ನಮ್ಮವರ  ಜೊತೆ  ಮಾತಾಡಿಕೊಂಡು ಬಾ ಅಂತಾರೆ ಪಿಡಿಓ 

 

 

 

 

ಗ್ರಾಮ ಪಂಚಾಯತಿಗಳಲ್ಲಿ  ಈ ಸ್ವತ್ತು ಹೆಸರಲ್ಲಿ ಹಣಕ್ಕೆ ಡಿಮ್ಯಾಂಡ್

ಚಿತ್ರದುರ್ಗ: ನಮ್ಮವರ ಜೊತೆ ಮಾತನಾಡಿಕೊಂಡು ಬನ್ನಿ, ಇಲ್ಲ ನಿಮ್ಮ‌ನ್ನ ಬಂದು ಭೇಟಿ ಮಾಡತ್ತಾರೆ, ಮಾತಡಿ ಮುಗಿಸಿದರೆ ನಿಮ್ಮ ಕೆಲಸ ಆಗುತ್ತೆ, ಒಂದು  ವಾರದಲ್ಲಿ ಕೊಡತ್ತಿನಿ ಅಂತರೇ ಪಿಡಿಓ ಗಳು, ಒಂದು ವೇಳೆ ಮಾತುಕತೆ ನಡೆದಿಲ್ಲ ಅಂದರೆ ಫೈಲ್ ಗೆ ರಿಸಿವ್ ಸಹಿ ಹಾಕದೇ ಸುಮ್ಮನೆ ಮೂಲೆಯಲ್ಲಿ ಇಟ್ಟರೆ ಮುಗಿತು‌ ಫೈಲ್  ನಾವು ಮತ್ತೆ ಹೋದಾಗ ಮೇಲೆ ಬರುತ್ತೆ   , ಕೇಳಿದರೆ ಲಿಗಲ್ ಆಗಬೇಕು. ನಾವು ಇನ್ನು ಫೈಲ್ ನೋಡಿಲ್ಲ,  ಮೀಟಿಂಗ್ ಇದ್ದವು ಅಂತ ಕಥೆ ಹೇಳಿ ಸಾರ್ವಜನಿಕರನ್ನು ಅಲೆದಾಡಿಸುವ ಕೆಲಸ ಹಲವು ಗ್ರಾಮ‌ ಪಂಚಾಯತಿಗಳಲ್ಲಿ  ಗ್ರಾಮ‌ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು  ( PDO) ಮತ್ತು ಸಿಬ್ಬಂದಿಗಳು  ಯಾವ ಅಡ್ಡಿ  ಆತಂಕವಿಲ್ಲದೇ ಹಣ ವಸೂಲಿ ಮಾಡುತ್ತಿರುವ ಘಟನೆ ನಿರಂತರವಾಗಿ ನಡೆಯುತ್ತಿದ್ದರು ಮೇಲಾಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಬಡವರು, ಕೂಲಿ ಕಾರ್ಮಿಕರು, ವ್ಯಾಪಾರಿಗಳು  ಸೇರಿ ಎಲ್ಲಾ ಜನರಿಗೆ  ಸಮಯ ವ್ಯರ್ಥ ಹಾಗಬಾರ್ದು ಎಂದು ಈ  ಸ್ವತ್ತು ಯೋಜನೆಯಲ್ಲಿ  ಖಾತೆ ಬದಲಾವಣೆ, ಆಸ್ತಿ‌ ನೊಂದಣಿ, ನಿವೇಶನ ರಿಜಿಸ್ಟರ್ ಸೇರಿ ಹಲವು ಕೆಲಸಗಳನ್ನು ಗ್ರಾಮ ಪಂಚಾಯತಿ ಹಂತದಲ್ಲಿ  ಪಿಡಿಓ‌ ಮತ್ತು ಸಿಬ್ಬಂದಿಗಳಿಗೆ ವಹಿಸಿ ಗ್ರಾಮೀಣ ಭಾಗದ ಜನರ ಸುಧಾರಣೆ ‌ಮಾಡುವ ಕೆಲಸಕ್ಕೆ‌ ಸರ್ಕಾರ ಮುಂದಾಗಿದೆ.
ರಾಜ್ಯ ಸರ್ಕಾರ ಭ್ರಷ್ಟಾಚಾರ ಮುಕ್ತ ಆಡಳಿತ  ದೃಷ್ಟಿಯಿಂದ  ಅನ್ ಲೈನ್ ಅರ್ಜಿ ಸಲ್ಲಿಸಿದ ಇಂತಿಷ್ಟು ದಿನಗಳಲ್ಲಿ  ಕೆಲಸ‌ ಮುಗಿಸಬೇಕು ಎಂದು  ಸರ್ಕಾರಿ ಇಲಾಖೆಗಳಿಗೆ ಆದೇಶ ಇದ್ದರು ಸಹ ನಿಯಮ  ಗಾಳಿಗೆ ತೂರಿ ವಸೂಲಿ ಕಾರ್ಯ ಎಗ್ಗಿಲ್ಲದೇ ನಡೆಯುತ್ತಿದ್ದು ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ  ದಿನದಿಂದ ದಿನಕ್ಕೆ  ಲೋಕಯುಕ್ತ ದಾಳಿಗಳಲ್ಲಿ ಹಲವು ಪಿಡಿಓ‌ಗಳು ಲೋಕಯುಕ್ತ ಬಲೆಗೆ ಸಿಲುಕಿದರು ಸಹ ಪಿಡಿಓ‌ಗಳು ಮಾತ್ರ ಹಣ ವಸೂಲಿಗೆ ತಮ್ಮ ಕೆಳ‌ಹಂತದ ಸಿಬ್ಬಂದಿಗಳನ್ನು ನೇಮಿಸಿಕೊಂಡು ಭರ್ಜರಿ ವಸೂಲಿ ಮಾಡುತ್ತಿದ್ದು ಸರ್ಕಾರ ಈ ಸ್ವತ್ತು ಮೂಲಕ‌ ಖಾತೆ ಬದಲಾವಣೆಗೆ 30 ದಿ‌ನಗಳಲ್ಲಿ ಅರ್ಜಿ ಪರಿಶೀಲನೆ ನಡೆಸಿ ಯಾವುದೇ ತಕಾರರು ಬರದಿದ್ದಂತಹ ಸಂದರ್ಭದಲ್ಲಿ  ಈ ಸ್ವತ್ತು ವಿತರಣೆ ಮಾಡಲು ಅವಕಾಶ ಇದ್ದರು ಸಹ ಡೀಲ್ ಕುದುರಲಿಲ್ಲ ಅಂದರೆ ಈ ಸ್ವತ್ತು ಇಲ್ಲ  ಎಂಬ ಮನಸ್ಥಿತಿಯಲ್ಲಿ ಇದ್ದು ಏಕೆ ಇಂತಹ ಧೋರಣೆ ಅನುಸರಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ.
ಸರ್ಕಾರಿ ಸಂಬಳ ಸೌಲಭ್ಯ ಪಡೆದು ನೆಮ್ಮದಿ ಬದುಕು ನಡೆಸುವ ಬದಲು ಭ್ರಷ್ಟಾಚಾರಕ್ಕೆ ಇಳಿದು ನೇರವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಲೋಕಯುಕ್ತ ಬಲೆಗೆ ಹಲವು ಪಿಡಿಓ ಗಳು ಹಣ ವಸೂಲಿ ಸಂದರ್ಭದಲ್ಲಿ ಸಿಕ್ಕಿ ಬಿದ್ದರು ಸಹ ಗ್ರಾಮ ಪಂಚಾಯತಿ  ಅಭಿವೃದ್ಧಿಗೆ ಆಸಕ್ತಿ ತೋರದೆ  ಅಧಿಕಾರಿಗಳು ಸ್ವಯಂ ಅಭಿವೃದ್ಧಿಗೆ ನಿಂತಿದ್ದು  ಗ್ರಾಮೀಣ ಭಾಗದ ಅಭಿವೃದ್ಧಿಗೆ ದೊಡ್ಡ ಹಿನ್ನಡೆಯಾಗಿದೆ.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ  ತಮ್ಮ ಕೆಲಸದ ಒಂದು ಭಾಗವಾದ ಈ‌ ಸ್ವತ್ತು ವಿತರಣೆಯನ್ನು ಮನೆ ಮನೆಗೆ ತೆರಳಿ ಪಿಡಿಓ‌ಗಳು ಅರ್ಜಿ ಸಲ್ಲಿಸಿದ ನಂತಹ ಸರ್ಕಾರ ನಿಗದಿ‌ಪಡಿಸಿದ ದರವನ್ನು ಗ್ರಾಮ ಪಂಚಾಯತಿ ಕಟ್ಟಿದರೆ ಯಾವುದೇ ತಕರಾರು ಇಲ್ಲದ ಸಂದರ್ಭದಲ್ಲಿ ಅವರ ಮನೆಗೆ ಪೋಸ್ಟ್ ಅಥವಾ ಸಿಬ್ಬಂದಿ‌ ಮೂಲಕ‌ ಮನೆಗೆ ತಲುಪಿಸಬೇಕು. ಆದರೆ ಜನರೇ ಬಂದು ಅರ್ಜಿಗಳನ್ನು ನೀಡಿದರು  ಪೇಮೆಂಟ್ ಆಗದೇ  ಈ‌ ಸ್ವತ್ತುಗಳು ವಿತರಣೆ ಆಗುತ್ತಿಲ್ಲ. ರಾಜ್ಯದ ಹಲವು ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಮನೆ ಮನೆಗೆ ಈ ಸ್ವತ್ತು ಒದಗಿಸುವ ಕೆಲಸ ಮಾಡುತ್ತಿದ್ದರು ಚಿತ್ರದುರ್ಗ ಜಿಲ್ಲೆಯಲ್ಲಿ ಮಾತ್ರ ಬೆರಳೆಣಿಕೆಯಷ್ಟು ಈ ಸ್ವತ್ತುಗಳನನ್ನು ಜನಸಂಪರ್ಕ ಸಭೆ , ಜನತಾ ದರ್ಶನ ಸಂದರ್ಭದಲ್ಲಿ ಸಿಇಒ ಅಥವಾ ಜಿಲ್ಲಾಧಿಕಾರಿ ಮೂಲಕ‌ ಕೊಡಿಸಿ  ಫೋಟೋ ತೆಗೆದುಕೊಂಡರೇ ಮುಗಿತು ಎಂದುಕೊಂಡಿರುವ ಪಿಡಿಓ ಗಳು ನಿಯಮ ಪಾಲಿಸುತ್ತಿಲ್ಲ.
ಗ್ರಾಮ ಪಂಚಾಯತಿ ಭೇಟಿಗೆ ಇಓ ಗಳು ಹಿಂದೇಟು
ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ‌ ಅಧಿಕಾರಿಗಳು ಗ್ರಾಮ ಪಂಚಾಯತಿಗಳಿಗೆ ತೆರಳಿ  ಸಭೆಗಳನ್ನು ಮಾಡುತ್ತಿಲ್ಲ. ಅಲ್ಲೊಂದು ಇಲ್ಲೊಂದು ಸಭೆ ಮಾಡಿ ಸುಮ್ಮನೆ ಆಗುತ್ತಿದ್ದಾರೆ. ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ನಿಯಂತ್ರಣದಲ್ಲಿ 35 ರಿಂದ 4೦ ಗ್ರಾಮ ಪಂಚಾಯತಿ ಬರುತ್ತಾವೆ. ತಿಂಗಳಿಗೆ 10 ದಿನ ಗ್ರಾಮ ಪಂಚಾಯತಿ ಭೇಟಿಗೆ ಸಮಯ ವ್ಯಯ ಮಾಡಿದರೆ ಖಂಡಿತವಾಗಿ ಗ್ರಾಮ ಪಂಚಾಯತಿಗಳ  ಸುಧಾರಣೆ ಆಗುತ್ತವೆ. ಫಿಲ್ಡ್ ಗಿಳಿದು  ಕೆಲಸ ಮಾಡದೇ ಆಫೀಸ್‌‌ ಕೆಲಸಕ್ಕೆ ಸಿಮೀತವಾಗಿದ್ದಾರೆ.  ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ‌ ಅಧಿಕಾರಿಗಳು  ಗ್ರಾಮ ಪಂಚಾಯತಿ ಭೇಟಿಯಿಂದ ಗ್ರಾಮ ಪಂಚಾಯತಿಗಳಲ್ಲಿ  ಪರಿಣಾಮಕಾರಿ‌ ಕೆಲಸದ ಜೊತೆ ಪಿಡಿಓ ಗಳಿಗೆ ಬಿಸಿ ಮುಟ್ಟಿಸಿದಂತೆ ಆಗುತ್ತದೆ. ಇನ್ನಾದರೂ ಬದಲಾವಣೆ ಮಾಡಿಕೊಂಡು ಕಾಲಮಿತಿಯೊಳಗೆ ಸರ್ಕಾರದ ಈ ಸ್ವತ್ತು ಸೇರಿ ಸರ್ಕಾರದ ಕಾರ್ಯಕ್ರಮಗಳನ್ನು ಹಣವಿಲ್ಲದೇ ಜನರಿಗೆ ಮುಟ್ಟಿಸುವ ಕೆಲಸ ಮಾಡಲಿ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿಗಳಲ್ಲಿ ಒಂದಿಷ್ಟು ಎಚ್ಚರ ವಹಿಸಿ ಬಡ ಜನರ ಕೆಲಸ ಕಾರ್ಯ ಮಾಡುತ್ತಾರೋ ಅಥವಾ ತಮ್ಮ ಹಣ ವಸೂಲಿ ಕಾಯಕ ಮುಂದುವರಸುತ್ತಾರೋ ಕಾದು ನೋಡೋಣ.

ಹೈಲೆಟ್ಸ್

* ಈ‌ ಸ್ವತ್ತು ವಿತರಣೆಗೆ ಹಣ ಡಿಮ್ಯಾಂಡ್ 
* ಪಿಡಿಓ‌ ಹೇಳಿದ ಸಿಬ್ಬಂದಿ ಜೊತೆ ಹಣದ ಮಾತುಕತೆ ನಂತರ ಈ ಸ್ವತ್ತು ವಿತರಣೆ 
* ಸರ್ಕಾರದ ನಿಯಮ ಗಾಳಿಗೆ ತೂರಿ ಹಣ ವಸೂಲಿ.
* ದಾಖಲಾತಿ ಪಡೆದು  ಟಾಪಲ್ ಪಡೆದು ದಿನಾಂಕ ಸಹ ಹಾಕದೇ ಜಾಣ ನಡೆ 
*ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ‌ ಅಧಿಕಾರಿ ಮಾತಿಗೂ ಕಿಮ್ಮತಿಲ್ಲ. 
* ತಾಲೂಕು ಪಂಚಾಯತಿ ನಿಯಂತ್ರಣ ತಪ್ಪಿ ಹಲವು ಪಿಡಿಓ ಗಳು ಹಣ ವಸೂಲಿ
* ಲೋಕಯುಕ್ತ ಬಲೆಗೆ ನಿರಂತವಾಗಿ ಶಿಕ್ಷೆ ಅನುಭವಿಸುತ್ತಿದ್ದರು ಎಚ್ಚೆತ್ತುಕೊಳ್ಳದೇ ಹಣ ವಸೂಲಿ.
* ಜಿ.ಪಂ. ಸಿಇಒ ಅವರಿಂದ ಬೇಕಿದೆ ಸೂಕ್ತ ಮಾರ್ಗದರ್ಶನ 
* ಕಮರ್ಷಿಯಲ್ ಖಾತೆ ಬದಲಾವಣೆಗೆ  10 ರಿಂದ 20 ಸಾವಿರ ಲಂಚ ವಸೂಲಿ 

ಬಾಕ್ಸ್

ಚಿತ್ರದುರ್ಗ ಜಿಲ್ಲೆಯಲ್ಲಿ ಹಣಕ್ಕೆ ಬೇಡಿಕೆ ಇಟ್ಟು ಎರಡು ವರ್ಷಗಳಿಂದ  ಲೋಕಯುಕ್ತ ಬಲೆಗೆ ಬಿದ್ದ ಗ್ರಾಮ ಪಂಚಾಯತಿ ಪಿಡಿಓ‌ಗಳ ಗ್ರಾ‌ಮ ಪಂಚಾಯಿತಿಗಳ ವಿವರ
ಚಿತ್ರದುರ್ಗ ತಾಲೂಕಿನ 
1. ಭರಮಸಾಗರ ಗ್ರಾಮ ಪಂಚಾಯತಿ
2. ಮದಕರಿಪುರ  ಗ್ರಾಮ ಪಂಚಾಯತಿ
3. ಬೆಳಘಟ್ಟ ಗ್ರಾಮ ಪಂಚಾಯತಿ 
ಹೊಳಲ್ಕೆರೆ ತಾಲೂಕಿನ 
1.ಅಂದನೂರು ಗ್ರಾಮ ಪಂಚಾಯತಿ 
ಹೊಸದುರ್ಗ ತಾಲೂಕಿನ 
1.ಕುರುಬರಹಳ್ಳಿ ಗ್ರಾಮ ಪಂಚಾಯಿತಿ
2.ಜಾನಕಲ್ಲು 
ಬಾಕ್ಸ್: 
ಜಿಲ್ಲಾ ಕೇಂದ್ರ  ಮತ್ತು ತಾಲೂಕು ಕೇಂದ್ರ ಸುತ್ತಮುತ್ತಲಿನ ಗ್ರಾಮ ಪಂಚಾಯತಿಗಳಲ್ಲಿ ಹಣಕ್ಕೆ    ಅತಿ ಹೆಚ್ಚು  ಡಿಮ್ಯಾಂಡ್ ಪ್ರಾರಂಭಿಸಿದ್ದಾರೆ. ನಗರಗಳು ಬೆಳೆಯುತ್ತಿರುವುದಿಂದ ಕೆಲವು ಗ್ರಾಮ ಪಂಚಾಯತಿ ನಗರದ ಪ್ರದೇಶಗಳು ಒಳಪಡುತ್ತಿರುವುದು ಆ ಪಂಚಾಯಿತಿಗಳಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ‌ ನಡುವೆ   ಪೈಪೋಟಿ ಸಹ ಇದೆ..
[t4b-ticker]

You May Also Like

More From Author

+ There are no comments

Add yours