ಪ್ರಪಂಚದಲ್ಲಿಯೇ ಧಾರ್ಮಿಕ ನೆಲೆಗಟ್ಟನ್ನು ಶ್ರೀಮಂತಗೊಳಿಸಿದ ಕ್ಷೇತ್ರ ಶ್ರೀ ಮಂತ್ರಾಲಯ ಮಠ:ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ: ಪ್ರಪಂಚದಲ್ಲಿಯೇ ಧಾರ್ಮಿಕ ನೆಲೆಗಟ್ಟನ್ನು ಶ್ರೀಮಂತಗೊಳಿಸಿದ ಕ್ಷೇತ್ರ ಶ್ರೀ ಮಂತ್ರಾಲಯ ಮಠ ದೇಶದಲ್ಲಿ ವೈವಿಧ್ಯತೆಯ ಜಾತಿ ಆಚಾರ-ವಿಚಾರ ಮತ್ತು ಭಾಷೆಗಳಿಂದ ಕೂಡಿದ್ದರು ಇವೆಲ್ಲವನ್ನು ಒಟ್ಟುಗೂಡಿಸಿ ಧಾರ್ಮಿಕತೆಗೆ ಒಂದು ಹೊಸ ಸ್ಪರ್ಶ ನೀಡಿ ಸಾಮರಸ್ಯಕ್ಕೆ ನಾಂದಿ ಹಾಡಿದ ಮಂತ್ರಾಲಯ ಶ್ರೀಗಳ ಕೊಡುಗೆ ಅಪಾರ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.

ಇಂದು ಚಳ್ಳಕೆರೆ ನಗರದಲ್ಲಿ ಗುರು ಸಾರ್ವಭೌಮ ರಾಘವೇಂದ್ರ ಶ್ರೀಗಳ ಮತ್ತು ಪುಣ್ಯ ದೇವರ ಪ್ರತಿಷ್ಠಾಪನೆ ಯಾಗುತ್ತಿರುವುದು ಚಳ್ಳಕೆರೆ ಜನತೆ ಸೌಭಾಗ್ಯ ವಾಗಿದ್ದು ಚಳ್ಳಕೆರೆ ನಗರವು ವಿಜ್ಞಾನ ಮತ್ತು ಸಾಹಿತ್ಯ ನಗರಿ ಜೊತೆಗೆ ಒಂದು ಧಾರ್ಮಿಕ ನಗರಿ ಆಗಬೇಕೆನ್ನುವುದು ಮಹದಾಸೆ ಇದಕ್ಕೆ ಪೂರಕವಾಗಿ ಮಂತ್ರಾಲಯ ಶ್ರೀಗಳು ಮತ್ತು ಶಾಸಕರು ಚಳ್ಳಕೆರೆ ನಗರದಲ್ಲಿ ಒಂದು ಬೃಹತ್ ವೆಂಕಟೇಶ್ವರ ದೇವಸ್ಥಾನವನ್ನು ಕೂಡ ಪ್ರತಿಷ್ಠಾಪಿಸಲು ತಹಸೀಲ್ದಾರ್ ಎನ್ ರಘುಮೂರ್ತಿ ಅವರು ಮನವಿ ಮಾಡಿದರು.

 

 

ಇಂದು ವಾಲ್ಮೀಕಿ ನಗರದಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ಆಗ ಮುಖ್ಯಪ್ರಾಣದೇವರ ಪ್ರತಿಷ್ಠಾಪನ ಕಾರ್ಯದಲ್ಲಿ ಭಾಗಿಯಾಗಿ ಮಾತನಾಡಿದ  ಚಳ್ಳಕೆರೆ ಶಾಸಕರಾದ ಟಿ. ರಘುಮೂರ್ತಿ ಮಾತನಾಡಿ ಮಂತ್ರಾಲಯ ಶ್ರೀಗಳ ಮತ್ತು ಶ್ರೀ ಗುರುರಾಘವೇಂದ್ರರ ಮಹಿಮೆ ಮತ್ತು ಪ್ರಭಾವ ಬಹಳವಾಗಿತ್ತು ಈ ಮಠಕ್ಕೆ ನಿರಂತರವಾಗಿ ನಾನು ಹೋಗಿ ಬರುತ್ತೇನೆ ಚಳ್ಳಕೆರೆ ನಗರದಲ್ಲಿ ಇಂಥ ಒಂದು ಬೃಹತ್ ಮಠವನ್ನು ನಿರ್ಮಾಣ ಮಾಡಿರುವುದು ತುಂಬಾ ಸಂತಸ ತಂದಿದೆ ಕಳೆದ ಹತ್ತು ವರ್ಷಗಳಿಂದ ಈ ಮಠದ ನಿರ್ಮಾಣವಾಗುತ್ತಿದ್ದು ಈ ಮಠದ ನಿರ್ಮಾಣಕ್ಕೆ ಸಹಕರಿಸಿದ ಎಲ್ಲ ದಾನಿಗಳನ್ನು ಅಭಿನಂದಿಸಿದರು ಮುಂದಿನ ದಿನಗಳಲ್ಲಿ ಭಕ್ತರ ಆಶೋತ್ತರಗಳನ್ನು ಗೌರವಿಸಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದಾಗಿ ಹೇಳಿದರು.

ಮಂತ್ರಾಲಯ ಶ್ರೀಗಳು ಮಾತನಾಡಿ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ಎನ್ನುವ ಶ್ಲೋಕದ ಪೂರ್ಣಪ್ರಮಾಣದ ವ್ಯಾಖ್ಯಾನ ಮಾಡಿದರು ಚಳ್ಳಕೆರೆ ನಗರದಲ್ಲಿ ಸಾಮರಸ್ಯ ಪ್ರತಿಷ್ಠಾಪಿಸಿದ್ದು ಇಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಇದಕ್ಕೆ ಚಳ್ಳಕೆರೆ ನಗರದ ಜನರು ಸಾಕ್ಷಿ ಭೂತ ರಾಗಿದ್ದಾರೆ ಕ್ಷೇತ್ರದ ಶಾಸಕರು ಮಾಡಿರುವಂತ ನೀರಾವರಿ ಶೈಕ್ಷಣಿಕ ಮತ್ತು ಮೂಲಭೂತ ಕೆಲಸಗಳು ಇವತ್ತು ನಮ್ಮ ಕಣ್ಮುಂದಿವೆ ಇಂಥ ನಗರದ ಸಾಮರಸ್ಯದ ಬದುಕು ಅಗತ್ಯವಾಗಿದ್ದು ಧಾರ್ಮಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕೆಂದು ಆಶೀರ್ವಚನ ನೀಡಿದರು.

[t4b-ticker]

You May Also Like

More From Author

+ There are no comments

Add yours