ಉತ್ತಮ ಸೇವೆ ನೀಡುವುದು ಸುಕೋ ಬ್ಯಾಂಕ್ ಉದ್ದೇಶ: ಶ್ರೀನಿವಾಸ್ ಶಾಖಾಪುರ

 

 

 

 

ಚಿತ್ರದುರ್ಗ:  ಸ್ಪರ್ಧಾ ಜಗತ್ತಿನಲ್ಲಿ ಗ್ರಾಹಕರ ಗುಣಮಟ್ಟದ ಉತ್ತಮ ಸೇವೆ ನೀಡುವುದು ಸುಕೋ ಬ್ಯಾಂಕ್ ಮೂಲ ಉದ್ದೇಶ ಎಂದು ಸುಕೋ ಬ್ಯಾಂಕ್ ಕ್ಲಸ್ಟರ್ ಮ್ಯಾನೇಜರ್ ಶ್ರೀ ಶ್ರೀನಿವಾಸ್ ಶಾಖಾಪುರ ಹೇಳಿದರು.

 

 

ನಗರದ ತುರುವನೂರು ರಸ್ತೆಯ ಸುಕೋ ಬ್ಯಾಂಕಿನಲ್ಲಿ ಗುರುವಾರ ನಡೆದ ಏಳನೇ ವರ್ಷದ ವಾರ್ಷಿಕೊತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಬ್ಯಾಂಕ್ ನಗರಕ್ಕೆ ಸೀಮಿತವಾಗಿಲ್ಲ, ಗ್ರಾಮಾಂತರ ಪ್ರದೇಶಗಳಿಗೆ ಸಿಬ್ಬಂದಿ ಭೇಟಿ ನೀಡಿದಾಗ ಸೂಕ್ತ ದಾಖಲೆ ಒದಗಿಸಿದರೆ ಸ್ಥಳದಲ್ಲಿಯೇ ಖಾತೆ ತೆರೆದು ಪಾಸ್ ಪುಸ್ತಕ ನೀಡಲಾಗುವುದು, ನಮ್ಮಲ್ಲಿ ಎಲ್ಲಾ ರೀತಿಯ ಸಾಲ ಆಸ್ಪತ್ರೆ ನಿರ್ಮಾಣಕ್ಕೆ ಸಣ್ಣ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ನೀಡಲಾಗುವುದು, ಇದರಿಂದ ರೈತಾಪಿ ವರ್ಗದವರು ಮತ್ತು ಬಿದಿ ವ್ಯಾಪಾರಿಗಳು ಆ ದಿನದ ದುಡಿಯುವ ಹಣವನ್ನು ಸಂಜೆ ಖಾತೆಗೆ ಹಾಕಲು ಅನುಕೂಲಾಗುತ್ತದೆ ಎಂದರು. ಚಿತ್ರದುರ್ಗಶಾಖೆ ಆರಂಭಗೊಂಡ ಏಳು ವರ್ಷಗಳಲ್ಲಿ 18 ಕೋಟಿ ರೂ ಠೇವಣಿ ಸಂಗ್ರಹ ಮಾಡಿದೆ.
25 ಕೋಟಿ ರೂ. ಸಾಲ ನೀಡುವ ಮೂಲಕ ಒಟ್ಟು 43 ಕೋಟಿ ರೂ. ವ್ಯವಹಾರ ದಾಖಲಿಸಿದೆ. ಈ ಸಾಧನೆಗೆ ಚಿತ್ರದುರ್ಗ ಜನತೆಯ ಸಹಕಾರ ಹಾಗು ಪ್ರೋತ್ಸಹವೇ ಕಾರಣ ಎಂದು ಸಂತಸ ವ್ಯಕ್ತಪಡಿಸಿದರು. ದೇಶದ ಸ್ವಂತ IFSC ಕೋಡ್ ಪಡೆದ ಮೊದಲ ಸಹಕಾರಿ ಬ್ಯಾಂಕ್ ಅಲ್ಲದೆ ಎಲ್ಲ ರೀತಿಯ ಡಿಜಿಟಲ್ ಹಾಗು ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತುದೆ, ಸಣ್ಣ ಹಾಗು ಮಾಧ್ಯಮ ರೀತಿಯ ಎಲ್ಲಾ ರೀತಿ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ನಮ್ಮಲ್ಲಿ ಗ್ರಾಹಕಾರಿಗೆ ಅನುಗುಣವಾಗಿ ವಿಮೆಯನ್ನು ಮಾಡಿಸಿ ಕೊಡಲಾಗುವುದು
ಸುಕೋ ಬ್ಯಾಂಕಿನ ಶಾಖ ವ್ಯವಸ್ಥಾಪಕರು ಮಧುಚಂದ್ರ ,ಹಾಲೇಶ, ಮಂಜುನಾಥ , ,ಸಂಜನಾ ,ಶರಣಪ್ಪ, ಕುಮಾರ ,ಮಿಥುನ್ ಹಾಗು ನಾಗರಾಜ್ ಇದ್ದರು.

[t4b-ticker]

You May Also Like

More From Author

+ There are no comments

Add yours