಶ್ವನಾಥ್ ತಿಳಿಸಿದರು.

ಇಲ್ಲಿನ ಬಿ.ಡಿ.ರಸ್ತೆಯ ಮದೇಹಳ್ಳಿ ರಸ್ತೆ ಸಮೀಪದಲ್ಲಿರುವ ಶ್ರೀಆಟೋ ಆವರಣದಲ್ಲಿ ಹಮ್ಮಿಕೊಂಡಿದ್ದ ಟಾಟಾ ನೆಕ್ಸಾನ್ ಇವಿ(ಎಲೆಕ್ಟ್ರಿಕ್) ಕಾರು ಬಿಡುಗಡೆ ಮಾಡಿ ಅವರು ಮಾತನಾಡಿದರು. ದೇಶದ ಅತ್ಯಂತ ವಿಶ್ವಾಸಾರ್ಹತೆಯ ಟಾಟಾ ಕಂಪನಿ ಸ್ವದೇಶದ್ದು ಎನ್ನುವುದು ಬಹಳ ಮುಖ್ಯ. ಹಲವು ರೀತಿಯ ಸಂಶೋಧನೆಗೆ ಒಳ ಪಡಿಸಿ ಯಾವುದೇ ರೀತಿಯ ದೋಷವಿಲ್ಲದೆ ಟಾಟಾ ನೆಕ್ಸಾನ್ ಇವಿ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ. ಕೇವಲ 0.80 ಪೈಸೆಗೆ ಪ್ರತಿ ಕಿಲೋ ಮೀಟರ್ ವೆಚ್ಚ ಬರಲಿದೆ. ಪರಿಸರ ಸ್ನೇಹ ವಾಹನ ಇದಾಗಿದ್ದು ಡಿಸೇಲ್, ಪೆಟ್ರೋಲ್ ಗಗನಮುಖಿಯಾಗುತ್ತಿರುವ ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಟಾಟಾ ನೆಕ್ಸಾನ್ ಇವಿ ಕಾರು ಅನಿವಾರ್ಯ ಮತ್ತು ಅಗತ್ಯವಾಗಲಿದೆ ಎಂದು ತಿಳಿಸಿದರು.

ಇದನ್ನು ಓದಿ: ಲಾರಿಯಲ್ಲಿ ತುಂಬಿದ್ದು ಮೆಕ್ಕೆಜೋಳ ಅಕ್ಕಿ ಆಯ್ತ, ಚಾಲಕನಿಗೆ ತಹಶೀಲ್ದಾರ್ ಎನ್.ರಘುಮೂರ್ತಿ ತರಾಟೆ , 220 ಚೀಲ ಪಡಿತರ ಅಕ್ಕಿ ವಶ

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬೆಲೆ 14.54 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ(ಎಕ್ಸ್ ಶೋ ರೂಂ). ಟಾಪ್ ಮಾಡೆಲ್ ಕಾರಿನ ಬೆಲೆ 15.15 ಲಕ್ಷ (ಎಕ್ಸ್ ಶೋ ರೂಂ) ರೂಪಾಯಿಗೆ ದೊರೆಯಲಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ಟಾಟಾ ನೆಕ್ಸಾನ್ 2,250 ಕಾರುಗಳು ಮಾರಾಟವಾಗಿದೆ. ಟಾಟಾ ನೆಕ್ಸಾನ್ ಇವಿ ಕಾರಿನಲ್ಲಿ 30.2kWH ಬ್ಯಾಟರಿ ಬಳಸಲಾಗಿದೆ. ಒಮ್ಮೆ ಬಾರಿ ಚಾರ್ಜ್ ಮಾಡಿದರೆ 240 ರಿಂದ 312 ಕಿ.ಮೀ ಮೈಲೇಜ್ ನೀಡಲಿದೆ ಎಂದು ಟಾಟಾ ಸಂಸ್ಥೆ ಹೇಳಿದೆ ಎಂದು ತಿಳಿಸಿದರು.

ಟಾಟಾ ನೆಕ್ಸಾನ್ ಇವಿ ಕಾರು ಫಾಸ್ಟ್ ಚಾರ್ಜಿಂಗ್ ಮೂಲಕ ಕಾರು ಚಾರ್ಜ್ ಮಾಡಲು 1 ಗಂಟೆ ಸಮಯ ತೆಗೆದುಕೊಳ್ಳಲಿದೆ. ಆದರೆ ಮನೆಯಲ್ಲಿ ಸಾಮಾನ್ಯ ಪ್ಲಗ್ ಪಾಯಿಂಟ್‌ನಲ್ಲಿ ಚಾರ್ಜಿಂಗ್ ಮಾಡುವುದಾದರೆ ಚಾರ್ಜ್‌ಗೆ 8 ಗಂಟೆ ಸಮಯ ತೆಗೆದುಕೊಳ್ಳಲಿದೆ. 127bhp ಪವರ್ ಹಾಗೂ 245 nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಅವರು ತಿಳಿಸಿದರು.

ಮುಂದುವರೆದು ಮಾತನಾಡಿದ ವಿಶ್ವನಾಥ್, ಚಿತ್ರದುರ್ಗ-ತುಮಕೂರು ಜಿಲ್ಲೆಗಳಲ್ಲಿ ಟಾಟಾ ನೆಕ್ಸಾನ್ ಇವಿ ಕಾರುಗಳ ಬುಕ್ಕಿಂಗ್ ಆರಂಭವಾಗಿದೆ. ಅಲ್ಲದೆ ಎರಡು ಜಿಲ್ಲೆಗಳಲ್ಲೂ ಟೆಸ್ಟ್ ಡ್ರೈವ್ ನೀಡಲಾಗುತ್ತದೆ. ಜೊತೆಯಲ್ಲಿ ಟಾಟಾ ನೆಕ್ಸಾನ್ ಇವಿ ಕಾರು ಖರೀದಿ ಮಾಡುವಂತವರಿಗೆ ಸಾಲ ಸೌಲಭ್ಯ ದೊರೆಯಲಿದೆ. ರೋಡ್ ಟ್ಯಾಕ್ಸ್ ಇಲ್ಲವೇ ಇಲ್ಲ, ನೋಂದಣಿ ಶುಲ್ಕ ಕೂಡ 3500 ಸಾವಿರ ರೂ.ಮೀರಿವುದಿಲ್ಲ ಎಂದು ವಿಶ್ವನಾಥ್ ತಿಳಿಸಿದರು.

 

ಎಲೆಕ್ಟ್ರಿಕ್‌ ವಾಹನ ಚಾರ್ಜಿಂಗ್‌ ಕೇಂದ್ರಕ್ಕೆ ಲೈಸೆನ್ಸ್‌ಬೇಕಿಲ್ಲ:

 

 

ಶ್ರೀಆಟೋ ಸಂಸ್ಥೆಯ ಮತ್ತೊಬ್ಬ ಮಾಲೀಕರಾದ ಶ್ರೀನಿವಾಸ್ ಮಾತನಾಡಿ, ವಿದ್ಯುತ್‌ ಚಾಲಿತ ವಾಹನಗಳಿಗೆ ಉತ್ತೇಜನ ನೀಡುವ ಸಲುವಾಗಿ ಮಹತ್ವದ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ, ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳು ಸಾರ್ವಜನಿಕ ಚಾರ್ಜಿಂಗ್‌ ಕೇಂದ್ರ ತೆರೆಯಲು ಯಾವುದೇ ರೀತಿಯ ಲೈಸೆನ್ಸ್‌ಪಡೆಯಬೇಕಿಲ್ಲ ಎಂದು ಘೋಷಣೆ ಮಾಡಿದೆ. ಇದೇ ವೇಳೆ, ಗೃಹಬಳಕೆಯ ವಿದ್ಯುತ್‌ದರದಲ್ಲೇ ಹಾಲಿ ಇರುವ ಸಂಪರ್ಕವನ್ನು ಬಳಸಿಕೊಂಡು ಮನೆ ಅಥವಾ ಕಚೇರಿಯಲ್ಲಿ ತಮ್ಮ ವಾಹನಗಳನ್ನು ಚಾರ್ಜ್ ಮಾಡಿಕೊಳ್ಳಲು ವಿದ್ಯುತ್‌ಚಾಲಿತ ವಾಹನಗಳ ಮಾಲೀಕರಿಗೆ ನಿಶಾನೆಯನ್ನೂ ತೋರಿದೆ ಎಂದರಲ್ಲದೆ ಇವಿ ಕಾರ್ ಖರೀದಿ ಮಾಡಿದರೆ ಈಗ ಇರುವ ಮನೆಯವಿದ್ಯುತ್ ಸಂಪರ್ಕಕ್ಕೆ ಪ್ರತ್ಯೇಕ ಒಂದು ವಿದ್ಯುತ್ ಮೀಟರ್ ಅಳವಡಿಸಿ ಕೊಡಲಿದೆ ಬೆಸ್ಕಾಂ ಕಂಪನಿ. ಹಾಗೂ ಕಾರು ಚಾರ್ಜಿಂಗ್ ಮಾಡಲು ಖರ್ಚಾಗುವ ಪ್ರತಿ ಯೂನಿಟ್ ವಿದ್ಯುತ್ ಗೂ ರಿಯಾಯಿತಿ ದರ ನೀಡಲಿದೆ. ಉದಾಹರಣೆಗೆ ಮನೆ ಬಳಕೆಯ ಪ್ರತಿ ಯೂನಿಟ್ ವಿದ್ಯುತ್ ಗೆ 7.50 ರೂ.ಇದೆ ಎಂದುಕೊಂಡರೆ ಇವಿ ಕಾರ್ ಚಾರ್ಜಿಂಗ್ ಮಾಡಲು ಪ್ರತಿ ಯೂನಿಟ್ ಗೆ 5 ರೂ.ಮಾತ್ರ ಚಾರ್ಜ್ ಮಾಡಲಿದೆ ಎಂದು ಶ್ರೀನಿವಾಸ್ ತಿಳಿಸಿದರು.

ಶ್ರೀಆಟೋ ಸಂಸ್ಥೆಯ ಮಾಲೀಕರಾದ ಸಿ.ಸತ್ಯನಾರಾಯಣ ಮಾತನಾಡಿ, ಟಾಟಾ ನೆಕ್ಸಾನ್ ಇವಿ ಕಾರು ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಿಕ್ ಚಾರ್ಜಿಂಗ್ ಕಾರುಗಳನ್ನು ಖರೀದಿ ಮಾಡಿದರೆ ಆದಾಯ ತೆರಿಗೆಯಲ್ಲೂ ವಿನಾಯಿತಿ ನೀಡಲಾಗುತ್ತದೆ. ಒಂದು ಇವಿ ಕಾರು ಖರೀದಿ ಮಾಡಿದರೆ ಪರಿಸರ ಸ್ನೇಹಿ ಕಾರು ಆಗಿರುವುದರಿಂದ ನೂರು ಸಸಿಗಳನ್ನು ನೆಟ್ಟಂತೆ ಆಗಲಿದೆ ಎಂದು ಹೇಳಿದರು.

ಡಿಸೇಲ್, ಪೆಟ್ರೋಲ್ ಇಂಧನ ಬಳಸುವಂತ ಯಾವುದೇ ರೀತಿಯ ಕಾರುಗಳಿಗೆ ಸರ್ವೀಸ್ ಮಾಡಿಸಿದರೆ 2-3 ಸಾವಿರ ರೂ.ಗೂ ಹೆಚ್ಚಿನ ಹಣ ಖರ್ಚಾಗಲಿದೆ. ಆದರೆ ಇವಿ ಕಾರುಗಳ ಸರ್ವೀಸ್ ಚಾರ್ಜ್ ಬಹುತೇಕ ಶೂನ್ಯ ಮಟ್ಟದಲ್ಲಿರುತ್ತದೆ. ಟಾಟಾ ನೆಕ್ಸಾನ್ ಇವಿ ಕಾರಿಗೆ ಅಳವಡಿಸಿರುವ ಬ್ಯಾಟರಿಗೆ 8 ವರ್ಷಗಳ ವಾರೆಂಟಿ ಅಥವಾ 1.60 ಲಕ್ಷ ಕಿಲೋ ಮೀಟರ್ ದೂರದ ವಾರಂಟಿ ನೀಡಲಾಗಿದೆ ಎಂದು ಸತ್ಯನಾರಾಯಣ ತಿಳಿಸಿದರು.

320 ರೂ.ಗೆ ಬೆಂಗಳೂರಿಗೆ ಹೋಗಿ ಬರಬಹುದು-

ಶ್ರೀಆಟೋ ಸಂಸ್ಥೆಯ ಮಾಲೀಕರಾದ ಗಿರೀಶ್ ತಿಮ್ಮಾರೆಡ್ಡಿ ಮಾತನಾಡಿ ಎಲೆಕ್ಟ್ರಿಕ್ ಕಾರು ಖರೀದಿ ಮಾಡುವುದರಿಂದ ಸಾಕಷ್ಟು ಪ್ರಯೋಜನವಿದೆ. ಮೊದಲಿಗೆ ಆರ್ಥಿಕವಾಗಿ ದೊಡ್ಡ ಮಟ್ಟದ ಉಳಿತಾಯವಾಗಲಿದೆ. ಯಾವುದೇ ಡಿಸೇಲ್ ಅಥವಾ ಪೆಟ್ರೋಲ್ ಕಾರಿನಲ್ಲಿ ಇಂದು ಚಿತ್ರದುರ್ಗದಿಂದ ಬೆಂಗಳೂರಿಗೆ ಹೋಗಿ ಬರುತ್ತೇವೆಂದರೆ ಕನಿಷ್ಠ 2500 ಸಾವಿರದಿಂದ ಮೂರು ಸಾವಿರ ರೂ.ಖರ್ಚಾಗಲಿದೆ. ಆದರೆ ಅದೇ ಎಲೆಕ್ಟ್ರಿಕ್ ಕಾರು ಖರೀದಿ ಮಾಡಿದರೆ ಕೇವಲ ಪ್ರತಿ ಕಿಲೋ ಮೀಟರ್ ಗೆ 80 ಪೈಸೆ ವೆಚ್ಚ ಆಗಲಿದ್ದು ಬೆಂಗಳೂರಿಗೆ ಹೋಗಿ ಬಂದರೆ ಕೇವಲ 320 ರೂ.ಖರ್ಚಾಗಲಿದೆ ಎಂದು ತಿಳಿಸಿ ಪ್ರತಿಯೊಬ್ಬರೂ ದೇಶಕ್ಕೆ ಏನಾದರೂ ಸೇವೆ ಸಲ್ಲಿಸುತ್ತಿದ್ದೇವೆಂದಾದರೆ ಮೊದಲು ಎಲೆಕ್ಟ್ರಿಕ್ ಕಾರುಗಳನ್ನೂ ಅದರಲ್ಲೂ ಟಾಟಾ ನೆಕ್ಸಾನ್ ಇವಿ ಕಾರುಗಳನ್ನೇ ಖರೀದಿ ಮಾಡಬೇಕು ಎಂದು ಮನವಿ ಮಾಡಿದರು.

ಉಪನ್ಯಾಸಕ ವಿಶ್ವನಾಥ್ ಮಾತನಾಡಿ ದೇಶದಲ್ಲಿ ನೆಕ್ಸಾನ್ ಕಾರುಗಳ ಮಾರಾಟ ಮೇಲ್ಮುಖ ಚಲನೆಯಲ್ಲಿದೆ. ಅಪಾರ ಜನಪ್ರಿಯತೆ, ಮನ್ನಣೆ ಮತ್ತು ಗ್ರಾಹಕರಿಗೆ ಅತ್ಯುತ್ತಮವಾದದ್ದನ್ನು ತಲುಪಿಸುವ ಭರವಸೆಯ ಬೆಂಬಲವನ್ನು ಟಾಟಾ ಕಂಪನಿ ನೀಡಿದೆ ಎಂದು ತಿಳಿಸಿದರು.

ಪ್ರಯಾಣಿಕರ ಸುರಕ್ಷತೆಗೆ ಟಾಟಾ ಮೋಟಾರ್ಸ್‍ ಬದ್ಧತೆಯ ರಾಯಭಾರಿಯಾಗಿದ್ದು, ಸಂಸ್ಥೆಯ ಇತರ ವಿಭಾಗಗಳನ್ನು-ವ್ಯಾಖ್ಯಾನಿಸುವ ಉತ್ಪನ್ನಗಳಿಗೆ ದಾರಿ ಮಾಡಿಕೊಟ್ಟಿದೆ. ವೈಶಿಷ್ಟ್ಯ ಸಮೃದ್ಧ ಸಂಶೋಧನಾತ್ಮಕ ರೂಪಾಂತರವನ್ನು ಟಾಟಾ ಕಂಪನಿ ಪರಿಚಯಿಸುತ್ತಿದೆ ಎಂದು ಅವರು ತಿಳಿಸಿದರು. ನೆಕ್ಸಾನ್ ಪೋರ್ಟ್‍ಫೋಲಿಯೊವನ್ನು ಮತ್ತಷ್ಟು ವೈವಿಧ್ಯಮಯವಾಗಿಸುತ್ತದೆ ಮತ್ತು ನಮ್ಮ ಶೋರೂಮ್‍ಗಳಿಗೆ ಹೊಸ ಗ್ರಾಹಕರನ್ನು ಖಂಡಿತವಾಗಿಯೂ ಸೆಳೆಯುತ್ತದೆ ಎಂದು ಹೇಳಿದರು.

ಇತ್ತೀಚೆಗೆ ಭಾರತದಲ್ಲಿ 4ನೇ ಅತಿ ಹೆಚ್ಚು ಮಾರಾಟವಾದ ಕಾರು ಎಂದು ಪ್ರಸ್ತುತಗೊಂಡಿರುವ ಟಾಟಾ ನೆಕ್ಸಾನ್ ಕಾರು ತನ್ನ ಹೆಸರಿಗೆ ಅನೇಕ ಪ್ರಶಸ್ತಿಗಳನ್ನು ಹೊಂದಿದೆ. 2017 ರಲ್ಲಿ ಪ್ರಾರಂಭವಾದ ನೆಕ್ಸಾನ್ ಅತ್ಯುತ್ತಮ ದರ್ಜೆಯ ಸುರಕ್ಷತೆ, ಬೆರಗುಗೊಳಿಸುವ ವಿನ್ಯಾಸ ಮತ್ತು ಉನ್ನತ ದರ್ಜೆಯ ಕಾರ್ಯಕ್ಷಮತೆಯೊಂದಿಗೆ ಮಹತ್ವಾಕಾಂಕ್ಷೆಯ ಮತ್ತು ವಿಭಾಗ-ವ್ಯಾಖ್ಯಾನಿತ ವೈಶಿಷ್ಟ್ಯದ ಸೇರ್ಪಡೆಗಳೊಂದಿಗೆ ಪರೀಕ್ಷೆಯ  ಸಮಯವನ್ನು ಎದುರಿಸಿದೆ. ಗ್ರಾಹಕರಿಗೆ ಆಯ್ಕೆಗೆ ತಕ್ಕಂತೆ  ರೂಪಾಂತರಗಳೊಂದಿಗೆ ಸದೃಢ, ವ್ಯಾಪಕ ಶ್ರೇಣಿಯ ಕಾರುಗಳನ್ನು ಗ್ರಾಹಕರು ಖರೀದಿ ಮಾಡಬಹುದಾಗಿದೆ ಎಂದು ತಿಳಿಸಿದರು.

ನಂಬಿಕೆ, ವಿಶ್ವಾಸಕ್ಕೆ ಮತ್ತೊಂದು ಹೆಸರೇ ಟಾಟಾ ಕಂಪನಿ-

ಎಸ್ ಬಿಐ ಬ್ಯಾಂಕ್ ವ್ಯವಸ್ಥಾಪಕ ಶರತ್ ಮಾತನಾಡಿ, ನಂಬಿಕೆ, ವಿಶ್ವಾಸಕ್ಕೆ ಮತ್ತೊಂದು ಹೆಸರೇ ಟಾಟಾ ಕಂಪನಿಯ ಉತ್ಪಾದನೆಗಳು, ಟಾಟಾ ನೆಕ್ಸಾನ್ ಇವಿ ಕಾರು ಸೇಪ್ಟಿಯಲ್ಲಿ 5 ಸ್ಟಾರ್ ರೇಟಿಂಗ್ ಹೊಂದಿದೆ. ನೀರು, ಬೆಂಕಿಯಿಂದ ಹೆಚ್ಚಿನ ರಕ್ಷಣೆಯನ್ನು ಇವಿ ಬ್ಯಾಟರಿಗೆ ಒದಗಿಸಲಾಗಿದೆ. ಒಂದು ವೇಳೆ ಭೀಕರ ಅಪಘಾತ ಸಂಭವಿಸುವಂತ ಸಂದರ್ಭದಲ್ಲೂ ಇವಿ ಬ್ಯಾಟರಿಯಿಂದ ಯಾವುದೇ ರೀತಿಯ ಅಪಾಯ ಬಾರದಂತೆ ಸಂಶೋಧಿಸಿ ರಕ್ಷಣೆ ನೀಡಲಾಗಿದೆ. ಟಾಟಾ ನೆಕ್ಸಾನ್ ಇವಿ ಕಾರು ಹೊಂದುತ್ತೇನೆಂದಾದರೆ ಅದೊಂದು ಘನತೆಯೇ ಸರಿ ಎಂದು ಹೇಳಿದರು.

ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕ ಮಲ್ಲಿಕಾರ್ಜುನ್, ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕಯೋಗೀಶ್ ಮಾತನಾಡಿ ಟಾಟಾ ನೆಕ್ಸಾನ್ ಇವಿ ಕಾರಿಗೆ ಅಳವಡಿಕೆ ಮಾಡಲಾಗಿರುವ ಬ್ಯಾಟರಿ ಸಾಮರ್ಥ್ಯ ಹೆಚ್ಚಿದೆ. ಸೀಟಿಂಗ್ ಸಾಮರ್ಥ್ಯ, ಕಾರ್ಯನಿರ್ವಹಣೆ, ಟಚ್ ಸ್ಕ್ರೀನ್, ಇಂಜಿನ್ ಸ್ಟಾರ್ಟ್, ಪವರ್ ವಿಂಡೋಸ್ ಹವಾಮಾನ ನಿಯಂತ್ರಣ ಇಂಜಿನ್ ವ್ಯವಸ್ಥೆ, ಪ್ಯಾಸೆಂಜರ್ ಏರ್ ಬ್ಯಾಗ್ ಮತ್ತಿತರ ಸೌಲಭ್ಯಗಳನ್ನು ಕಾರಿಗೆ ಅಳವಡಿಸಿರುವುದು ಉತ್ತಮ ಮಾದರಿಯಲ್ಲಿ ಬಣ್ಣಗಳಿಂದಲೂ ಇವಿ ಕಾರುಗಳು ಲಭ್ಯ ಇದೆ ಎಂದು ಹೇಳಿದರು.

ಟಾಟಾ ನೆಕ್ಸಾನ್ ಇವಿ ಕಾರು ಸೇರಿದಂತೆ ಯಾವುದೇ ರೀತಿಯ ಕಾರುಗಳಿಗೆ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಚಿತ್ರದುರ್ಗ ನಗರಸಭೆ ಸದಸ್ಯ ಸುರೇಶ್, ಡಾ.ಕಾರ್ತಿಕ್ ಸೇರಿದಂತೆ ಮತ್ತಿತರರು ಇದ್ದರು.

[t4b-ticker]

You May Also Like

More From Author

+ There are no comments

Add yours