ರಾಜ್ಯ ಮಟ್ಟದ ಅಂದರ ಕ್ರೀಡಾ ಪ್ರಾಧಿಕಾರ ರಚನೆಗೆ ಸಹಕಾರ:ಸೈಟ್ ಬಾಬು.

 

 

 

 

ಚಿತ್ರದುರ್ಗ ೦೬  
ರಾಜ್ಯ ಮಟ್ಟದ ಅಂದರ ಕ್ರೀಡಾ ಪ್ರಾಧಿಕಾರ ರಚನೆಗೆ ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ಸೈಟ್ ಬಾಬು  ತಿಳಿಸಿದರು .
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ   ಆಯೋಜಿಸಿದ್ದ ತೀಕ್ಷ್ಣ ಅಂಗವಿಕಲರ   ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿ ಚಿತ್ರದುರ್ಗದ ಈ  ಕ್ರೀಡಾ ಕೂಟ ರಾಜ್ಯ ,ರಾಷ್ಟ್ರಮಟ್ಟಕ್ಕೆ ಉತ್ತಮ ಸಂದೇಶ ಹೋಗಲಿ ಮಾಧ್ಯಮಗಳು ಇವರ ಕ್ರೀಡಾ ಸಕ್ತಿ ಪ್ರೋತ್ಸಾಹವಾಗಿ ಬೆಂಬಲಿಸಿ  ಅಂದರ  ಕ್ರೀಡಾ ಕೂಟ ಅಂತರ್ ರಾಷ್ಟ್ರೀಯ  ಮಟ್ಟದಲ್ಲಿ  ಪ್ರಜ್ವಲಿಸಲಿ ಇವರೆಲ್ಲರಿಗೆ ಅಂತರ್ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಲಾಗುವುದು. ಎಂದರು
ಚಿತ್ರದುರ್ಗದ ರಾಮಕೃಷ್ಣಾಶ್ರಮದ ಬ್ರಹ್ಮನಿಷ್ಠಾನಂದ ಸ್ವಾಮಿಜೀ ಮಾತನಾಡಿ ರಾಜ್ಯ ರಾಷ್ಟ್ರದ ಮಟ್ಟದಲ್ಲಿ ಚಿನ್ನದ ಪದಕ  ಆಟಗಾರರು ಉತ್ತಮ ಸಾಧನೆ ಮಾಡಿದವರು ಇದ್ದಾರೇ ಮತ್ತು ಐಎಎಸ್ ಅಧಿಕಾರಿಗಳಾಗಿ ಕಾರ್ಯನಿರ್ವಹಿದ್ದಾರೆ ಎಂದರು. 
ಪತ್ರಕರ್ತರ  ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ದಿನೇಶ್ ಗೌಡಗೆರೆ ಮಾತನಾಡಿ  ಅಂದರು ತಮ್ಮ ಬದುಕಿನ ಬಂಡಿ ನಡೆಸುವಲ್ಲಿ ತೊಳಲಾಟ ನಡೆಸುತ್ತಿರುವ ಸಂದರ್ಭದಲ್ಲಿ ಅನೇಕ ಕ್ರೀಡೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳಿಸಿ  ಕ್ರೀಡಾಸಕ್ತರ ಗಮನ ಸೆಳೆಯುವಂತಾಗಿದೆ  ಪ್ರಾಧಿಕಾರ ರಚನೆ ಕಾರ್ಯಕ್ಕೆ  ಸಹಕಾರ ನೀಡಲು ಮುಂದೆ ಬಂದಿರುವ ಸೈಟ್ ಬಾಬುರವರ ಕಾರ್ಯಕ್ಕೆ ಬೆಂಬಲ ಸೂಚಿಸುವುದಾಗಿ  ತಿಳಿಸಿದರು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೈಶಾಲಿ ಮಾತನಾಡಿದರು ತೀಕ್ಷ್ಣ ಅಂದರ ಪುನಃಶ್ಚೇತನ ಸಂಸ್ಥೆ ಅದ್ಯಕ್ಷೆ ಕೌಸಲ್ಯ ಶ್ರೀನಿವಾಸ್, ಕಾರ್ಯದರ್ಶಿ  ಡಿ..ಎನ್.ಮಣಿಕಂಠ ವಾಲಿಬಾಲ್ ಕೋಚ್ ತಿಮ್ಮಯ್ಯ ಚಿಕ್ಕಮಗಳೂರು ಉಪಸ್ಥಿತರಿದ್ದರು
ತೀರ್ಪುಗಾರರಾಗಿ ಪಂದ್ಯಾವಳಿಯಲ್ಲಿ ತಿಮ್ಮಯ್ಯ ಚಿಕ್ಕಮಗಳೂರು ನಿರ್ವಹಿಸಿದರು ಪಂದ್ಯಾವಳಿ ಆರಂಭಿಕ  ಪಂದ್ಯವನ್ನು  ಚಿತ್ರದುರ್ಗದ ತೀಕ್ಷ್ಣ ಬೆಂಗಳೂರಿನ ವಿನ್ಯಾಸ ಎರಡು ತಂಡಗಳ ಮದ್ಯ ಆರಂಭವಾಗಿತ್ತು ಎರಡು ದಿನಗಳು ನಡೆಯುವ ಈ ಪಂದ್ಯಾವಳಿಯಲ್ಲಿ ಎರಡು ಗುಂಪುಗಳಲ್ಲಿ  ಆರು ಪಂದ್ಯಾವಳಿಗಳು ನಡೆಯುತ್ತಿದ್ದು  ರಾಜ್ಯದ ಬೆಂಗಳೂರಿನಿಂದ ಮೂರು ತಂಡ, ರಾಣಿಬೆನ್ನೂರು ಒಂದು ತಂಡ ಚಿತ್ರದುರ್ಗ ಎರಡು  ತಂಡಗಳು ಭಾಗವಹಿಸಿದ್ದವು.

 

 

[t4b-ticker]

You May Also Like

More From Author

+ There are no comments

Add yours