ಎಸ್‍ಎಸ್‍ಎಲ್‍ಸಿ ಪರೀಕ್ಷೆ: ಶ್ರೀ ಹೋಚಿ ಬೋರಯ್ಯ ಸ್ಮಾರಕ ವಸತಿ ಪ್ರೌಢಶಾಲೆಗೆ ಶೇ.100 ರಷ್ಟು ಫಲಿತಾಂಶ

 

 

 

 

ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕಿನ ಬಚ್ಚಬೋರನಹಟ್ಟಿ ಗ್ರಾಮದ ಶ್ರೀ ಹೋಚಿ ಬೋರಯ್ಯ ಸ್ಮಾರಕ ವಸತಿ ಪ್ರೌಢಶಾಲೆಗೆ 2021-22ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಲಭಿಸಿದೆ.
20 ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು ಶ್ರೇಣಿಯಲ್ಲಿ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿನಿ ಸಂಜನಾ ಟಿ 625ಕ್ಕೆ 610 ಅಂಕಗಳನ್ನು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಹೋ.ಚಿ.ಬೋರಯ್ಯ ಸ್ಮಾರಕ ವಸತಿ ಪ್ರೌಢಶಾಲೆಯ ಕಾರ್ಯದರ್ಶಿ ಕೆ.ಸಣ್ಣ ಪಾಲಯ್ಯ ಹಾಗೂ ಮುಖ್ಯ ಶಿಕ್ಷಕ ಸಿ.ಜಯಣ್ಣ ಅಭಿನಂದನೆ ಸಲ್ಲಿಸಿದ್ದಾರೆ.
(ಫೋಟೋ ವಿವರ; ವಿದ್ಯಾರ್ಥಿನಿ ಸಂಜನಾ ಟಿ)
========

 

 

[t4b-ticker]

You May Also Like

More From Author

+ There are no comments

Add yours